May 13, 2024

MALNAD TV

HEART OF COFFEE CITY

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಶಾಸಕ ಎಚ್ ಡಿ ತಮ್ಮಯ್ಯ

1 min read

ಚಿಕ್ಕಮಗಳೂರು: ಜನಸೇವಕನಾಗಿ ಕೆಲಸ ಮಾಡುವುದಕ್ಕೆ ಜಿಲ್ಲೆಯ ಜನ ನನಗೆ ಒಂದು ಅವಕಾಶವನ್ನು ನೀಡಿದ್ದು, ಬಡವರ ಪರವಾಗಿ ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಜವಾಬ್ದಾರಿಯನ್ನ ಹೊಂದಿದ್ದೇನೆ ಎಂದು ಶಾಸಕ ಎಚ್ ಡಿ ತಮ್ಮಯ್ಯ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಮೊನ್ನೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದ್ದೇನೆ ಅಷ್ಟೇ ಅಲ್ಲದೆ ಈ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಕೂಡ ಈ ವಿಚಾರಕ್ಕೆ ಧ್ವನಿಗೂಡಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರ ಕಳಿಸಿರುವ ಎನ್ ಡಿ ಆರ್ ಎಫ್ ತಂಡದ ಮಾನದಂಡಗಳು ಸರಿಯಾಗಿ ಇಲ್ಲದ ಕಾರಣ ನಮ್ಮ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರ ಇಡಲಾಗಿದೆ ಎಂದು ಸರ್ಕಾರ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಪರಿಶೀಲಿಸಿ ಎಂದು ಮನವಿಯನ್ನು ಸಲ್ಲಿಸಿದಾಗ ಹಿಂಗಾರಿನ ಸಂದರ್ಭದಲ್ಲಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು.
ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಇರುವ ಮಾನದಂಡಗಳನ್ನು ತಾಲೂಕುಗಳಲ್ಲಿ ಮಾತ್ರ ಬಳಸದೆ ಹೋಬಳಿ ಮಟ್ಟದಲ್ಲೂ ಇದನ್ನ ಪರಿಶೀಲಿಸಬೇಕು. ಚಿಕ್ಕಮಗಳೂರು ತಾಲೂಕಿನ 6 ಹೋಬಳಿಗಳಲ್ಲಿ ಕಸಬಾ, ಲಕ್ಯಾ, ಅಂಬಳೆ ಹೋಬಳಿಗಳು ಬರಪೀಡಿತ ಪ್ರದೇಶಗಳಾಗಿವೆ. ಒಟ್ಟರೆ ತಾಲೂಕನ್ನು ಅಂದಾಜಿಸಿದಾಗ ಶೇಕಡಾ 40 ಕ್ಕಿಂತ ಹೆಚ್ಚು ಮಳೆಯಾಗಿರುವ ಪ್ರದೇಶ ಎಂದು ಗ್ರಾಮ ಪಂಚಾಯಿತಿ ಮೌಲ್ಯಮಾಪನಗಳು ಮಾಹಿತಿಯನ್ನು ನೀಡಿದೆ. ಈ ಕುರಿತಾಗಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಮಾನದಂಡಗಳ ಬದಲಾವಣೆಗಾಗಿ ಪತ್ರ ಬರೆಯಲಿದ್ದಾರೆ ಎಂದು ಹೇಳಿದರು.
ಮಾನವರು ಹಾಗೂ ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಸದನದಲ್ಲಿ ಧ್ವನಿ ಎತ್ತಿದ್ದೇವೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಸಭೆ ಕರೆಯಲಾಗಿದ್ದು, ಅರಣ್ಯ ಇಲಾಖೆಯ ವ್ಯಾಪ್ತಿಯ ಸುತ್ತ ಬ್ಯಾರಿಕೆಡ್ ಗಳನ್ನ ನಿರ್ಮಿಸುವುದರಿಂದ ಆನೆಗಳು ಆ ಪ್ರದೇಶದಿಂದ ಹೊರ ಬರುವುದನ್ನ ತಡೆಯಬಹುದು. ಆನೆಗಳಿಗೆ ಬೇಕಾದ ಮೇವುಗಳನ್ನ ಬೆಳೆಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಿದೆ ಆಗ ಅವುಗಳು ಕಾಡನ್ನು ಬಿಟ್ಟು ನಗರಗಳತ್ತ ಬರುವುದು ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಆಗಬೇಕು ಈ ಕುರಿತು ಸಹ ಸಭೆಯನ್ನು ನಡೆಸಲಾಗಿದೆ. ಸಕ್ಕರಾಯಪಟ್ಟಣ ಪಟ್ಟಣದ ಸುತ್ತಮುತ್ತ ಹೆಚ್ಚು ಶುದ್ಧ ನೀರಿನ ಘಟಕಗಳನ್ನು ಆರಂಭಿಸಬೇಕು ಎಂಬ ಪ್ರಸ್ತಾಪವನ್ನ ಸಹ ಸದನದಲ್ಲಿ ಮಾಡಲಾಯಿತು. ನಮ್ಮ ಈ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 39 ಸಾವಿರ ಕೋಟಿ ವೆಚ್ಚದಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನ ಸಂಪೂರ್ಣವಾಗಿ ಜಾರಿಗೊಳಿಸಿದ್ದಾರೆ. ಈ ಹಿನ್ನಲೆ ಅಭಿವೃದ್ಧಿಗೆ ಅನುದಾನ ಇಲ್ಲ ಎಂಬ ಮಾತನ್ನು ಕೆಲವರು ಹೇಳುತ್ತಾರೆ ಆದರೆ ನಮ್ಮ ಸರ್ಕಾರ ಅಭಿವೃದ್ಧಿಗೆ ಅನುದಾನವನ್ನ ಕಡಿಮೆ ಮಾಡಿಲ್ಲ ಇನ್ನು ಮುಂದಿನ ಬಜೆಟ್ ನಲ್ಲಿ ಕೂಡ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಚಿಂತಿಸುತ್ತಿದ್ದೇವೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಇದೆ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದರು. ಈ ವೇಳೆ ಪ್ರೆಸ್ ಕ್ಲಬ್ ಅಧ್ಯಕ್ಷ ಸೇರಿದಂತೆ ಇತರೆ ಪತ್ರಕರ್ತರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!