May 9, 2024

MALNAD TV

HEART OF COFFEE CITY

ವಿಕಲಚೇತನರಿಗೆ ಸಲಕರಣೆಗಳ ವಿತರಿಸಲು ಪೂರ್ವಭಾವಿ ತಪಾಸಣಾ ಶಿಬಿರ

1 min read

ಚಿಕ್ಕಮಗಳೂರು-ನಗರದ ಮಧುವನ ಲೇ ಔಟ್‍ನಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಅಂಗವಾಗಿ ಆರ್ಟಿಫೀಷಿಯಲ್ ಲಿಮ್ಬ್ಸ್ ಮ್ಯಾನುಫ್ಕ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಎಲ್‍ಐಎಂಸಿಒ) ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ವಿಕಲಚೇತನರಿಗೆ ಅವಶ್ಯಕ ಸಾಧನ ಸಲಕರಣೆಗಳ ಹಾಗೂ ಕೃತಕ ಕೈಕಾಲು ವಿತರಿಸಲು ಪೂರ್ವಭಾವಿ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮವನ್ನು ಶಾಸಕ ಸಿ.ಟಿ ರವಿ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಅಂಗವೈಕಲ್ಯದಿಂದ ಬಳಲುತ್ತಿರುವ 1039 ಫಲಾನುಭವಿಗಳನ್ನು ಗುರುತಿಸಲಾಗಿದ್ದು ಆ ಪೈಕಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 326, ಕಡೂರು 326, ತರೀಕೆರೆ 157, ಮೂಡಿಗೆರೆ 102, ಕೊಪ್ಪ 111, ಶೃಂಗೇರಿ 11, ಎನ್.ಆರ್.ಪುರದಲ್ಲಿ 11 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಕಲಚೇತನರಿಗೆ ಅವಶ್ಯಕ ಸಾಧನ ಸಲಕರಣೆ, ಹಾಗೂ ಕೃತಕ ಕೈ, ಕಾಲು ವಿತರಿಸಲು ನಿರ್ಧರಿಸಲಾಗಿದ್ದು ಏಪ್ರಿಲ್ 10 ರಂದು ನಗರದ ಎಐಟಿ ಕಾಲೇಜು ಆವರಣದಲ್ಲಿ ನಡೆಯುವ ಶಿಬಿರದಲ್ಲಿ ವಿತರಣೆ ಮಾಡಲಾಗುವುದು. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ವಿಕಲಚೇತನ 125 ಮಂದಿಗೆ ಕೃತಕ ಕಾಲು, 24 ಜನರಿಗೆ ಕೃತಕ ಕೈ, 128 ವೀಲ್‍ಚೇರ್, 73 ವಾಕಿಂಗ್ ಸ್ಟಿಕ್, 89 ಎಂಆರ್ ಕಿಟ್, 24 ಮಂದಿಗೆ ಇಯರ್ ಮಿಷನ್ ಸೇರಿದಂತೆ ಒಟ್ಟು ತಾಲ್ಲೂಕಿನ 326 ಮಂದಿಗೆ ಸಲಕರಣೆ ಹಾಗೂ ಕೃತಕ ಕೈ ಕಾಲು ಜೋಡಣೆ ಮಾಡಲಾಗುವುದು ಸಾರ್ವಜನಿಕರು ಇದರ ಸುದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಶಿಬಿರಗಳನ್ನು ಆಯೋಜಿಸಿ ಮೇ ಅಂತ್ಯದೊಳಗೆ ಎಲ್ಲಾ 1039 ಫಲಾನುಭವಿಗಳಿಗೂ ಪರಿಕರಗಳನ್ನು ವಿತರಿಸಲಾಗುವುದು. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ದೇಶದ ಪ್ರಧಾನ ಮಂತ್ರಿಗಳ ಕನಸು ಆ ನಿಟ್ಟಿನಲ್ಲಿ ಪ್ರೇರಣೆ ಪಡೆದು ಜಿಲ್ಲಾಡಳಿತದ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಲಯನ್ಸ್ ಕ್ಲಬ್ ಶಶಿಪ್ರಸಾದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಲಯನ್ಸ್ ಕ್ಲಬ್‍ನ ಅಧ್ಯಕ್ಷ ವೆಂಕಟೇಶ್, ಎಎಲ್‍ಐಎಂಸಿಒದ ನಿತೀಶ್‍ಕುಮಾರ್, ಹಾಗೂ ಚಿಕ್ಕಮಗಳೂರು ಸಿಡಿಪಿಒ ಚರಣ್‍ರಾಜ್ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!