May 17, 2024

MALNAD TV

HEART OF COFFEE CITY

ಲಿಂಗಾಯತರ ಡ್ಯಾಂ ಒಡೆದಿದೆ ಎಂದು ಡಿ.ಕೆ.ಶಿವಕುಮಾರ್ ಮಾತಿನ ಅರ್ಥ ಲಿಂಗಾಯತರನ್ನು ಪ್ರಸಂಶೆ ಮಾಡಿದ್ದಲ್ಲ. ನಿಮ್ಮ ಒಗ್ಗಟ್ಟನ್ನು ಒಡೆದಿದ್ದೇವೆ ಎಂದರ್ಥ-ಸಿ.ಟಿ.ರವಿ

1 min read

ಚಿಕ್ಕಮಗಳೂರು-ಲಿಂಗಾಯತರ ಡ್ಯಾಂ ಒಡೆದಿದೆ ಎಂದು ಡಿ.ಕೆ.ಶಿವಕುಮಾರ್ ಮಾತಿನ ಅರ್ಥ ಲಿಂಗಾಯತರನ್ನು ಪ್ರಸಂಶೆ ಮಾಡಿದ್ದಲ್ಲ. ನಿಮ್ಮ ಒಗ್ಗಟ್ಟನ್ನು ಒಡೆದಿದ್ದೇವೆ ಎಂದರ್ಥ. ಇಡೀ ಲಿಂಗಾಯತರನ್ನು ಮಹಾ ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದರು ಇದೆಲ್ಲವನ್ನೂ ಪಕ್ಷದ ವೀರಶೈವ-ಲಿಂಗಾಯತ ಸಮಾಜಕ್ಕೆ ಮನವರಿಕೆ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಕರೆ ನೀಡಿದರು.ಅವರು ಸೋಮವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವೀರಶೈವ-ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದರು.ವೀರಶೈವ, ಲಿಂಗಾಯತ ಎಂದು ಒಡೆದಾಳುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದೆಲ್ಲವೂ ಮುನ್ನೆಲೆಗೆ ಬರಬೇಕು. ಇದರ ಜೊತೆಗೆ ಕ್ಷೇತ್ರದಲ್ಲಿ ನಾವು ಮಾಡಿದ ಅಭಿವೃದ್ಧಿ ವಿಚಾರಗಳನ್ನೂ ಜನರ ಮುಂದಿಡಬೇಕು ಎಂದು ತಿಳಿಸಿದರು.
ಯಡಿಯೂರಪ್ಪ ವಿಜಯ ಸಂಕಲ್ಪ ಯಾತ್ರೆಗೆ ಬರುವುದೇ ಇಲ್ಲ ಎಂದು ಕಾಂಗ್ರೆಸ್‍ನವರು ಪ್ರಚಾರ ಮಾಡಿದರು. ಆದರೆ ಅವರು ಬಂದರು. ಐದಕ್ಕೆ ಐದೂ ಕ್ಷೇತ್ರವನ್ನು ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಕರೆ ನೀಡಿದರೆ, ಇದೇ ಕಾಂಗ್ರೆಸಿಗರು ಯಾರ ಹೆಸರನ್ನೂ ಅವರು ಹೇಳಲೇ ಇಲ್ಲ ಎಂದು ಕೊಂಕು ಮಾತನಾಡಿದರು. ಆದರೆ ಅಂದು ಯಾರು ಅಭ್ಯರ್ಥಿ ಎನ್ನುವುದು ಇನ್ನು ತೀರ್ಮಾನವೇ ಆಗಿರಲಿಲ್ಲ. ಯಡಿಯೂರಪ್ಪ ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರು ಅವರು ನನ್ನ ಹೆಸರೊಂದನ್ನೇ ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದ್ದರೆ ಅದನ್ನೂ ವಿವಾದ ಮಾಡುತ್ತಿದ್ದರು ಎಂದರು.ವಿಜಯೇಂದ್ರ ಅವರು ಬಂದು ಬಿಜೆಪಿಯನ್ನು ಗೆಲ್ಲಿಸಿ ಎಂದು ಹೇಳಿದರು. ಅವರು ನಮ್ಮನ್ನು ಮಾರ್ಗದರ್ಶಕರು ಎಂದೂ ಹೇಳಿದರು. ನಮ್ಮ ಅವರ ನಡುವೆ ಉತ್ತಮ ಸಂಬಂಧಗಳಿವೆ. ಆದರೂ ಕಾಂಗ್ರೆಸ್‍ನವರು ಸುಳ್ಳು ಪ್ರಚಾರ ಮಾಡುವ ಪ್ರಯತ್ನ ನಡೆಸಿದ್ದಾರೆ. ಇಂತಹ ಪ್ರಯತ್ನಗಳಿಂದ ಬಿಜೆಪಿ ಮತಗಳಿಗೆ ತೊಂದರೆ ಕೊಡಲು ಸಾಧ್ಯವಿಲ್ಲ ಎಂದರು.
ಬಿಜೆಪಿ ವೀರಶೈವ-ಲಿಂಗಾಯತ ಮುಖಂಡ ಬೀಕನಹಳ್ಳಿ ಸೋಮಶೇಖರ್ ಮಾತನಾಡಿ, ಚುನಾವಣೆ ಘೋಷಣೆ ಆರಂಭದಲ್ಲಿ ಇದ್ದ ಸಣ್ಣ ಗೊಂದಲ ಈಗ ತಿಳಿಯಾಗಿದೆ. ಮುಂದಿನ ಹತ್ತು ದಿನಗಳ ಕಾಲ ನಮ್ಮ ಜವಾಬ್ದಾರಿ ದೊಡ್ಡದಿದೆ. ಕೆಳ ಹಂತದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಬೂತ್, ಹೋಬಳಿ, ಊರುಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡಬೇಕಿದೆ. ಏನೇ ಒತ್ತಡಗಳು ಬಂದರೂ ಸಹ ನಮ್ಮ ಕಾರ್ಯಕರ್ತರಾರೂ ವಿಚಲಿತರಾಗಿಲ್ಲ. ಕಾಂಗ್ರೆಸ್‍ಗೆ ಯಾರೊಬ್ಬರೂ ಹೋಗಿಲ್ಲ. ಎಲ್ಲರೂ ಪಕ್ಷದಲ್ಲೇ ಗಟ್ಟಿಯಾಗಿ ದುಡಿಯುತ್ತಿದ್ದಾರೆ. ನಮ್ಮ ಸಂಘಟನೆ ಗಟ್ಟಿ ಇರುವುದರಿಂದ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಚಿಕ್ಕಮಗಳೂರಿನ ಇತಿಹಾಸದಲ್ಲಿ ವೀರಶೈವರೊಬ್ಬರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ ಎಂದರೆ ಅದು ವೀರಶೈವ ಮುಖಂಡ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು, ದೊಡ್ಡ ಪ್ರಮಾಣದಲ್ಲಿ ಡಿಸಿಸಿ ಬ್ಯಾಂಕ್‍ನಿಂದ ಸಾಲ ಪಡೆಯುತ್ತಿದ್ದರೆ ಅದಕ್ಕೆ ಕಾರಣ ನಮ್ಮವರೇ ಅಧ್ಯಕ್ಷರಾಗಿರುವುದು ಕಾರಣ ಎಂಬುದನ್ನು ಮನಗಾಣಬೇಕು ಎಂದರು.ಜಿ.ಪಂ. ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಕಾಂಗ್ರೆಸಿಗರಿಗೆ ಹೇಳಿಕೊಳ್ಳಲು ಬೇರೆ ವಿಚಾರಗಳಿಲ್ಲ. ಜಾತಿ ಹೇಳಿಕೊಂಡು ಹೊರಟಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಹಿಂದೆ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ಸಮಾಜದ ಮುಖಂಡರು ಸಹ ಈಗ ಕಾಣುತ್ತಿಲ್ಲ. ಯಾರು ಏನೇ ಹೇಳಿದರೂ ನಮ್ಮ ಭಾಗದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಮುನ್ನಡೆ ಬಿಜೆಪಿಗೆ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ವೀರಶೈವ ಮುಖಂಡರುಗಳಾದ ಚಟ್ನಳ್ಳಿ ಮಹೇಶ್, ಬೀಕನಹಳ್ಳಿ ಸೋಮಶೇಖರ್, ತಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಪ್ಪ, ಕಳಸಾಪುರ ಬಸವರಾಜ್, ಚಿಕ್ಕದೇವನೂರು ರವಿ, ಸೇರಿದಂತೆ ಪಕ್ಷದ ಲಿಂಗಾಯತ ಮುಖಂಡರುಗಳು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!