May 9, 2024

MALNAD TV

HEART OF COFFEE CITY

ಕಾಫಿನಾಡಲ್ಲಿ ಡರ್ಟ್ ಕಾರ್ ರ್ಯಾಲಿ, ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಧೂಳೆಬ್ಬಿಸಿದ ಕಾರುಗಳು

1 min read

 

ಚಿಕ್ಕಮಗಳೂರು.ನಗರದ ಹೊರವಲಯದ ಮುಗುಳುವಳ್ಳಿಯಲ್ಲಿ ಅಬ್ಲೇಜ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮೋಟಾರ್ ಡರ್ಟ್ ಕಾರ್ ರ್ಯಾಲಿಯು ಜಿಲ್ಲೆಯ ರ್ಯಾಲಿ ಪ್ರಿಯರನ್ನ ರೋಮಾಂಚನಗೊಳಿಸಿದೆ. ಮುಗುಳುವಳ್ಳಿ ಗ್ರಾಮದ ಮೈದಾನದಲ್ಲಿ ನಡೆದ ಕಾರ್ ರ್ಯಾಲಿಯಲ್ಲಿ ಕರ್ನಾಟಕ, ತಮಿಳುನಾಡು, ಗೋವಾ, ಕೇರಳ, ಹೈದರಾಬಾದ್, ಮೇಘಾಲಯ, ದಿಲ್ಲಿ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ಆಗಮಿಸಿದ್ದ ರಾಷ್ಟ್ರಮಟ್ಟದ ಕಾರ್ ರ್ಯಾಲಿ ಡ್ರೈವರ್‍ಗಳು ಪೈಪೋಟಿಗೆ ಬಿದ್ದು ಕಾರುಗಳನ್ನು ಶರವೇಗದಲ್ಲಿ ಮುನ್ನುಗ್ಗಿಸುತ್ತಿದ್ದ ಪರಿ ನೋಡುಗರ ಮನಸೂರೆಗೊಂಡಿದೆ. ಬಯಲು ಮೈದಾನದಲ್ಲಿ ನಿರ್ಮಿಸಿದ್ದ ಅಂಕುಡೊಂಕಿನ ಕಚ್ಚಾ ರಸ್ತೆಯಲ್ಲಿ ರಾಷ್ಟ್ರೀಯ ರೈಡರ್‍ಗಳ ಜೊತೆ ಲೋಕಲ್ ರೈಡರ್‍ಗಳು ಅಖಾಡವನ್ನ ಧೂಳೆಬ್ಬಿಸಿದರು. ಒಂದು ಕಾರಿಗಿಂತ ಮತ್ತೊಂದು ಕಾರು ವಿಭಿನ್ನ ಶಬ್ಧದೊಂದಿಗೆ ಡರ್ಟ್ ಅಖಾಡದಲ್ಲಿ ಮುನ್ನುಗ್ಗುತ್ತಿದ್ದ ದೃಶ್ಯಗಳು ನೋಡುಗರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ರಾಜ್ಯ, ಹೊರ ರಾಜ್ಯಗಳ ಕಾರ್ ರ್ಯಾಲಿ ಪಟುಗಳು ಪೈಪೋಟಿಗೆ ಬಿದ್ದು ಕಾರು ಓಡಿಸುತ್ತಿದ್ದರೇ ನೆರೆದಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಮೂಲಕ ಕಾರು ಚಾಲಕರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಂಕುಡೊಂಕಿನ ತಿರುವಿನ ರಸ್ತೆಯಲ್ಲಿ ನಾಜೂಕಿನಿಂದ ಕಾರು ಓಡಿಸುವ ಮೂಲಕ ಚಾಲಕರು ತಮ್ಮ ಚಾಲನಾ ನೈಪುಣ್ಯತೆ ಪ್ರದರ್ಶಿಸಿ ರೇಸ್ ಪ್ರಿಯರ ಮೈನವಿರೇಳಿಸಿದರು. ರ್ಯಾಲಿಯಲ್ಲಿ 150ಕ್ಕೂ ಹೆಚ್ಚು ಕಾಂಪಿಟೇಟರ್ಸ್ ಪಾಲ್ಗೊಂಡಿದ್ದರು. ಒಟ್ಟು 17 ವಿಧದ ರ್ಯಾಲಿಯಲ್ಲಿ ಆಲ್ಟೋ ಯಿಂದ ರ್ಯಾಲಿ ಕಾರುಗಳು ಪಾಲ್ಗೊಂಡಿದ್ದವು.

 

ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ದವು. ಕೆಲವು ಕಾರ್ ಕ್ರೇಜ್ ಪ್ರಿಯರು ಆಲ್ಟೋ ಹಾಗೂ 800 ಕಾರನ್ನೂ ಮಾಡಿಫೈ ಮಾಡಿಕೊಂಡು ಬಂದು ರ್ಯಾಲಿಯಲ್ಲಿ ಡ್ರೈವ್ ಮಾಡಿ ಎಂಜಾಯ್ ಮಾಡಿದ್ರು. ನೋಡುಗರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದ್ರು. ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡ್ದೋರ ಎದೆ ಮೇಲೆ ಹೋದಂತಿತ್ತು. ಇನ್ನು ಪ್ರೇಕ್ಷಕರ ಮನೋರಂಜನೆಗೆಂದೇ ಆಯೋಜಿಸಿದ್ದ ರ್ಯಾಲಿಯಲ್ಲಿ ರಾಷ್ಟ-ಅಂತರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದ್ರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡ್ತಿರೋ ಕಾರುಗಳನ್ನ ನೋಡಿ ಜಿಲ್ಲೆಯ ರ್ಯಾಲಿ ಪ್ರಿಯರಂತು ಫುಲ್ ಫಿದಾ ಆಗಿರೋದು ಸುಳ್ಳಲ್ಲ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!