May 15, 2024

MALNAD TV

HEART OF COFFEE CITY

ಬಡ ಕುಟುಂಬ ಕಣ್ಣೀರು ಒರೆಸಿದ ಉಸ್ತುವಾರಿ ಸಚಿವರು

1 min read
The minister in charge wiped the tears of the poor family:

The minister in charge wiped the tears of the poor family:

 

ಚಿಕ್ಕಮಗಳೂರು : ಮಲೆನಾಡಲ್ಲಿ ಸುರಿಯುತ್ತಿರುವ ಮಹಾಮಳೆ ನೂರಾರು ಜನರನ್ನ ಬೀದಿಗೆ ಬೀಳಿಸುತ್ತಿದೆ. ನಿರಂತರ ಮಳೆಯಿಂದ ಮಲೆನಾಡಿಗರ ಬದುಕು ಶೋಚನೀಯ ಸ್ಥಿತಿಗೆ ತಂದೊಡ್ಡಿದೆ‌. ಮಳೆಯ ನಡುವೆ ಟಾರ್ಪಲ್ ಕಟ್ಟಿಕೊಂಡು ಬದುಕು ಸಾಗಿಸುತ್ತಿರೋ ಮೂಡಿಗೆರೆಯ ಬಡ ಕುಟುಂಬದ ಕಥೆ ಕಣ್ಣೀರು ತರಿಸುವಂತಿದೆ.

ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಆಜಾದ್ ರಸ್ತೆಯಲ್ಲಿರುವ ಲೀಲಾ ಎಂಬುವರ ಮನೆ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆ ಹಾನಿಯಾಗಿದ್ದು, ನೆಲೆಸಲು ನೆರಳಿಲ್ಲದೇ ಪಕ್ಕದಲ್ಲೇ ಟಾರ್ಪಲ್‍ನಿಂದ ಟೆಂಟ್ ಕಟ್ಟಿಕೊಂಡು ದಿನ ದೂಡುತ್ತಿದ್ದು, ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಲೀಲಾ ಅವರಿಗೆ ನಾಲ್ಕು ಜನ ಮಕ್ಕಳಿದ್ದು, ಗಂಡ ಮೃತಪಟ್ಟಿದ್ದಾರೆ. ಇದ್ದ ಮನೆಯೂ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ಗೋಡೆ ಗಳು ಮಾತ್ರ ಉಳಿದುಕೊಂಡಿದೆ. ಮನೆ ಕಳೆದುಕೊಂಡು ದಿಕ್ಕು ಕಾಣದ ಅವರು ಪಕ್ಕದಲ್ಲೇ ಟಾರ್ಪಲ್‍ನಿಂದ ಟೆಂಟ್ ಕಟ್ಟಿಕೊಂಡು ಅಲ್ಲೇ ವಾಸ ಮಾಡುತ್ತಿದ್ದಾರೆ.

ಮನೆ ಕಳೆದುಕೊಂಡ ಲೀಲಾ ನಾಲ್ಕು ಜನ ಮಕ್ಕಳೊಂದಿಗೆ ಟಾರ್ಪಲ್‍ನಿಂದ ನಿರ್ಮಿಸಿ ಕೊಂಡಿರುವ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಹೊರಗಡೆ ಭೋರ್ಗರೆಯುವ ಮಳೆ, ಮತ್ತೊಂದು ಕಡೆ ಚಳಿ ಗಾಳಿಯ ನಡುವೆ ಜೀವ ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಟಾರ್ಪಲ್‍ನಿಂದ ನಿರ್ಮಿಸಿಕೊಂಡಿರುವ ಗುಡಿಸಲಿನಲ್ಲಿ ಮಳೆ ನೀರು ನುಗ್ಗತ್ತದೆ. ನೆಲವೆಲ್ಲ ತಂಡಿಯಾಗಿದೆ. ಮನೆಯ ಕಷ್ಟವನ್ನು ನೋಡಿ ಓದುತ್ತಿದ್ದ ಓರ್ವ ಮಗಳು ಓದು ನಿಲ್ಲಿಸಿ ದಿನ ಗೂಲಿಗೆ ಹೋಗಿ ದುಡಿದು ತಂದು ಮನೆ ನಿರ್ವಹಿಸುವ ಸ್ಥಿತಿ ಇದ್ದು ಇಂದೊಂದು ಕರುಣಾ ಜನಕ ಕಥೆಯಾಗಿದೆ.

ಲೀಲಾ ಅವರ ಮೂರು ಜನ ಮಕ್ಕಳು ಸದ್ಯ ಓದುತ್ತಿದ್ದಾರೆ. ಅವರು ಈ ಗುಡಿಸನಲ್ಲಿ ಬುಡ್ಡಿಯನ್ನಿಟ್ಟುಕೊಂಡು ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಇಲ್ಲದೇ ಮಕ್ಕಳು ಓದಲು ಹರಸಾಹಸ ಪಡುವಂತಾಗಿದೆ. ಮಳೆ ಲೀಲಾ ಅವರ ಬದುಕು ಮೂರಾಬಟ್ಟೆಯಾಗಿ ಸಿದೆ. ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಲೀಲಾ ಅವರ ನೆರವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಧಾವಿಸಬೇಕಿದೆ.

ಇನ್ನು ಲೀಲಾ ಕುಟುಂಬದ ಸ್ಥಿತಿ ಕಂಡು ಸ್ಥಳೀಯೊಬ್ಬರು ಉಸ್ತುವಾರಿ ಸಚಿವರಿಗೆ ಮಾಹಿತಿ ತಿಳಿಸುತ್ತಿದ್ದಂತೆ ಲೀಲಾ ಮನೆಗೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಭೇಟಿ, ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಸರ್ಕಾರ ನಿಮ್ಮೊಟ್ಟಿಗೆ ಇದೆ, ಕೂಡಲೇ ಪರಿಹಾರ ಕೊಡತ್ತೇವೆ ಎಂದು ಭರವಸೆ ನೀಡಿದರು.

 

ಇನ್ನು ಬಡ ಕುಟುಂಬ ಸ್ಥಿತಿ ಕಂಡ ಉಸ್ತುವಾರಿ ಸಚಿವರು ತಕ್ಷಣವೇ ತಮ್ಮ ಜೇಬಿನಲ್ಲಿದ್ದ 50 ಸಾವಿರ ಹಣ ನೀಡಿ ಕುಟುಂಬದ ನೆರವಿಗೆ ನಿಂತರು. 50 ಸಾವಿರ ಹಣ ನೀಡಿ ಇದನ್ನ ಮಕ್ಕಳ ವಿದ್ಯಾಭ್ಯಾಸ ಕ್ಕೆ ಬಳಸಿ ಸರ್ಕಾರದ ಪರಿಹಾರ ದಲ್ಲಿ ಮನೆ ಕಟ್ಟಿಸಿಕೊಳ್ಳಿ ಎಂದರು…

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!