May 9, 2024

MALNAD TV

HEART OF COFFEE CITY

ಭಾರತೀಯ ಸೇನೆಯಿಂದ ಮುಳ್ಳಯ್ಯನಗಿರಿಯಲ್ಲಿ ಧ್ವಜಾರೋಹಣ

1 min read

ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶದವಾದ ಮುಳ್ಳಯ್ಯನಗಿರಿ ತುತ್ತ ತುದಿಯಲ್ಲಿ 14 ಜನ ಯೋಧರ ತಂಡದಿಂದ ರಾಷ್ಟ್ರಧ್ವಜವನ್ನ ಧ್ವಜಾರೋಹಣ ಮಾಡಿದ್ದಾರೆ. ಕರ್ನಲ್ ರಣವೀರ್ ಸಿಂಗ್ ನೇತೃತ್ವದ 14 ಜನ ಯೋಧರ ತಂಡ ದೇಶಾದ್ಯಂತ ಎಲ್ಲಾ ರಾಜ್ಯಗಳ ಅತ್ಯಂತ ಎತ್ತದ ಪ್ರದೇಶದಲ್ಲಿ ಭಾರತದ ಭಾವುಟವನ್ನ ಹಾರಾಡಿಸುತ್ತಿದ್ದಾರೆ. ದೇಶದ 28 ರಾಜ್ಯಗಳ ಪೈಕಿ ರಾಷ್ಟ್ರೀಯ ಪರ್ವತಾರೋಹಣ ಹಾಗೂ ಸಾಹಸ ಕ್ರೀಡೆಗಳ ಸಂಸ್ಥೆ ಈಗಾಗಲೇ 17 ರಾಜ್ಯಗಳ ಅತ್ಯಂತ ಎತ್ತರದ ಪ್ರದೇಶದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಅದರಂತೆ, ಇಂದು ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶವಾದ ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನ ಮುಳ್ಳಯ್ಯನಗಿರಿಯಲ್ಲೂ ಕೂಡ ಇಂದು ಭಾರತಾಂಬೆಯ ಭಾವುಟವನ್ನ ಹಾರಿಸಿದ್ದಾರೆ. 14 ಜನರ ಯೋಧರ ತಂಡ ಇಂದು ಮುಳ್ಳಯ್ಯನಗಿರಿಗೆ ಟ್ರಕ್ಕಿಂಗ್ ತೆರಳಿ 14 ಜನರೂ ಕೈಯಲ್ಲಿ ಭಾರತದ ಭಾವುಟ ಹಿಡಿದು ಟ್ರಕ್ಕಿಂಗ್ ಮಾಡಿದ್ದಾರೆ. ಮುಳ್ಳಯ್ಯನಗಿರಿ ತುದಿಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 6300 ಅಡಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿಯಲ್ಲಿನ ತಣ್ಣನೆಯ ಗಾಳಿ ಹಾಗೂ ಇಲ್ಲಿನ ನೈಸರ್ಗಿಕ ಪ್ರಕೃತಿ ಸೌಂದರ್ಯವನ್ನ ಕಂಡು ಸಂತಸಗೊಂಡಿದ್ದಾರೆ. ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶವಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!