May 3, 2024

MALNAD TV

HEART OF COFFEE CITY

ಕಮಲ್ ಕೀ ಬಟನ್ ದಬಾವೋ.. ಎಂದು ಹಾಡಿ ಕುಣಿದ ಅಭಿಮಾನಿ ವಿಡಿಯೋ ವೈರಲ್..!

1 min read

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳು ಬಹಳ ಸದ್ದು ಮಾಡುತ್ತಲೇ ಇರುತ್ತದೆ ಇದೀಗ ಉತ್ತರಪ್ರದೇಶದಲ್ಲಿ ಅಭಿಮಾನಿಯೊಬ್ಬ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆ, ಮೋದಿಯನ್ನ ಹಾಡಿ ಹೊಗಳಿದ್ದಾನೆ ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಪ್ರಪಂಚದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವಂಹತ ದೇಶ ಭಾರತ. ರಾಮಾಯಣ ಮಹಾಭಾರತಗಳಂತಹ ಮಹಾನ್ ಗ್ರಂಥಗಳ ಉಲ್ಲೇಖದ ಜೊತೆ ಹಿಂದೂ ಧರ್ಮದ ಭದ್ರ ಬುನಾದಿಯನ್ನ ಹೊಂದಿರುವಂತಹ ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿರುವದು ಈ ನಮ್ಮ ರಾಷ್ಟ್ರ.
ಅಭಿವೃದ್ಧಿಯಪಥದಲ್ಲಿ ಮುನ್ನುಗ್ಗುತ್ತಿರುವ ಭಾರತಕ್ಕೆ ಮತ್ತಷ್ಟು ಹಿರಿಮೆಯ ಗರಿಯನ್ನು ತಂದಿರುವಂತಹ ಜನ ಮೆಚ್ಚಿದ ನಾಯಕ ನರೇಂದ್ರ ಮೋದಿ ದೇಶ ವಿದೇಶಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಮಹತ್ವವನ್ನ ವಿಶ್ವಕ್ಕೆ ಸಾರಿದ ಒಬ್ಬ ಸಾಮಾನ್ಯ ಚಾಯ್ ವಾಲಾ, ನಾಯಕನಾಗಿ ದೇಶದ ಆರ್ಥಿಕತೆಯ ಭದ್ರಬುನಾದಿಯನ್ನ ಹಾಕುವಲ್ಲಿ, ಸ್ವಚ್ಛ ಭಾರತ ಅಭಿಯಾನದಿಂದ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವಲ್ಲಿ, ಏಕ ಸಮಾನ ನಾಗರಿಕ ಕಾನೂನಿನ ಜಾರಿಗೊಳಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಸಾರುವಲ್ಲಿ, ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸುವಂತೆ ಮಾಡಿ, ರಾಮರಾಜ್ಯ ನಿರ್ಮಾಣದ ಕನಸನ್ನ ಸಾಕಾರಗೊಳಿಸುವಲ್ಲಿ ಬಿಜೆಪಿಯ ಹೆಜ್ಜೆ ಇಡುತ್ತಿದೆ ಎಂಬ ಸಂದೇಶವನ್ನು ನೀಡುತ್ತಾ, ಮತ್ತೊಮ್ಮೆ ಬಿಜೆಪಿ, ಮತ್ತೊಮ್ಮೆ ಮೋದಿ ಎಂದು ಅಭಿಮಾನಿಯೊಬ್ಬ ಮೋದಿಗೆ ಮತ ಹಾಕಿ ಜೈ ಸೀತಾರಾಮ್ ಎಂದು ಬಿಜೆಪಿಯ ಪರ ಹಾಡಿರುವ ಹಾಡು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ಹಾಡು ವಿರೋಧಪಕ್ಷಗಳು ಇನ್ನಷ್ಟು ಎಚ್ಚೆತ್ತುಕೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!