May 7, 2024

MALNAD TV

HEART OF COFFEE CITY

ದಶಕಗಳ ಬಳಿಕ ಕೋಡಿ ಬಿದ್ದ ಐತಿಹಾಸಿಕ ಬೆಳವಾಡಿ ಕೆರೆ

1 min read

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ಹಳ್ಳ ಕೊಳ್ಳಗಳು ನದಿ ಹೊಳೆಗಳು ತುಂಬಿ ಹರಿಯುತ್ತಿವೆ. ಈ ವರ್ಷದ ಮಳೆ ಯಿಂದಾಗಿ ದಶಕಗಳಿಗೂ ಹೆಚ್ಚು ಕಾಲ ಖಾಲಿಯಾಗಿದ್ದ ಬೆಳವಾಡಿಯ ದೊಡ್ಡ ಕೆರೆ ಈ ಬಾರಿ ತುಂಬಿ ಕೋಡಿ ಬಿದ್ದಿದೆ.

ಶುಭ ಕೃತ್ ಸಂವತ್ಸರದ ಆಷಾಢ ಮಾಸದಲ್ಲಿ ಸುರಿಯುತ್ತಿರುವ ವರುಣನ ಕೃಪೆಯಿಂದಾಗಿ ದಶಕಗಳಿಗೂ ಕಾಲ ಬಿರು ಬರಗಾಲಕ್ಕೆ ತುತ್ತಾಗಿ ಸಂಪೂರ್ಣ ಖಾಲಿಯಾಗಿದ್ದ ಕೆರೆ ತುಂಬಿದೆ.

ಬೆಳವಾಡಿ ಕೆರೆಗೆ ಗತಕಾಲದ ಇತಿಹಾಸವೇ ಇದ್ದು ಈ ಕೆರೆಯನ್ನು ಹೊಯ್ಸಳರ ಕಾಲದಲ್ಲಿ ಕಟ್ಟಿಸಲಾಗಿತ್ತು. ಬರಗಾಲದ ಸೀಮೆಯಾದ ಬೆಳವಾಡಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ನೀರುಣಿಸುವ ದೃಷ್ಟಿಯಿಂದ ನೂರಾರು ಎಕರೆ ವ್ಯಾಪ್ತಿಯಲ್ಲಿ ಬೆಳವಾಡಿಯಲ್ಲಿ ಕೆರೆಯನ್ನು ನಿರ್ಮಿಸಲಾಗಿತ್ತು. ಕೆರೆಯ ಅಗಾದತೆಯಿಂದ ದೊಡ್ಡ ಕೆರೆ ಎಂದೇ ಪ್ರಖ್ಯಾತಿಗೊಂಡಿತ್ತು. ಬೆಳವಾಡಿ ದೊಡ್ಡಕೆರೆ ತುಂಬಿದರೆ ಮಳೆ ಉತ್ತಮವಾಗಿದ್ದು, ಸುತ್ತಮುತ್ತಲ ಗ್ರಾಮಗಳು ಹಸಿರಿನಿಂದ ಕಂಗೊಳಿಸುವುದಲ್ಲದೆ, ಅಂತರ್ಜಲ ಭರ್ತಿಯಾಗಿ ಕೆರೆಕಟ್ಟುಗಳು ತುಂಬಿ, ಜನಸಾಮಾನ್ಯರಿಗೆ, ಧನ ಕರುಗಳಿಗೆ ನೀರಿನ ಸೆಲೆ ಆಗುತ್ತಿತ್ತು.

ಆದರೆ ಸತತ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಉತ್ತಮ ಮಳೆ ಯಾಗದೆ, ಬರಗಾಲಕ್ಕೆ ತುತ್ತಾಗಿದ್ದ ಬಯಲು ಸೀಮೆಯಲ್ಲಿ ಬೆಳವಾಡಿಯ ದೊಡ್ಡಕೆರೆಯು ಸಹ 15 ವರ್ಷಗಳಿಂದ ನೀರಿಲ್ಲದೆ ಬರಡಾಗಿತ್ತು.

ಬೆಳವಾಡಿಯ ದೊಡ್ಡಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ತುಂಬಿಸಲು ಬಹು ಕೋಟಿ ರೂಪಾಯಿಗಳ ಕರಗಡ ಏತ ಕುಡಿಯುವ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಿತ್ತು. ಆದರೆ ಮನುಷ್ಯನ ದೂರದೃಷ್ಟಿ ಇಲ್ಲದ ಕೆಲಸದಿಂದ ಕಾಲುವೆಯಲ್ಲಿ ನೀರು ಸರಾಗವಾಗಿ ಸಾಗದೆ ಮೋಟಾರ್ ಗಳ ಮೂಲಕ ಲಿಫ್ಟ್ ಮಾಡಿ ಕೆರೆ ತುಂಬಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದು ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗಿತ್ತು.

ಆದರೆ ಪ್ರಕೃತಿ ಒಲಿದರೆ ಅಸಾಧ್ಯವೂ ಕೂಡ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಬೆಳವಾಡಿಯ ದೊಡ್ಡಕೆರೆ ತುಂಬಿ ಕೋಡಿ ಬಿದ್ದಿದೆ. ಬೆಳವಾಡಿ ದೊಡ್ಡಕೆರೆ ತುಂಬಿರುವುದರಿಂದ ಅಂತರ್ಜಲ ಹೆಚ್ಚುತ್ತದೆ. ಬೋರ್ವೆಲ್ ಗಳು ಮರುಪೂರಣವಾಗುತ್ತದೆ. ಅಲ್ಲದೆ ಸುತ್ತಮುತ್ತಲ 15 ಹಳ್ಳಿಗಳ ಜನರುಗಳಿಗೆ, ಧನಕರುಗಳಿಗೆ ಕುಡಿಯುವ ನೀರಿಗೆ ಮೂಲವಾಗುತ್ತದೆ.

ಒಟ್ಟಾರೆಯಾಗಿ ಬಹು ದಶಕಗಳಿಂದ ಬರಗಾಲದಿಂದ ತತ್ತರಿಸಿದ್ದ ಬೆಳವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಬೆಳವಾಡಿಕೆರೆ ತುಂಬಿರುವುದು ಹರ್ಷದಾಯಕವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!