May 2, 2024

MALNAD TV

HEART OF COFFEE CITY

ಒತ್ತಡ ನಿವಾರಣೆಗೆ ಯೋಗ ಸಹಕಾರಿ : ಪುಷ್ಪಾ ಲಕ್ಷ್ಮಣ್

1 min read

ಚಿಕ್ಕಮಗಳೂರು: ಯೋಗದಿಂದ ಮನಸ್ಸಿಗೆ ಶಾಂತಿ, ದೇಹಕ್ಕೆ ಆರೋಗ್ಯ ಲಭಿಸುತ್ತದೆ ಎಂದು ಯೋಗ ಶಿಕ್ಷಕಿ ಪುಷ್ಪಾ ಲಕ್ಷ್ಮಣ್ ತಿಳಿಸಿದರು.
ಶ್ರೀದೇವಿ ಗುರುಕುಲ, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಶ್ರೀಪಾರ್ವತಿ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ನಗರದ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾ ಶಿವಶಾಸ್ತ್ರಿ ಸಭಾಂಗಣದಲ್ಲಿ ವಿಶ್ವ ಯೋಗ ದಿನ ಮತ್ತು ವಿಶ್ವ ಸಂಗೀತ ದಿನವನ್ನು ಆಚರಿ ಸಲಾಯಿತು.
ಒತ್ತಡ ನಿವಾರಣೆ-ಪ್ರಶಾಂತ ಮನಸ್ಥಿತಿ ಹೊಂದಲು ಯೋಗ ಸಹಕಾರಿ. ಸಾಮಾನ್ಯವಾಗಿ ನಮ್ಮೆಲ್ಲ ರನ್ನೂ ಕಾಡುವ ಮಂಡಿ, ಹಿಮ್ಮಡಿ, ಭುಜನೋವು ವಯೋಸಹಜವಾಗಿದ್ದರೂ ಸರಳ ಆಸನಗಳ ಮೂಲಕ ನಿಯಂತ್ರಿಸಬಹುದೆಂದು ತಿಳಿಸಿದರು.
ಯೋಗಕ್ಕೆ ವಯೋಮಿತಿ ಇಲ್ಲ. ಮನಸ್ಸಿಟ್ಟು ಆಸನಗಳನ್ನು ಹಾಕಿದಾಗ ಹೆಚ್ಚಿನ ಫಲ ಸಿಗುತ್ತದೆ. ಯೋಗವೇ ಜೀವನ. ಯೋಗ ಬಲ್ಲವರಿಗೆ ರೋಗವಿಲ್ಲ. ನಿತ್ಯ ಬೆಳಗ್ಗೆ ೫.೩೦ರಿಂದ ೭ರ ವರೆಗೆ ಯೋಗ ಪ್ರಶಸ್ಯ ಸಮಯ. ಸಂಜೆಯೂ ಯೋಗ ಮಾಡಬಹುದು. ದೇಹಾ ರೋಗ್ಯ, ವಯಸ್ಸು, ಮಾನಸಿಕಸ್ಥಿತಿಗೆ ಅನುಗುಣವಾಗಿ ತಜ್ಞರ ತರಬೇತಿ ಪಡೆದು ಯೋಗ ಮಾಡುವುದರಲ್ಲಿ ಒಳಿತಿದೆ ಎಂದರು.
ದೇವಿ ಗುರುಕುಲದ ಸಂಸ್ಥಾಪಕ ಡಾ| ದಯಾನಂದಮೂರ್ತಿಶಾಸ್ತಿç ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗಕ್ಕೆ ೫೦೦೦ವರ್ಷಗಳ ಇತಿಹಾಸವಿದೆ. ಪತಂಜಲಿ ಮಹರ್ಷಿಗಳು ಯೋಗ ಸೂತ್ರವನ್ನು ರಚಿಸಿದ್ದು ಅಷ್ಟಾಂಗಯೋಗ ಅಂದಿನಿಂದಲೂ ಪ್ರಚಲಿತದಲ್ಲಿರುವುದೇ ಅದರ ಮಹತ್ವವನ್ನು ಸೂಚಿಸುತ್ತದೆ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತಿç ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಮಹೇಶ್, ಆಶಾಮಹೇಶ್, ಸೌಭಾಗ್ಯ ಜಯಣ್ಣ, ಗೀತಾಬಾಲಿ ಮತ್ತು ಲೀಲಾವಿಜಯ್, ರೇಣುಕಾಕುಮಾರ್, ನಂದಿನಿಶಾಸ್ತ್ರಿ ಇದ್ದರು.
ರುದ್ರಮ್ಮರುದ್ರಪ್ಪ ಅವರ ಗಾಯನ ಗಮನಸೆಳೆಯಿತು. ಶ್ರೀಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತಿç ಸ್ವಾಗತಿಸಿ, ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!