April 30, 2024

MALNAD TV

HEART OF COFFEE CITY

ಅಗ್ನಿಶಾಮಕದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ ಬೆಟ್ಟದ ತಾಯಿ ದೇವೀರಮ್ಮನ ಭಕ್ತರು

1 min read

ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದ ಶಕ್ತಿದೇವತೆ ದೇವೀರಮ್ಮ ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದ ಗುಡ್ಡದ ತುದಿಯಲ್ಲಿ ನೆಲೆಸಿದ್ದಾಳೆ. ವರ್ಷದ 365 ದಿನವೂ ಬಿಂಡಿಗ ಗ್ರಾಮದಲ್ಲಿ ದರ್ಶನ ನೀಡೋ ಆ ತಾಯಿ ವರ್ಷಕ್ಕೊಮ್ಮೆ ಗುಡ್ಡದ ತುದಿಯಲ್ಲಿ ದರ್ಶನ ನೀಡುತ್ತಿದ್ದಾಳೆ. ಆಕೆಯನ್ನ ನೋಡಲು ಅದೊಂದು ದಿನ ಲಕ್ಷಾಂತರ ಭಕ್ತರು ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದ ತುದಿಯಲ್ಲಿ ನೆಲೆಸಿರೋ ಆಕೆಯನ್ನ ನೋಡಲು ಒಬ್ಬರು ಹೋಗುವುದೇ ಕಷ್ಟ. ಕಾಲಲ್ಲಿ ಚಪ್ಪಲಿ ಇರಲ್ಲ. ನಡೆಯೋಕೆ ದಾರಿ ಇರಲ್ಲ. ಬೆಟ್ಟ ಹತ್ತಿ-ಹತ್ತಿ ಭಕ್ತರು ಅಮ್ಮಾ….ತಾಯೇ… ಅಂತ ಗೋಗರೆಯುತ್ತಿರುತ್ತಾರೆ. ಆದರೆ, ಇಂತಹಾ ದುರ್ಗಮ ಹಾದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಗುಡ್ಡಕ್ಕೆ ಹಗ್ಗ ಕಟ್ಟಿ ನಡೆದು-ನಡೆದು ಸುಸ್ತಾಗಿದ್ದವರನ್ನ ಕೆಳಗಿನಿಂದ ಮೇಲಕ್ಕೆ ಕರೆದೊಯ್ದಿದ್ದಾರೆ.

 

 

 ಮತ್ತಲವರನ್ನ ಬೆಟ್ಟ ಇಳಿಯುವಾಗ ಸುಸ್ತಾದವರನ್ನ ಕೆಳಗಡೆ ಕರೆದುಕೊಂಡು ಬಂದಿದ್ದಾರೆ. ಮಕ್ಕಳು-ಮರಿ-ದೊಡ್ಡವರು-ಸಣ್ಣವರು ಎನ್ನದೆ ಆಗದವರಿಗೆ ಸಹಾಯ ಮಾಡುತ್ತಾ ಹತ್ತಾರು ಬಾರಿ ಕೆಳಕ್ಕೆ ಇಳಿದು ಮೇಲಕ್ಕೆ ಹತ್ತಿದ್ದಾರೆ. ಇಲ್ಲಿ ಮೇಲೆ ಹತ್ತಿ ಇಳಿಯೋದು ಅಷ್ಟು ಸುಲಭದ ಮಾತಲ್ಲ. ಕಲ್ಲು-ಮುಳ್ಳುಗಳ ಕಾಡಿನ ಕಾಲು ದಾರಿಯಲ್ಲಿ ಪರಿಮಿಡ್ ಆಕಾರದ ಬೆಟ್ಟ ಹತ್ತೋದು ತೀರಾ ಕಷ್ಟಸಾಧ್ಯ. ಹೀಗಿರುವಾಗ ಮೇಲಿಂದ ಮೇಲೆ ಹತ್ತಿ-ಇಳಿಯೋದು ನಿಜಕ್ಕೂ ಸಾಹಸ. ಇಂತಹಾ ಸಾಹಸವನ್ನ ಜಿಲ್ಲೆಯ ಅಗ್ನಿಶಾಮಕ ಸಿಬ್ಬಂದಿಗಳು ಮಾಡಿದ್ದಾರೆ. ಭಕ್ತರು ಐದಾರು ದಾರಿಯಲ್ಲಿ ಬೆಟ್ಟ ಹತ್ತಿ ಕೊನೆಗೆ ಗುಡ್ಡದ ತದಿಯಲ್ಲಿ ತಾಯಿ ಬಳಿ ಸೇರುತ್ತಾರೆ. ಆದರೆ, ಇರುವ ಮೂರ್ನಾಲ್ಕು ಹಾದಿಯಲ್ಲಿ ದುರ್ಗಮ ಹಾದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಗುಡ್ಡದಲ್ಲಿ ಅಲ್ಲಲ್ಲೇ ಹಗ್ಗ ಕಟ್ಟಿ ಭಕ್ತರಿಗೆ ಸಹಾಯ ಆಗುವಂತೆ ನೋಡಿಕೊಂಡಿದ್ದಾರೆ. ಆದರೆ, ಸುಸ್ತಾದ ಭಕ್ತರು ಹಗ್ಗ ಹಿಡಿದು ನಡೆಯಲಾಗದ ಸ್ಥಿತಿಯಲ್ಲಿದ್ದಾಗ ಅಗ್ನಿಶಾಮಕ ಸಿಬ್ಬಂದಿಗಳೇ ಅವರನ್ನ ಕೈಹಿಡಿದು ಹತ್ತಿಸಿ-ಇಳಿಸಿದ್ದಾರೆ. ದಿನಕ್ಕೆ ಹತ್ತಾರು ಬಾರಿ ಬೆಟ್ಟ ಹತ್ತಿ-ಇಳಿದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಭಕ್ತರು ಕೂಡ ಥ್ಯಾಂಕ್ಸ್ ಹೇಳಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!