May 2, 2024

MALNAD TV

HEART OF COFFEE CITY

ಅಗ್ನಿಪಥ್ ನಿಂದ ಶೋಷಿತರನ್ನು ಉನ್ನತ ಶಿಕ್ಷಣದಿಂದ ವಂಚಿಸುವ ಹುನ್ನಾರ : ಹೆಚ್.ಎಸ್ ಪುಟ್ಟಸ್ವಾಮಿ

1 min read

ಚಿಕ್ಕಮಗಳೂರು: ಸೇನೆ ಸೇರುತ್ತಿರುವ ದಲಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗ ಶೋಷಿತರನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ಅಗ್ನಿಪಥದ ಮೂಲಕ ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದರು.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಶೋಷಿತ ವರ್ಗವನ್ನು ಉನ್ನತ ಶಿಕ್ಷಣದಿಂದ ವಂಚಿತಗೊಳಿಸುವ ಸಂಘ ಪರಿವಾರದ ಉದ್ದೇಶವನ್ನು ಕೇಂದ್ರ ಸರ್ಕಾರ ಈ ಮೂಲಕ ಅನುಷ್ಠಾನಗೊಳಿಸಲು ಷಡ್ಯಂತ್ರ ನಡೆಸಿದೆ ಎಂದು ದೂರಿದ್ದಾರೆ.

ಹೊಸ ನಿಯಮದನ್ವಯ ಸೇನೆ ಸೇರಿ ನಾಲ್ಕು ವರ್ಷಗಳ ಕಾರ್ಯನಿರ್ವಹಿಸಬೇಕಾಗಿದ್ದು, ನಾಲ್ಕು ವರ್ಷಗಳಲ್ಲಿ 6 ತಿಂಗಳು ತರಬೇತಿ, 8 ತಿಂಗಳು ರಜೆ ಪಡೆಯಲು ಅವಕಾಶ ಇದೆ. ನಾಲ್ಕು ವರ್ಷಗಳಲ್ಲಿ 14 ತಿಂಗಳನ್ನು ಕಳೆದರೆ ಉಳಿಯುವುದು ಎರಡು ವರ್ಷ ಹತ್ತು ತಿಂಗಳು ಮಾತ್ರ. ಎರಡು ವರ್ಷ ಹತ್ತು ತಿಂಗಳಲ್ಲಿ ಶಿಸ್ತು, ದಕ್ಷತೆ ಮತ್ತು ಶ್ರದ್ಧೆಯಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಾಧ್ಯ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಕಾರ್ಯಕ್ರಮದಿಂದ ದೇಶದ ಕಾರ್ಪೋರೇಟ್ ಕಂಪನಿಗಳಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುತ್ತದೆ. ಅದನ್ನು ಬಿಟ್ಟರೆ ಸೆಕ್ಯೂರಿಟಿ ಗಾರ್ಡುಗಳಾಗಿ ಅಲ್ಲಿ ಇಲ್ಲಿ ಸೇರಿಕೊಳ್ಳಬಹುದು. ಇದಕ್ಕೆ ನಿದರ್ಶನವಾಗಿ ಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗಿ ಹೇಳಿರುವಂತೆ ಅಗ್ನಿವೀರರು ಸೇನೆಯಿಂದ ನಿವೃತ್ತರಾದ ಬಳಿಕ ಬಿಜೆಪಿ ಕಚೇರಿಯಲ್ಲಿ ಸೆಕ್ಯೂ ರಿಟಿ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ ಎಂದಿರುವುದು ಸತ್ಯವಾದ ವಿಚಾರವೇ ಆಗಿದೆ ಎಂದು ಹೇಳಿದ್ದಾರೆ.

ನಿವೃತ್ತರಾದ ಸೇನಾನಿಗಳಿಗೆ ಶೇ.10ರಷ್ಟು ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಶೇ.10ರಷ್ಟು ನಿವೃತ್ತ ಸೇನಾನಿಗಳಿಗೆ ಅವಕಾಶವಾದರೆ ಇನ್ನುಳಿದ ಶೇ.90 ಸೇನಾನಿಗಳ ಗತಿ ಏನು ಎಂದು ಪ್ರಶ್ನಿಸಿರುವ ಅವರು, ಬಂದೂಕು ಇತ್ಯಾದಿ ಆಯುಧಗಳ ಬಳಸುವ ಬಗ್ಗೆ ತರಬೇತಿ ಪಡೆದುಕೊಂಡಿರುವ ನಿವೃತ್ತ ಸೇನಾನಿಗಳನ್ನು ಉಗ್ರ ಮತ್ತು ನಕ್ಸ್‍ಲ್ ಸಂಘಟನೆಗಳು ಆಮೀಷಗಳೊಂದಿಗೆ ಸೆಳೆದುಕೊಳ್ಳುವ ಅಪಾಯಗಳು ಹೆಚ್ಚಿವೆ. ಈ ವಿಚಾರವನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ದೇಶ ಮತ್ತು ಯುವಜನರಿಗೆ ಮಾರಕವಾಗಲಿರುವ ಈ ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸಿ ಹಳೆ ವ್ಯವಸ್ಥೆಯನ್ನು ಮುಂದುವರಿಸುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸುತ್ತದೆ. ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಜಿಲ್ಲಾ ಮಟ್ಟದಲ್ಲಿ ಶೀಘ್ರದಲ್ಲಿ ಪ್ರತಿಭಟನೆ ಆಯೋಜಿಸಲಾ ಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!