May 17, 2024

MALNAD TV

HEART OF COFFEE CITY

19 ವರ್ಷಗಳಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ತನಿಖೆಯಾಗಬೇಕು

1 min read
the-development-works-that-have-been-going-on-for-19-years-should-be-investigated

the-development-works-that-have-been-going-on-for-19-years-should-be-investigated

ಚಿಕ್ಕಮಗಳೂರು : 4 ಬಾರಿ ಶಾಸಕರಾಗಿರುವ ಸಿ.ಟಿ. ರವಿಯವರು ಈ ಬಾರಿಯ ಚುನಾವಣೆಯಲ್ಲಿ ಸೋಲಿನ ಭಯ ಕಾಣಿಸಕೊಳ್ಳುತ್ತಿದ್ದು, ಸೋಲಿನ ಭೀತಿಯಿಂದ ಹಣ, ಹೆಂಡ, ಸೀರೆಗಳನ್ನು ಹಂಚುವ ವಾಮಾ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆ ಎಂದು ಮಾಜಿ ನಗರಸಭಾಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಹೆಚ್.ಡಿ. ತಮ್ಮಯ್ಯ ಆರೋಪಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ  ಕ್ಷೇತ್ರದ ಅಭಿವೃದ್ಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆಯುತ್ತಿದೆ. ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ, ಅಭಿವೃದ್ಧಿ ಮುಂದಿಟ್ಟು ಚುನಾವಣೆಯಲ್ಲಿ ಮತ ಕೇಳಬಹುದಿತ್ತು. ಆದರೆ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಸಗಣಿ ಬಾಚುವ ಹೆಣ್ಣು ಮಕ್ಕಳಿಗೆ 5 ರೂಪಾಯಿ ಕೊಡುತ್ತಿದ್ದೇವೆ ಎನ್ನುವ ಮೂಲಕ ರೈತಾಪಿ ಹೆಣ್ಣು ಮಕ್ಕಳನ್ನು ಅಪಮಾನಿಸಿದ್ದಾರೆ.  ರೈತಾಪಿ ಹೆಣ್ಣು ಮಕ್ಕಳ ಕ್ಷೆಮೆ ಕೇಳದಿದ್ದರೆ ರೈತಾಪಿ ಹೆಣ್ಣು ಮಕ್ಕಳ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ. ನಗರದ ಮುಖ್ಯ ರಸ್ತೆಗಳಾದ ಐಜಿ. ರಸ್ತೆ, ಎಂ.ಜಿ. ರಸ್ತೆ, ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ ಕಾಮಗಾರಿ ಕಳೆ ಎಂದು ಸಾರ್ವಜನಿಕರು ಪಿಐಎಲ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಲು ಭಯದ ನಿರ್ಮಾಣವಾಗಿದೆ. ನಾಲ್ಕು ವರ್ಷಗಳಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗದಿದ್ದವರು ಚುನಾವಣೆ ಸಂದರ್ಭದಲ್ಲಿ ರಾತ್ರಿ ಸಭೆಯಗುತ್ತಿದ್ದಂತೆ ಬೆಳಗ್ಗೆ ರಸ್ತೆ ಕೆಲಸ ಆರಂಭವಾಗುತ್ತದೆ ಏನಿದರ ಉನ್ನಾರ ಎಂದು ಪ್ರಶ್ನಿಸಿದರು. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಿದ್ದು, ಚುನಾವಣೆ ಕಳೆದ ನಂತರ ಹೊಸ ಸರ್ಕಾರ ರಚನೆಯಾಗುತ್ತದೆ. ಇಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ವಿಚಲಿತರಾಗದೆ ಕಾನೂನು ಬದ್ದವಾಗಿ ಕೆಲಸ ಮಾಡಬೇಕು. ನಾನು ನಗರಭೆಯಲ್ಲಿ 11 ತಿಂಗಳು ಮಾತ್ರ ನಗರಸಭೆ ಅದ್ಯಕ್ಷನಾಗಿದ್ದು, ಅದನ್ನು ಸೇರಿಸಿ ಕಳೆದ 19 ವರ್ಷಗಳಲ್ಲಿ ನಗರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಯಾಜ್ ಸೇರಿದಂತೆ ಮುಂತಾದವರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!