May 15, 2024

MALNAD TV

HEART OF COFFEE CITY

ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ವಿಶಿಷ್ಟ ವಾದದ್ದು ಅದನ್ನ ಉಳಿಸಿ ಬೆಳೆಸುವ ಕರ್ತವ್ಯ ನಮ್ಮ ಮೇಲಿದೆ – ಹೆಚ್.ಡಿ.ತಮ್ಮಯ್ಯ

1 min read

ಸಂವಿಧಾನದ ಆಶಯದಂತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲಾ ವರ್ಗದ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಬದ್ದತೆಯಿಂದ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ನೂತನ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಆರಂಭಿಸಲಾದ ನೂತನ ಶಾಸಕರ ಜನಸಂಪರ್ಕ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಆಶಯದಂತೆ ತಾವು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಅದರಂತೆ ಆದ್ಯತೆ ಮೇಲೆ ಬಡವರ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡಬೇಕು, ಸಾರ್ವಜನಿಕರಿಗೆ ಪಾರದರ್ಶಕವಾದ ಜನಸ್ನೇಹಿ ಆಡಳಿತ ನೀಡಲು ಬದ್ದವಾಗಿದ್ದೇನೆ ಎಂದರು.ಯಾವುದೇ ವ್ಯಕ್ತಿ ತಮ್ಮ ಸಮಸ್ಯೆಗಳನ್ನು ಹೊತ್ತು ಬಂದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಅವರುಗಳ ಕೆಲಸ ಮಾಡಬೇಕೆಂದು ಸೂಚಿಸಿದ್ದೇನೆ. ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟು, ಸ್ಪರ್ಧೆ ಮಾಡಿದ್ದು ಗೆಲ್ಲಿಸಿ ಶಾಸಕರನ್ನಾಗಿಸಿದ್ದೀರಿ ಅವರೆಲ್ಲರಿಗೂ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು.ದೀನ ದಲಿತರ, ಶೋಷಿತರ, ಅಲ್ಪಸಂಖ್ಯಾತರ ಬಡವರ ಬಗ್ಗೆ ಕಾಳಜಿ ಹೊಂದಿದ್ದು, ಇವರಿಗೆ ಸರ್ಕಾರದ ಸೌಲತ್ತುಗಳನ್ನು ತಲುಪಿಸಲು ಕಟಿಬದ್ದನಾಗಿದ್ದೇನೆ. ಇನ್ನು ಕೆಲವೇ ಕ್ಷಣದಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಕ್ಕೆ ತರಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಘೋಷಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷಗಳು ನಾವು ಮೌನವಾಗಿರುವುದನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು ನಮ್ಮ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ ಇನ್ನು ಮುಂದೆ ಶಾಂತಿಯಿಂದ ಇರಬೇಕು ಮುಂದುವರೆಸಿದರೆ ನಮಗೆ ನೀಡಿರುವ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರೀತಿ ರಾಜಕಾರಣವನ್ನು ಜನ ಒಪ್ಪಿದ್ದಾರೆ ಅದಕ್ಕೆ ಬದ್ದನಾಗಿ ಕೆಲಸ ಮಾಡುತ್ತೇನೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದ ತಮ್ಮಯ್ಯ ನೂತನ ಕಛೇರಿಯಲ್ಲಿ 3 ದಿನ ಹಾಗೂ ಕಾಂಗ್ರೆಸ್ ಕಛೇರಿಯಲ್ಲಿ ಪ್ರತಿ ಬುಧವಾರ ಇದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತೇನೆ ಎಂದು ಭರವಸೆ ನೀಡಿದರು.ಇನ್ನು ಮುಂದೆ ನನ್ನನ್ನು ನೋಡಲು ಬರುವ ಮತದಾರರು, ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು, ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಹಾರ, ತುರಾಯಿ, ಪೇಟ, ಶಾಲು, ತರುವುದು ಬೇಡ ಬದಲಾಗಿ ಒಂದು ಪುಸ್ತಕ ಒಂದು ಗುಲಾಬಿ ಹೂ ಕೊಟ್ಟರೆ ಸಾಕು ಎಂದು ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ ಅಂಶುಮಂತ್ ಮಾತನಾಡಿ ಜನಪರ ಕಾಳಜಿ, ವಿಚಾರಗಳಿಗೆ ಸ್ಪಂದಿಸುವ ಶಾಸಕ ಹೆಚ್.ಡಿ ತಮ್ಮಯ್ಯ ಅವರು ಕಛೇರಿ ಉದ್ಘಾಟಿಸಿ ತಮ್ಮ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದಾರೆ ಇದಕ್ಕಾಗಿ ಪಕ್ಷದ ಎಲ್ಲಾ ವಿಭಾಗಗಳ ಮುಖಂಡರು, ಕಾರ್ಯಕರ್ತರು, ಮತದಾರರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣ ಸೃಷ್ಠಿಸುವುದರ ಜೊತೆಗೆ ಅಭಿವೃದ್ಧಿ ವಿಚಾರಗಳಿಗೂ ಆದ್ಯತೆ ನೀಡಬೇಕು ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಪ್ರಣಾಳಿಕೆಯ ಅಂಶಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಬೇಕೆಂದು ಎಂದು ಹೇಳಿದರು.
ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಕ್ಷೇತ್ರದಲ್ಲಿ ಸಂವಿಧಾನ ಬದ್ದವಾದ ಅಧಿಕಾರವನ್ನು ಬಳಸಿ ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡುವ ಶಕ್ತಿ ತಮ್ಮಯ್ಯ ಅವರಿಗೆ ಬರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಬಿ.ಎಂ ಸಂದೀಪ್, ಎಂ.ಎಲ್ ಮೂರ್ತಿ, ಹೆಚ್.ಪಿ ಮಂಜೇಗೌಡ, ಎ.ಎನ್ ಮಹೇಶ್, ಹೆಚ್.ಹೆಚ್ ದೇವರಾಜ್,ಸೈಯದ್‍ಹನೀಫ್, ಮಹಮದ್‍ಅಕ್ಬರ್, ಕೆ.ಮಹಮದ್. ಅತೀಕ್‍ಖೈಸರ್, ಡಿ.ಸಿ ಪುಟ್ಟೇಗೌಡ, ರೂಬಿನ್ ಮೊಸಸ್, ಮತ್ತಿತರರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!