May 17, 2024

MALNAD TV

HEART OF COFFEE CITY

ಕಾಂಗ್ರೆಸ್‍ಗೆ ಮತ ಕೇಳುತ್ತಿರುವ ಜೆಡಿಎಸ್ ಎಂಎಲ್ಸಿ ಎಸ್.ಎಲ್.ಬೊಜೇಗೌಡ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಹಕ್ಕಿಲ್ಲ- ಎಚ್.ಸಿ.ಕಲ್ಮರುಡಪ್ಪ

1 min read

 ಪಕ್ಷದಲ್ಲಿದ್ದುಕೊಂಡೇ ಕಾಂಗ್ರೆಸ್‍ಗೆ ಮತ ಕೇಳುತ್ತಿರುವ ಜೆಡಿಎಸ್ ಎಂಎಲ್ಸಿ ಎಸ್.ಎಲ್.ಬೊಜೇಗೌಡ ಅವರಿಗೆ ನೈತಿಕತೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಹಕ್ಕಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಹೇಳಿದರು.
ಜೆಡಿಎಸ್ ಎಂಎಲ್ಸಿ ಬೋಜೇಗೌಡ ಅವರು ಕಾಂಗ್ರೆಸ್‍ಗೆ ಮತ ಕೇಳುತ್ತಿದ್ದಾರೆ. ಅವರ ಇಡೀ ಕುಟುಂಬ ಜೆಡಿಎಸ್ ಋಣವನ್ನ ತೀರಿಸಲು ಸಾಧ್ಯವಿಲ್ಲ. ಇಂದಿಗೂ ಎಂಎಲ್ಸಿ ಆಗಿರುವುದು ಜೆಡಿಎಸ್ ಕೃಪಾ ಕಟಾಕ್ಷದಿಂದಲೇ ಸಿ.ಟಿ.ರವಿ ಮೇಲೆ ಅಷ್ಟೊಂದು ದ್ವೇಷ ಇದ್ದಿದ್ದರೆ ಜೆಡಿಎಸ್ ತೊರೆದು ಕಾಂಗ್ರೆಸ್ ಬೆಂಬಲಿಸಿ ನೈತಿಕತೆ ಉಳಿಸಿಕೊಳ್ಳಬಹುದಿತ್ತು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೈತಿಕ ಮೈತ್ರಿ ಮಾಡಿ ಕಾಂಗ್ರೆಸ್‍ಗೆಲ್ಲಿಸುತ್ತೇವೆ ಎನ್ನುವ ಭ್ರಮೆಯನ್ನು ಮೇ.13 ರಂದು ಮತದಾರರು ಹುಸಿಗೊಳಿಸಲಿದ್ದಾರೆ ಎಂದರು.ಶಾಂತವಾಗಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜನರ ಮನಸ್ಸಿನಲ್ಲಿ ಜಾತಿಯ ವಿಷಬೀಜವನ್ನು ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬೋಜೇಗೌಡರು ಪ್ರಯತ್ನಿಸುತ್ತಿದ್ದಾರೆ. ಹಾಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಅಧಿಕಾರ ಪಡೆಯಲು ಹಪಹಪಿಸುತ್ತಿದ್ದಾರೆ. ಇದನ್ನು ಮತದಾರರು ಗಮನಿಸುತ್ತಿದ್ದು, ಮತ್ತೆ ಏಕವಚನದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವ ವ್ಯಕ್ತಿ ಬೇಕೋ ಬೇಡವೋ ಎಂಬುದನ್ನು ಯೋಚಿಸಬೇಕು ಎಂದರು.
ಬೋಜೇಗೌಡರ ಕುತಂತ್ರ ಮತ್ತು ಅನೈತಿಕ ರಾಜಕಾರಣ ಚಿಕ್ಕಮಗಳೂರಿನ ಜನತೆಗೆ ಗೊತ್ತಿದೆ, ಹಾಗಾಗಿ 10 ನೇ ತಾರೀಖು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ದಾಖಲೆಯ ಮತಗಳನ್ನು ಕೊಡುವುದರ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದರು.

ನಿನ್ನೆ ಹೌಸಿಂಗ್‍ಬೋರ್ಡ್‍ನಲ್ಲಿ ದಾಸ್ತಾನು ಇಟ್ಟಿದ್ದ 25 ಲಕ್ಷ ರೂ. ಗಳ ಮೌಲ್ಯದ, 450 ಬಾಕ್ಸ್, 21600 ಬಾಟಲಿಗಳು ಅಕ್ರಮ ಗೋವಾ ಮದ್ಯ ದಾಸ್ತಾನು ವಶಪಡಿಸಿಕೊಂಡು ಎಫ್‍ಎಸ್‍ಟಿ ಮತ್ತು ಎಸ್‍ಎಸ್‍ಟಿ ತಂಡ ತನಿಖೆಯನ್ನು ನಡೆಸುತ್ತಿದೆ. ಇದು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಸೇರಿದ ಮದ್ಯ ಎಂಬ ಗುಮಾನಿ ಇದೆ. ಜನರಿಗೆ ವಿಷಕಾರಿ ಮದ್ಯವನ್ನು ಕುಡಿಸಿ, ಹಣವನ್ನು ಹಂಚಿ ಮತ ಪಡೆಯಲು ಪ್ರಯತ್ನಿಸುತ್ತಿದೆ ಇದರಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಗುಬ್ಬಿಹಳ್ಳಿಯಲ್ಲಿ ನಡೆದÀ ಶೂಟೌಟ್ ಪ್ರಕರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪಾತ್ರ ಏನು ಎನ್ನುವ ಬಗ್ಗೆ ತನಿಖೆ ಆಗಬೇಕು. ಇದರಲ್ಲಿ ಕೋಟಾ ನೋಟಿನ ವ್ಯವಹಾರ ನಡೆದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ ಭಾರೀ ಪ್ರಮಾಣದ ಅಕ್ರಮ ಮದ್ಯವೂ ಪತ್ತೆಯಾಗಿದೆ. É ಇದನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ಮಾಡಿ ಇದರ ಹಿಂದೆ ಯಾರಿದ್ದಾರೆ ಎಂದ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಪುಷ್ಪರಾಜ್, ಪುಟ್ಟೇಗೌಡ, ಟಿ.ರಾಜಶೇಖರ್, ದೇವರಾಜ ಶೆಟ್ಟಿ ಇದ್ದರು.ಜಿಲ್ಲೆಯಲ್ಲಿ ಒಟ್ಟು 1222 ಬೂತ್‍ಗಳಿದ್ದು 16 ಸಾವಿರಕ್ಕೂ ಅಧಿಕ ಬೂತ್ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಗೂ 18 ಸಾವಿರಕ್ಕೂ ಅಧಿಕ ಪೇಜ್ ಪ್ರಮುಖರು ಈಗಾಗಲೇ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾದ್ಯಕ್ಷ ಕಲ್ಮರುಡಪ್ಪ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯ ಕರಪತ್ರ ಹಾಗೂ ಸ್ಥಳೀಯ ಶಾಸಕರ ಸಾಧನೆಗಳ ಕರಪತ್ರಗಳನ್ನು ಮನೆ ಮನೆಗೆ ಎರಡುಬಾರಿ ತಲುಪಿಸಲಾಗಿದೆ. ಐದು ವಿಧಾನಸಭಾ ಕ್ಷೇತ್ರಗಳ 9 ಮಂಡಲಗಳಲ್ಲಿ ವಿವಿಧ ಮೋರ್ಚಾಗಳು ಸೇರಿದಂತೆ ಶಕ್ತಿಕೇಂದ್ರ, ಮಹಾಶಕ್ತಿಕೇಂದ್ರ, ಬೂತ್‍ಮಟ್ಟದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂಡಲ ಮತ್ತು ಜಿಲ್ಲಾ ಸ್ಥರದ ಪದಾಧಿಕಾರಿಗಳು ತಮ್ಮ ತಮ್ಮ ಗ್ರಾ.ಪಂ ಮತ್ತು ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣಾ ಕಾರ್ಯ ಮಾಡುತ್ತಿದ್ದಾರೆ ಎಂದರು
ಜಿಲ್ಲೆಯಲ್ಲಿ 11 ಲಕ್ಷಕ್ಕೂ ಅಧಿಕ ಮತದಾರರಿದ್ದು ನಮ್ಮ ಕಳೆದ 5 ವರ್ಷದ ಸಾಧನೆಯ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದೇವೆ. ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ಮತಪ್ರಚಾರ ಮಾಡಲಿದ್ದಾರೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!