April 30, 2024

MALNAD TV

HEART OF COFFEE CITY

ಬೆಟ್ಟದ ತಾಯಿ ದೇವೀರಮ್ಮನ ನೋಡಲು ಕಾಫಿನಾಡಲ್ಲಿ ಜನಸಾಗರ

1 min read

 

ಚಿಕ್ಕಮಗಳೂರು : ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದ ಗುಡ್ಡದ ತುದಿಯಲ್ಲಿರುವ ತಾಲೂಕಿನ ಬಿಂಡಿಗ ದೇವೀರಮ್ಮನ ದರ್ಶನಕ್ಕಾಗಿ ಇಂದು ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಭಾನುವಾರ ಸಂಜೆಯಿಂದಲೇ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನ ಹತ್ತಿ ಬಿಂಡಿಗ ಗ್ರಾಮದತ್ತ ಸಾಗಿದ ಸಾವಿರಾರು ಭಕ್ತರು ಭಾನುವಾರ ರಾತ್ರಿಯಿಂದಲೇ ಬೆಟ್ಟ ಹತ್ತೋಕೆ ಆರಂಭಿಸಿದ್ದರು. ಮತ್ತಲವರು ಸೋಮವಾರ ಬೆಳಗಿನ ಜಾವ ಬೈಕ್-ಕಾರುಗಳಲ್ಲಿ ತೆರಳಿ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಭಕ್ತಿ ಸಮರ್ಪಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಭಕ್ತರು ಆಯಾಸವನ್ನು ಲೆಕ್ಕಿಸದೇ ಪಿರಮಿಡ್ ಆಕಾರದ ಬೆಟ್ಟವನ್ನ ಉತ್ಸಾಹದಿಂದ ಹತ್ತಿದರು. ಕಾಫಿತೋಟ, ಕಲ್ಲುಮುಳ್ಳಿನ, ಕಡಿದಾದ ರಸ್ತೆಯಲ್ಲಿ ಒಬ್ಬರ ಕೈಯನೊಬ್ಬರು ಇಟ್ಟುಕೊಂಡು ಗುಡ್ಡದ ತುದಿಯಲ್ಲಿ ಸರದಿಸಾಲಲ್ಲಿ ಸಾಗಿ ದೇವಿ ದರ್ಶನ ಪಡೆದಿದ್ದಾರೆ. ವಾಹನಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿದ ಭಕ್ತರು 4 ಕಿ.ಮೀ ದೂರದಲ್ಲೇ ಗಾಡಿ ನಿಲ್ಲಿಸಿ ಕಾಫಿತೋಟ ದೊಳಗಿನಿಂದ ನಡೆಯೋಕೆ ಆರಂಭಿಸಿದ್ದರು. ದೇವಿಯ ದರ್ಶನ ಪಡೆದು ಹಿಂದಿರುವಾಗ ಸೂರ್ಯ ಕ್ರಮೇಣ ನೆತ್ತಿ ಮೇಲೆ ಬರುತ್ತಿದ್ದಂತೆ ಭಕ್ತರು ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.

ದೇವಿರಮ್ಮ ದೀಪೆÇೀತ್ಸವದ ಹಿನ್ನೆಲೆ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್‍ಪಿ, 8 ಮಂದಿ ಸಿಪಿಐ, 32 ಪಿಎಸ್‍ಐ, 87 ಎಎಸ್‍ಐ, 453 ಮುಖ್ಯಪೇದೆ ಮತ್ತು ಪೇದೆ, 62 ಗೃಹ ರಕ್ಷಕದಳ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಮಲ್ಲೇನಹಳ್ಳಿ ಸಮೀಪ 15 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ಸಾಗುವ ಭಕ್ತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ಸುರಕ್ಷಿತವಾಗಿ ಬೆಟ್ಟ ಹತ್ತಲು ಅಗ್ನಿಶಾಮಕ ದಳ, ಗ್ರಾಮಸ್ಥರು ಮತ್ತು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಕೊರೋನಾ-ಮಳೆ ಕಾರಣಕ್ಕೆ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಆದರೆ, ಈ ವರ್ಷ ಊಹೆಗೂ ಮೀರಿ ಭಕ್ತಸಾಗರ ಬೆಟ್ಟ ಹತ್ತಿ ಬೆಟ್ಟದ ತಾಯಿಯ ದರ್ಶನ ಪಡೆದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!