May 2, 2024

MALNAD TV

HEART OF COFFEE CITY

ಹೆಚ್.ಡಿ. ತಮ್ಮಯ್ಯ ವಿರುದ್ದ ಮೂಲ ಕಾಂಗ್ರೆಸ್ಸಿಗರ ಭಿನ್ನಭಿನ್ನ ಅಪಸ್ವರ

1 min read

ಚಿಕ್ಕಮಗಳೂರು : ಚಿಕ್ಕಮಗಳೂರು ಕ್ಷೇತ್ರದಿಂದ ಈ ಬಾರಿಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮುಂದುವರೆದಿದ್ದು, ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸೆ ಕಾಂಗ್ರೆಸ್ಸಿಗರ ನಡುವೆ ಜಟಾಪಟಿ ಶುರುವಾಗಿದೆ.

ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಚರ್ಚಿಸದೆ, ನೇರವಾಗಿ ರಾಜ್ಯದ ವರಿಷ್ಠರನ್ನು ಭೇಟಿಯಾಗಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಹೆಚ್.ಡಿ. ತಮ್ಮಯ್ಯ ಅಪ್ಪಿಕೊಂಡಿದ್ದರು. ಇದರಿಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರ ಅಸಮಧಾನಕ್ಕೆ ಕಾರಣವಾಗಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಹಾಕಿದ್ದ ಟಿಕೆಟ್ ಆಕಾಂಕ್ಷಿಗಳು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದಿದ್ದ ಸಮನ್ವಯ ಸಭೆಯಲ್ಲಿ ಅಸಮಧಾನ ಬುಗಿಲೆದಿತ್ತು.

ಕಛೇರಿಯಲ್ಲಿ ಕೈಕೈ ಮಿಲಾಯಿಸಿದ ಮುಖಂಡರು

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ, ಆರಂಭದಿಂದಲ್ಲೂ ವಲಸೆ ಬಂದ ಹೆಚ್.ಡಿ. ತಮ್ಮಯ್ಯ ಕಾಂಗ್ರೆಸ್ ಮುಖಂಡರು ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಲೆ ಇದ್ದರು. ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಮಾಜಿ ಜಿಲ್ಲಾಧ್ಯಕ್ಷ ಡಾ|| ಡಿ.ಎಲ್. ವಿಜಯಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಯಾಜ್, ಮಹಡಿ ಮನೆ ಸತೀಶ್, ಎ.ಎನ್. ಮಹೇಶ್, ರೇಖಾ ಹುಲಿಯಪ್ಪಗೌಡ, ಬಿ.ಹೆಚ್. ಹರೀಶ್ ಸೇರಿದಂತೆ ಅರ್ಜಿ ಗುಜರಾಯಿಸದೆ ಟಿಕೆಟ್ ಗಾಗಿ ಪರೋಕ್ಷವಾಗಿ ಕಾದು ಕುಳಿತಿರುವ ಸಿ.ಎನ್. ಅಕ್ಮಲ್ ಸೇರಿದಂತೆ ಇನ್ನಿತರರು ನೂರಾರು ಜನ ಸೇರಿದ್ದ ಸಭೆಯಲ್ಲಿ ತಮ್ಮ ಮಾತಿನ ವೇಳೆ ಹೆಚ್.ಡಿ ತಮ್ಮಯ್ಯ ವಿರುದ್ದ ಅಸಮಧಾನ ಹೊರಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜೊತೆ ಒಳಗೊಳಗೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡುವವರಿಂದ ಕಾಂಗ್ರೆಸ್ 4 ಬಾರಿ ಸೋಲನ್ನು ಅನುಭವಿಸಿದೆ ಎಂದು ಅಸಮಧಾನ ಹೊರಬಂದಿತಲ್ಲದೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ವಲಸೆ ಬಂದಿರುವ ಹೆಚ್.ಡಿ. ತಮ್ಮಯ್ಯನಿಗೆ ವರಿಷ್ಟರು ಟಿಕೆಟ್ ನೀಡಿದರೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಮಾಡಿದ ದ್ರೋಹವಾಗಿದೆ ಎಂದು ಹಲವರು ಹೇಳಿದರೆ, ಯಾರಿಗೆ ಟಿಕೆಟ್ ನೀಡಿದರು ಕೆಲಸ ಮಾಡೋಣ ಎನ್ನುವವರ ವಿರುದ್ದ ಮಾತಿನ ಚಕಮಕಿ ಬೆಳೆದು ಕೈಕೈ ಮಿಲಾಯಿಸಿ, ಕಪಾಳ ಮೋಕ್ಷವು ಮಾಡಿ ಸಭೆ ರಣರಂಗವಾಗಿ ಮಾರ್ಪಟ್ಟು ಬೇಗುದಿ ಹೊರಬಿದ್ದಿತ್ತು.

ಮುಂದುವರೆದ ಮುಸ್ಲಿಂ ಸಮುದಾಯದ ಭಿನ್ನಮತ

ರಾಜ್ಯದ ಕಾಂಗ್ರೆಸ್ ವರಿಷ್ಠರೊಂದಿಗೆ ಉತ್ತಮ ಸಂಬಂಧ ಬೆಳೆಸಿರುವ ಹೆಚ್.ಡಿ. ತಮ್ಮಯ್ಯ ಅಳೆದು ತೂಗಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರೊಂದಿಗೆ ಚರ್ಚಿಸದೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಹಲವರಿಗೆ ನುಂಗಲರಾದ ಬಿಸಿತುಪ್ಪವಾಗಿದೆ. ಇದರಿಂದ ಚುನಾವಣೆಯಲ್ಲಿ ಹೆಚ್.ಡಿ. ತಮ್ಮಯ್ಯನಿಗೆ ಟಿಕೆಟ್ ಗ್ಯಾರಂಟಿ ಎಂಬ ಅನುಮಾನ ಮೂಡಿದ್ದು, ಇದು ಒಂದಿಲ್ಲೊಂದು ರೀತಿಯಲ್ಲಿ ಹೊರ ಬರುತ್ತಿದೆ.

ಸುದ್ದಿಗೋಷ್ಠಿ ಮೊರೆ ಹೋಗಿರುವ ಕಾಂಗ್ರೆಸ್ ಮುಖಂಡರು ಹೆಚ್.ಹೆಚ್. ದೇವರಾಜ್ ಸೇರಿದಂತೆ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರು ಮುಸ್ಲಿಂ ಅಸೋಷಿಯೇಷನ್, ಮುಸ್ಲಿಂ ಯುವ ಒಕ್ಕೂಟ ಸೇರಿದಂತೆ ಒಂದಿಲ್ಲೊಂದು ಸಂಘಟನೆಯ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸರಣಿ ಬಂಡಾಯದ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ತಮ್ಮ ಭಿನ್ನಮತವನ್ನು ಹೊರಹಾಕಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಅನೇಕೆ ರೀತಿಯ ದೌರ್ಜನ್ಯವಾಗಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯಾರಿಗಾದರೂ ಟಿಕೆಟ್ ನೀಡಿದರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ, ಆದರೆ ಬಿಜೆಪಿಯಿಂದ ವಲಸೆ ಬಂದಿರುವ ಹೆಚ್.ಡಿ. ತಮ್ಮಯ್ಯನಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ 37.000 ಮತದಾರರಿರುವ ಮುಸ್ಲಿಂ ಸಮುದಾಯ ಚುನಾವಣೆಯಲ್ಲಿ ತಟಸ್ಥಗೊಳ್ಳುತ್ತೇವೆ ಎನ್ನುವ ಮೂಲಕ ಒಂದು ಕಡೆ ಒಗ್ಗಟ್ಟಿನ ಮಂತ್ರ ಹಾಗೂ ಮತ್ತೊಂದೆಡೆ ವಲಸಿಗರಿಗೆ ಟಿಕೆಟ್ ನೀಡಲು ವಿರೋಧಿಸುವ ಮೂಲಕ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಮೂಲಕ ಒಂದಿಲ್ಲೊಂದು ಗುರಾಣಿ ಹಿಡಿದು ತಮ್ಮ ಅಸಮಧಾನ ಹೊರಹಾಕುತ್ತಿರುವ ಮೂಲ ಕಾಂಗ್ರೆಸ್ಸಿಗರು ಹಾಗೂ ವಸಲೆ ಕಾಂಗ್ರೆಸ್ಸಿಗರ ನಡುವೆ ಯಾರು ಟಿಕೆಟ್ ತರುತ್ತಾರೋ ಕಾದು ನೋಡಬೇಕು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!