May 10, 2024

MALNAD TV

HEART OF COFFEE CITY

ಬಿಜೆಪಿ ನಾಯಕರು ಅಧಿಕಾರವಿಲ್ಲದೇ ವಿಲ ವಿಲ ಒದ್ದಾಡುತ್ತಿದ್ದಾರೆ – ರೂಬೆನ್ ಮೊಸಸ್

1 min read

ಶಾಸಕರಾಗಿ ಹೆಚ್.ಡಿ ತಮ್ಮಯ್ಯ ಆಯ್ಕೆಯಾಗಿರುವುದನ್ನು ಸಹಿಸಿಕೊಳ್ಳದ ಬಿಜೆಪಿ ಜಿಲ್ಲಾ ಮುಖಂಡರು ಅಧಿಕಾರ ಕಳೆದಕೊಂಡ ಮಾಜಿ ಶಾಸಕ ಸಿ.ಟಿ ರವಿ ಕಪಿಮುಷ್ಠಿಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಆರೋಪಿಸಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿಯಲ್ಲಿ ಸಿ.ಟಿ ರವಿ ಬಿಟ್ಟರೆ ಶಾಸಕರಾಗುವ ಅರ್ಹತೆ ಬೇರೆ ಯಾರಿಗೂ ಇಲ್ಲವೆ ಮಾಜಿ ಶಾಸಕರು ಯಾರನ್ನೂ ಬೆಳೆಸಿದ್ದಾರೆ ಅವರ ವಿರುದ್ದ ಮಾತನಾಡಿದರೆ ಬ್ಲಾಕ್ ಮೇಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ ಇದರಿಂದ ತಮ್ಮ ಅನಿಸಿಕೆ ಹೇಳಿಕೊಳ್ಳಲಾಗದಷ್ಟು ಭಯ ಜಿಲ್ಲಾ ಬಿಜೆಪಿ ಮುಖಂಡರಲ್ಲಿದೆ ಎಂದು ದೂರಿದರು.ಇದಕ್ಕೆಲ್ಲಾ ಕೊನೆ ಹಾಡಬೇಕು ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬಂತೆ ಹೆಚ್.ಡಿ ತಮ್ಮಯ್ಯ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದರು ಸರಳ ಸಜ್ಜನಿಕೆ ವ್ಯಕ್ತಿತ್ವದ ಇವರನ್ನು ಚುನಾವಣೆಯಲ್ಲಿ ಮತದಾರರು ಕೈಗೆ ಮತ ಹಾಕಿ ಕೈ ಹಿಡಿದರು ಎಂದ ರೂಬಿ ಹೆಚ್.ಡಿ ತಮ್ಮಯ್ಯಗೆ ಬಿಜೆಪಿ ಸಿಡಿಎ ಅಧ್ಯಕ್ಷ ಸ್ಥಾನ ನೀಡಿದ್ದರೆ ಇಂದು ಅವರು ಶಾಸಕರಾಗುತ್ತಿರಲಿಲ್ಲ ಇದನ್ನು ವಿರೋಧಿಸಿ ಹೊರ ಬಂದರು ಎಂದು ಹೇಳಿದರು.

ಬಿಜೆಪಿಯವರು ನಡೆಸುತ್ತಿದ್ದ ಭ್ರಷ್ಠಾಚಾರ ಮತ್ತು ಮಾಜಿ ಶಾಸಕರ ಏಕ ಚಕ್ರಾಧಿಪತ್ಯದಿಂದ ಬೇಸತ್ತು ಹೊರ ಬಂದ ತಮ್ಮಯ್ಯ 25 ದಿನದಲ್ಲಿ ಶಾಸಕರಾಗಿರುವುದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಬಾಲಸುಟ್ಟ ಬೆಕ್ಕಿನಂತಾಗಿದ್ದಾರೆ ಸೋತ ಮಾಜಿ ಶಾಸಕರು ಬೂತ್ ಮಟ್ಟದ ನಾಯಕರನ್ನು ಕರೆಸಿ ಬೂತ್‍ಗೆ ಹೋದ ಹಣವೆಷ್ಟು ಇಷ್ಟು ಮತಗಳು ಏಕೆ ಕಡಿಮೆ ಬಂದಿದೆ ಎಂದು ತರಾಟೆಗೆ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಟೀಕಿಸಿದರು.ಕಾಮಗಾರಿ ತಡೆ ಹಿಡಿದಿರುವ ಬಗ್ಗೆ ಮಾಜಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ ಇದರಲ್ಲಿ ಗುತ್ತಿಗೆದಾರರ ಪರವಾಗಿ ನಿಲ್ಲುವುದೇ ಆಗಿದೆ ಹೊರತು ಸಾರ್ವಜನಿಕರ ಕಾಳಜಿ, ಜನಪರ ಯೋಜನೆಗಳ ಬಗ್ಗೆ ಸ್ಪಂದನೆ ಇಲ್ಲ ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ಶೂಭಾಗ್ಯ ಮತ್ತಿತರ ಕಾಂಗ್ರೆಸ್ ಸರ್ಕಾರದ ಜನಪರವಾದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಕೊಟ್ಟ 5 ಗ್ಯಾರಂಟಿ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸುತ್ತಾರೆ ಇದಕ್ಕೆ ಸ್ಪಲ್ಪ ಸಮಯ ಬೇಕು ಬಿಜೆಪಿಯವರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಲಕ್ಷ್ಮಣ್, ಕಾಂಗ್ರೆಸ್ ನಗರಾಧ್ಯಕ್ಷ ತನೂಜ್‍ಕುಮಾರ್, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶಭಾನ ಸುಲ್ತಾನ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!