May 17, 2024

MALNAD TV

HEART OF COFFEE CITY

ರಾಜ್ಯ ಬಿಜೆಪಿ ಸರ್ಕಾರ ಜನರ ಆಶೀರ್ವಾದದಿಂದ ಬಂದ ಸರ್ಕಾರವಲ್ಲ.- ರಾಹುಲ್ ಗಾಂಧಿ

1 min read

ರಾಜ್ಯ ಬಿಜೆಪಿ ಸರ್ಕಾರ ಜನರ ಆಶೀರ್ವಾದದಿಂದ ಬಂದ ಸರ್ಕಾರವಲ್ಲ. ಶಾಸಕರನ್ನು ಕಳ್ಳತನ ಮಾಡಿ ರಚಿಸಿದ ಸರ್ಕಾರ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಮಂಗಳವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಸಣ್ಣ ಮಕ್ಕಳನ್ನು ಕೇಳಿದರೂ ಇದು 40 ಪಾರ್ಸೆಂಟ್ ಸರ್ಕಾರ ಎನ್ನುತ್ತಾರೆ. ಭ್ರಷ್ಟಚಾರದಿಂದ ಬಂದ ಹಣದಿಂದ ಶಾಸಕರನ್ನು ಖರೀಸಿ ಕಳ್ಳ ಸರ್ಕಾರ ರಚನೆ ಮಾಡಿ ವ್ಯಾಪಕ ಭ್ರಷ್ಟ ಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಾರೆ. ಇಲ್ಲಿ ನಡೆದಿರುವ ಭ್ರಷ್ಟಚಾರದ ಬಗ್ಗೆ ಮಾತನಾಡುವುದಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಧಾನಿಗೆ ಪತ್ರ ಬರೆದಿದ್ದು, ಆ ಪತ್ರಕ್ಕೂ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ಎಲ್ಲಾ ಶಾಸಕರು ಮೇಲೆ 40 ಪಾರ್ಸೆಂಟ್ ಭ್ರಷ್ಟಚಾರ ಆರೋಪವಿದೆ ಎಂದು ಹೇಳಿದರು.
ನಾವು ಭಾಷಣ ಮಾಡುವ ಸಂದರ್ಭದಲ್ಲಿ ನಮ್ಮ ರಾಜ್ಯ ನಾಯಕರ ಹೆಸರು ಹೇಳುತ್ತೇವೆ. ಆದರೆ, ಪ್ರಧಾನಿಯವರು ಯಾವ ನಾಯಕರ ಹೆಸರನ್ನು ಹೇಳುವುದಿಲ್ಲ. ತಮ್ಮ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವುದು ಪ್ರಧಾನಿಯವರ ಚುನಾವಣೆಯಲ್ಲ. ರಾಜ್ಯದ ಚುನಾವಣೆ, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಹಿಂದಿನ ಪ್ರಣಾಳಿಕೆಯ ಶೇ.60ರಷ್ಟು ಕೆಲಸ ಬಾಕೀ ಇದೆ. ರಾಜ್ಯದಿಂದ ಸಂಗ್ರಹವಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ನೀಡಿಲ್ಲ ಎಂದು ದೂರಿದರು.
ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕುಡಿಯುವ ನೀರು ಸಮಸ್ಯೆ ಉದ್ಬವವಾದ ಸಂದರ್ಭದಲ್ಲಿ ಕರ್ನಾಟಕದ ಪರ ಪ್ರಧಾನಿ ನಿಲ್ಲಲಿಲ್ಲ. ರಾಜ್ಯದಲ್ಲಿ ನಿರುದ್ಯೋಗ ಸೇರಿದಂತೆ ಬೆಲೆಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇದಕ್ಕೆಲ್ಲ ಪ್ರಧಾನಿಯವರು ಏನು ಮಾಡಿದ್ದಾರೆ. ಭಾಷಣದಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುವ ಬದಲು ಮುಂದೇ ತಾವೇನು ಮಾಡುತ್ತೇವೆ ಎನ್ನುವುದಾದರೂ ಹೇಳಲಿ ಎಂದರು.

ರಾಜ್ಯದ ಸಹಸ್ರಾರು ಮಹಿಳೆಯರಿಗಾಗಿ ಕಾಂಗ್ರೆಸ್ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಪ್ರತೀ ಕುಟುಂಬಕ್ಕೆ 2ಸಾವಿರ ರೂ. ಅನ್ನಭಾಗ್ಯದಡಿಯಲ್ಲಿ 10ಕೆ.ಜಿ.ಅಕ್ಕಿ, ಗೃಹ ಜ್ಯೋತಿ ಯೋಜನೆ. ಪ್ರತೀ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪದವಿಧರರಿಗೆ ಭತ್ಯೆ ಸೇರಿದಂತೆ ಲಕ್ಷಾಂತರ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಸರ್ಕಾರ ರಚನೆಯಾದ ಬಳಿಕ ಮೊದಲ ಕ್ಯಾಬಿನೇಟ್‌ನಲ್ಲೇ ಜಾರಿಗೊಳಿಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ರೈತರಿಗಾಗಿ 1.50 ಯೋಜನೆ ರೂಪಿಸಲಾಗಿದೆ. ಹೈನುಗಾರಿಕೆಯ ಸಬ್ಸಿಡಿಯನ್ನು 5 ರೂ ಬದಲಾಗಿ 7 ರೂ.ನೀಡಲಾಗುವುದು. ಸರ್ಕಾರ ಬಂದ ಮೊದಲ ದಿನವೇ ಮಾಡಲಾಗುವುದು.
ಬಿಜೆಪಿಯವರಿಗೆ 40 ಎಂದರೆ ಬಹಳ ಪ್ರೀತಿ ಅದಕ್ಕಾಗಿ ಅವರಿಗೆ ಜನರು 40 ಸ್ಥಾನವನ್ನೇ ನೀಡಿ ಕಾಂಗ್ರೆಸ್‌ಗೆ 150 ಸ್ಥಾನಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಬಹುಮತ ಸರ್ಕಾರ ರಚನೆಗೆ ಅನುಕೂಲ ಮಾಡಿಕೊಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಟಿ.ಡಿ.ರಾಜೇಗೌಡ, ನಯನಮೋಟಮ್ಮ, ಕೆ.ಎಸ್.ಆನಂದ್, ಬಿ.ಎಲ್.ಶಂಕರ್, ಡಾ|ಕೆ.ಪಿ.ಅಂಶುಂತ್, ಗಾಯತ್ರಿಶಾಂತೇಗೌಡ ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಅನೇಕರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!