May 20, 2024

MALNAD TV

HEART OF COFFEE CITY

ಅಲ್‍ಖೈದಾ ಜೊತೆ ಆರ್ ಎಸ್‍ಎಸ್ ಹೋಲಿಕೆ ಸರಿಯಲ್ಲ:ಸಿ.ಟಿ ರವಿ

1 min read

 

ಚಿಕ್ಕಮಗಳೂರು:ಆರ್ ಎಸ್‍ಎಸ್  ದೇಶ ಭಕ್ತ ಸಂಘಟನೆ, ಆಲ್‍ಖೈದಾ ಬಾಂಬಿನ ಮೇಲೆ ವಿಶ್ವಾಸವಿಟ್ಟಿರುವ ಅಂತರಾಷ್ಟ್ರೀಯ ಭಯೋತ್ಪಾದನೆ ಸಂಘಟನೆ ಇವೆರಡರ ನಡುವೆ ಹೋಲಿಗೆ ಮಾಡುವವರಿಗೆ ಬುದ್ಧಭ್ರಮಣೆ ಆದವರು ಮಾಡಬೇಕು ಅದೇ ರೀತಿ ಮಾಜಿ ಜಿ ಸಿ.ಎಂ ಸಿದ್ಧರಾಮಯ್ಯ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಸೋಲುಂಡ ಹತಾಶೆಯಿಂದ ಬುದ್ಧಿಭ್ರಮಣೆಗೆ ಒಳಗಾದವರಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡುತ್ತಿದ್ದಾರೆ ಆರ್‍ಎಸ್‍ಎಸ್ ಹಾಗೂ ಅಲ್‍ಖೈದಾ ನಡುವೆ ಹೋಲಿಕೆ ಮಾಡುವ ಮೂಲಕ ಅಲ್‍ಖೈದಾ ಮೇಲೆ ಸಿಂಪತಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು .ರಾಷ್ಟ್ರಭಕ್ತ ಸಂಘಟನೆ ಜೊತೆ ಹೋಲಿಕೆ ಮಾಡುತ್ತಾ ಅಲ್‍ಖೈದಾ ಪರವಾಗಿ ಪರೋಕ್ಷ ವಕಾಲತ್ತು ವಹಿಸುತ್ತಿದ್ದಾರೆ. ಹಿಜಾಬ್ ಸ್ಕೂಲ್‍ನ ಸಮಸ್ಯೆಯಾಗಿತ್ತು. ಮೊದಲು ಟ್ವೀಟ್ ಮಾಡಿದ್ದು ಸಿದ್ಧರಾಮಯ್ಯನವರು ಆಮೇಲೆ ರಾಹುಲ್ ಗಾಂಧಿ ಪ್ರೀಯಾಂಕ ಗಾಂಧಿ ಟ್ವೀಟ್ ಮಾಡಿದರು. ಆ ಮೇಲೆ ಪಿಎಫ್‍ಐ ಹೋರಾಟ ಆರಂಭಿಸಿತು. ವಕೀಲರ ಮೂಲಕ ಕಾಂಗ್ರೆಸ್ ಕಾನೂನು ನೆರವು ನೀಡುವ ಕೆಲಸ ಮಾಡಿತು. ವಕಾಲತ್ತು ವಹಿಸಿದವರು ಕಾಂಗ್ರೆಸ್ ಬೆಂಬಲಿಗರು ಆಗಿದ್ದರು. ಇದು ಕಾಕತಾಳಿಯವಲ್ಲ. ಇದರ ಹಿಂದೆ ಯಾರಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಿದರು.

ಹಿಜಾಬ್ ಪ್ರಕರಣದ ಹಿಂದೆ ಪಿಎಫ್‍ಐ, ಕಾಂಗ್ರೆಸ್ ಜೊತೆಗೆ ಅಲ್‍ಖೈದಾ ಕೂಡ ಇದೆ. ಅಲ್‍ಖೈದಾ ಮತ್ತು ಕಾಂಗ್ರೆಸ್ ಒಂದೇ ರೀತಿ ಬ್ಯಾಟಿಂಗ್ ಮಾಡುತ್ತಿದೆ. ಹೋಲಿಕೆ ಮಾಡುವು ದಿದ್ದರೇ ಕಾಂಗ್ರೆಸ್ ಮತ್ತು ಅಲ್‍ಖೈದಾ ಬಗ್ಗೆ ಹೋಲಿಕೆ ಮಾಡಬೇಕು. ಸೂತ್ರಧಾರಿ ಆಲ್ ಖೈದಾನಾ? ಪಾತ್ರದಾರಿ ಕಾಂಗ್ರೆಸೋ? ಗೊತ್ತಾಗಬೇಕು ಎಂದು ತಿಳಿಸಿದರು.

ನ್ಯಾಯಾಂಗದ ತೀರ್ಪು ಒಪ್ಪಿಗೆಯಾಗದಿದ್ದರೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಬಂದ್ ಕರೆ ನೀಡುತ್ತಿರಲಿಲ್ಲ, ಇದನ್ನು ವ್ಯಾಪಕಗೊಳಿಸುವ ಸಂಚು ಇತ್ತು. ಕಾಂಗ್ರೆಸ್ ರಾಜಕೀಯ ಲಾಭದ ಲೆಕ್ಕಚಾರ ಹಾಕಿತ್ತು. ಐದು ರಾಜ್ಯಗಳ ಚುನಾವಣೆಗಳಲ್ಲಿ ಅದು ಲಾಭ ತರಲಿಲ್ಲ. ಈಗಲಾದರೂ ಸತ್ಯದ ಪರ ನಿಲ್ಲಲಿ ಎಂದರು.ಕಾಂಗ್ರೆಸ್ ಸಮವಸ್ತ್ರದ ಪರ ಅಥವಾ ವಿರದ್ಧ ಎನ್ನುವುದನ್ನು ಮೊದಲು ಸ್ಪಷ್ಠಪಡಿಸಲಿ ಆಗ ಯಾರು ಅಲ್‍ಖೈದ ಮ್ಯಾಚ್ ಆಗುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಕ್ ಶಬ್ಧ ಎಷ್ಟಿರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಅದನ್ನು ಮಸೀದಿಗೆ ಎಂದು ವಿಷಯಾಂತರ ಮಾಡಲಾಗುತ್ತಿದೆ. ಕೋರ್ಟ್ ನಿಯಮಗಳನ್ನು ಹೇಳಿದೆ ಅದನ್ನು ಕಮ್ಯೂನಲ್ ಮಾಡುತ್ತಿರುವುದು ಯಾರು? ನ್ಯಾಯಾಲಯದ ತೀರ್ಪು ಅನುಷ್ಠಾನ ಗೊಳಿಸಬೇಕೋ ಬೇಡಾವೇ? ಅನುಷ್ಠಾನ ಗೊಳಿಸಬಾರದು ಎಂದು ಹೇಳುವವರು ಈ ನೆಲದ ಕಾನೂನಿನ ವಿರೋಧಿಗಳು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!