May 16, 2024

MALNAD TV

HEART OF COFFEE CITY

ಆಧಾರರಹಿತ ಆರೋಪ ಮಾಡಿದರೆ ಅಕ್ರಮಗಳನ್ನು ಬಯಲಿಗೆಳೆಯುತ್ತೇವೆ : ಟಿ. ರಾಜಶೇಖರ್

1 min read

ಚಿಕ್ಕಮಗಳೂರು : 16 ವರ್ಷಗಳ ಕಾಲ ಬಿಜೆಪಿಯಲ್ಲಿದ್ದು ಎಲ್ಲ ತರಹದ ಹೆಸರು ಪಡೆದು, ಶಾಸಕರ ಕಡೆಯಿಂದ ಎಲ್ಲಾ ರೀತಿಯ ಅನುಕೂಲ ಪಡೆದು ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಅವರಿಗೆ ಏನಾದರೂ ನೈತಿಕತೆ ಇದ್ದರೆ ಈ ಚುನಾವಣೆ ಮುಗಿಸಿ ಮುಂದೆ ಅವರ ದಾರಿ ಅವರು ನೋಡಿಕೊಳ್ಳಬಹುದಾಗಿತ್ತು ಎಂದು ಬಿಜೆಪಿ ಜಿಲ್ಲಾ ವಕ್ತಾರ ಟಿ. ರಾಜಶೇಖರ್ ಕಾಂಗ್ರೆಸ್ ಸೇರ್ಪಡೆಗೊಂಡ ಹೆಚ್.ಡಿ. ತಮ್ಮಯ್ಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದಿಂದ ಎಲ್ಲಾ ರೀತಿಯ ಅವಕಾಶ ಪಡೆದು ಪಕ್ಷಕ್ಕೆ ದ್ರೋಹ ಮಾಡಿ ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಮಾಡಿದ್ದಾರೆ. ಇದೀಗ ಸಿ.ಟಿ. ರವಿಯವರ ಬಗ್ಗೆ ಹಾಗೂ ಅವರ ಭಾವನ ಬಗ್ಗೆ ಕಳಪೆ ಕಾಮಗಾರಿಯಿಂದ ಹಣ ಮಾಡಿ ಚುನಾವಣೆಯಲ್ಲಿ ದುಡ್ಡು ಚೆಲ್ಲುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನೋಮ್ಮೆ ಮಾತನಾಡುವಾಗ ಎಚ್ಚರವಹಿಸಿ ಮಾತನಾಡಬೇಕು. ಆಧಾರರಹಿತ ಆರೋಪ ಮಾಡಿದರೆ ಅವರು ಮಾಡಿರುವ ಎಲ್ಲಾ ಆರೋಪಗಳನ್ನು, ಅವರು ಮಾಡಿರುವ ಡೀಲ್ ಗಳನ್ನು ನಾವು ಸಾರ್ವಜನಿಕವಾಗಿ ಮಾತನಾಡಬೇಕಾಗುತ್ತದೆ ಎಂದು ಹೇಳಿದರಲ್ಲದೆ,  ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯಿಲ್ಲದ ಸ್ಥಿತಿಯಿದೆ. ಬಿಜೆಪಿಯಲ್ಲಿ ಬೆಳೆದಂತ ಹರೀಶ್, ರೇಖಾಹುಲಿಯಪ್ಪಗೌಡ, ತಮ್ಮಯ್ಯರಿಗೆ ಟಿಕೆಟ್ ನೀಡುತ್ತೇವೆಂದು ಮೂಗಿಗೆ ತುಪ್ಪ ಹಚ್ಚುತ್ತಿದ್ದು, ಕಡೂರಿನಲ್ಲಿ ವೈಎಸ್. ವಿ ದತ್ತರನ್ನು ಕಾಂಗ್ರೆಸ್ ರಾಜ್ಯ ವರಿಷ್ಠರು ನಡುನೀರಿನಲ್ಲಿ ಬಿಟ್ಟಂತ ಪರಿಸ್ಥಿತಿ ಇವರಿಗೂ ಆಗಲಿದ್ದು, ಮತ್ತೆ ಬಾಜಪದ ಮುಂದೆ ಬಂದು ನಿಲ್ಲುತ್ತಾರೆ ಎಂದು ಹೇಳಿದರು.

ನಂತರ ಮಾತನಾಡಿದ ನಗರಾಧ್ಯಕ್ಷ ಮಧುರಾಜ್ ಅರಸ್ ತಮ್ಮಯ್ಯನವರು ಬಿಜೆಪಿಯಲ್ಲಿರುವಾಗ ನಡೆದ ಕಾಮಗಾರಿಗಳ ವೀಕ್ಷಣೆ ಮಾಡಿ ಗುಣಮಟ್ಟದ ತೀರ್ಮಾನ ಕೊಡುತ್ತಿದ್ದರು. 20 ದಿವಸಲ್ಲಿ ಕಾಂಗ್ರೆಸ್ ನಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯಿಂದ ತಮ್ಮಯ್ಯನವರು ಹತಾಶೆಯಾಗಿದ್ದಾರೆ.  ಆ ಹತಾಶೆಯಲ್ಲಿ ಇಲ್ಲಸಲ್ಲದೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿರುವಾಗ ಸಿ.ಟಿ. ರವಿಯವರ ಭಾವನೊಂದಿಗೆ, ಅಧಿಕಾರಿಗಳೊಂದಿಗೆ ಕಾರ್ಯಕರ್ತರೊಂದಿಗೆ ಪಕ್ಷದ ಹೆಸರೇಳಿಕೊಂಡು ಅವರೇ ಸ್ವಯಂ ಘೋಷಿತ ನಾಯಕರಾಗಿದ್ದರು. ಪಕ್ಷದೊಳಗಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!