May 5, 2024

MALNAD TV

HEART OF COFFEE CITY

ಸರ್ಕಾರಿ ಲಾಂಛನ ಹಾಕಿಕೊಂಡ ಪ್ರವಾಸಕ್ಕೆ ಬಂದ ಗ್ರಾ.ಪಂ ಅಧ್ಯಕ್ಷ

1 min read

ಕೊಟ್ಟಿಗೆಹಾರ:ಗ್ರಾ.ಪಂ ಅಧ್ಯಕ್ಷನೊಬ್ಬ ಸರ್ಕಾರಿ ಲಾಂಛನವನ್ನು ತನ್ನ ವಾಹನಕ್ಕೆ ಹಾಕಿಕೊಂಡು ಪ್ರವಾಸಕ್ಕೆ ಬಂದಿರುವ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರು ಎಂಬ ನಾಮಫಲಕ ಮತ್ತು ಸರ್ಕಾರದ ಲಾಂಛನವನ್ನು ಹಾಕಿಕೊಂಡು ಕೊಟ್ಟಿಗೆಹಾರ ಮಾರ್ಗವಾಗಿ ಹೊರನಾಡಿಗೆ ಸಾಗುವ ಮಾರ್ಗ ಮದ್ಯೆ ಕೊಟ್ಟಿಗೆಹಾರದಲ್ಲಿ ಈ ವಾಹನ ಕಂಡಿದ್ದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.ವಾಹನದ ಹಿಂಬದಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಳೆಬೀಡು ಹುಣಸೂರು ತಾಲ್ಲೂಕು ಎಂದು ಹಾಕಲಾಗಿದ್ದು ಮುಂಭಾಗದಲ್ಲಿ ಹೆಸರಿನ ಜೊತೆಗೆ ರಾಜ್ಯ ಸರ್ಕಾರದ ಲಾಂಛನವನ್ನು ಹಾಕಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಾಹನಗಳನ್ನು ಹೊರತು ಪಡಿಸಿ ಇತರ ವಾಹನಗಳಲ್ಲಿ ಸರ್ಕಾರಿ ಲಾಂಛನವನ್ನು ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಕೂಡ ಹುಣಸೂರು ತಾಲ್ಲೂಕಿನ ಹಳೆಬೀಡು ಗ್ರಾ.ಪಂ ಅಧ್ಯಕ್ಷ ತನ್ನ ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!