May 2, 2024

MALNAD TV

HEART OF COFFEE CITY

ಡಾ|ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ 68ನೇ ಪುಣ್ಯಸ್ಮರಣೆ

1 min read

ಚಿಕ್ಕಮಗಳೂರು: ಡಾ| ಶ್ಯಾಮ್‌ಪ್ರಸಾದ್ ಮುಖರ್ಜಿಯವರು ಜನಸಂಘ ಸ್ಥಾಪಿಸಿದ್ದು ಅಧಿ ಕಾರಕ್ಕಾಗಿ ಅಲ್ಲ, ರಾಷ್ಟ್ರೀಯ ಪುನರ್ ನಿರ್ಮಾಣಕ್ಕಾಗಿ, ದೇಶದ ಏಕತೆ, ಮತ್ತು ಸಮಗ್ರತೆ ಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರುಡಪ್ಪ ಹೇಳಿದರು.
ಗುರುವಾರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾರತೀಯ ಜನ ಸಂಘದ ಸಂಸ್ಥಾಪಕ ಡಾ|ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ 68ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂ ಡು ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ, ಆ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.
ದೇಶ ವಿಭಜಿಸುವ ಹುನ್ನಾರ ನಡೆದಾಗ ಪ್ರತೀ ಹಂತದಲ್ಲು ಪ್ರಬಲವಾಗಿ ವಿರೋಧಿಸುತ್ತಾ ಬಂದರು. ಭಾರತದ ಏಕತೆ ಅಖಂಡತೆಗೆ ಅವರಿಗಿದ್ದ ಪ್ರೇಮ, ಕಾಳಜಿ, ಪ್ರತಿಯೊಬ್ಬ ಭಾರತೀ ಯನಿಗೆ ಅವರ ಮೇಲೆ ಅಪಾರ ಗೌರವ ಮೂಡಿಸಿತ್ತು ಎಂದರು.

ಸ್ವಾತoತ್ರö್ಯ ಪೂರ್ವದಲ್ಲಿ ಕಾಂಗ್ರೆಸ್ ಕೇವಲ ಆಂದೋಲನವಾಗಿತ್ತು ಅಷ್ಟೇ. ಅಲ್ಲಿ ಅನೇಕ ಮಹನೀಯರು ಸ್ವಾತಂತ್ರö್ಯಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ನೆಹರೂ ಅವಧಿಯಲ್ಲಿ ಕಾಂಗ್ರೆಸ್ ರಾಜಕೀಯ ಪಕ್ಷವನ್ನಾಗಿ ಮಾಡಲಾಯಿತು. ದೇಶದ ಸಮಗ್ರತೆಗಾಗಿ ಅನೇಕ ನಾಯಕರು ಹೋರಾಡಿದ್ದಾರೆ ಅವರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಒಬ್ಬರು ಎಂದು ಬಣ್ಣಿಸಿದರು.ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ವಿಶೇಷ ಸ್ಥಾನಮಾನ ನೀಡಿದ್ದನ್ನು ತೀವ್ರವಾಗಿ ಟೀಕಿಸಿದ್ದರು. 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕಸಂಘ ಸ್ಥಾಪನೆಯಾಯಿತು. ದೇಶದ ಗತ ವೈಭವಕ್ಕೆ ಕೊಂಡೊಯ್ಯಬೇಕು, ಅಸ್ಮಿತೆಯನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಮುಖರ್ಜಿ ಯವರ ಮಾರ್ಗದರ್ಶನದಂತೆ ಭಾರತೀಯ ಜನತಾ ಪಾರ್ಟಿ ಸ್ಥಾಪನೆಗೊಂಡಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ದೀಪಕ್‌ದೊಡ್ಡಯ್ಯ ಮಾತನಾಡಿ, ಭಾರತ ಬ್ರಿಟಿಷರ ದಾಸ್ಯದ ಸಂ ಕೋಲೆಯಲ್ಲಿದ್ದಾಗ ಸ್ವಾತಂತ್ರö್ಯ ಪಡೆಯಬೇಕು ಎಂಬ ನಿಟ್ಟಿನಲ್ಲಿ ಅನೇಕ ನಾಯಕರು ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ್ದಾರೆ. ಜನಸಂಘದ ಸಂಸ್ಥಾಪಕರಾದ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ದೇಶದ ಸಮಗ್ರತೆಗಾಗಿ ಶ್ರಮಿಸಿದ್ದಾರೆ ಎಂದರು.
ಕಿರಿಯ ವಯಸ್ಸಿನಲ್ಲೇ ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ 1934ರಲ್ಲಿ ನೇಮಕಗೊಂಡರು. ಅವರ ಪ್ರತೀ ಕಾರ್ಯದಲ್ಲೂ ಮಾತಿನಲ್ಲೂ ದೇಶಾಭಿಮಾನ ಎದ್ದು ಕಾಣುತ್ತಿತ್ತು. ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರು ಶ್ರೇಷ್ಠ ವಿದ್ವಾಂಸರು ರಾಜನೀತಿ ತಜ್ಞ, ಅಸಾಧಾರಣ ಸಂಸದೀಯ ಪಟು, ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್‌ಶೆಟ್ಟಿ, ರವೀಂದ್ರ ಬೆಳವಾಡಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಜಿ.ಪಂ.ಮಾಜಿ ಸದಸ್ಯೆ ಜಸಂತಾಅನಿಲ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎನ್.ಎಂ. ಮಂಜು ನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡ ಗೌತಮ್ ಚಂದ್ ಇದ್ದರು.
ಕಾರ್ಯಕ್ರಮವನ್ನು ಬಿಜೆಪಿ ಸಹವಕ್ತಾರೆ ಅಂಕಿತಾ ನಿರೂಪಿಸಿದರು. ಜಿಲ್ಲಾ ಸಂಚಾಲಕ ಎಂ. ಎಸ್.ಚಂದ್ರಪ್ಪ ಸ್ವಾಗತಿಸಿದರು. ಎಸ್.ಡಿ.ಎಂ.ಮಂಜು ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!