May 16, 2024

MALNAD TV

HEART OF COFFEE CITY

ಜಾತಿವ್ಯವಸ್ಥೆಯು ಆಧುನಿಕ ಸ್ಪರ್ಶ ಪಡೆದು ತನ್ನ ಮಜುಲುಗಳನ್ನು ಬದಲಿಸಿಕೊಳ್ಳುತ್ತಿದೆ

1 min read

ಮೋಕ್ಷ ಹರಸಿ ಕಾಡು ಮೇಡು, ಬೆಟ್ಟಗುಡ್ಡ ಹರಸಿ ಹೋಗುತ್ತಿದ್ದ ದಿನಮಾನಗಳಲ್ಲಿ ಜನಸಾಮಾನ್ಯರು ಸಹ ಸಂಸಾರದಲ್ಲಿದ್ದೆ, ಕಾಯಕವನ್ನು ಶ್ರದ್ದೆಯಿಂದ, ಪ್ರೇಮದಿಂದ, ಅತಿಯಾಸೆ ಇಲ್ಲದೆ, ಪ್ರಾಮಾಣಿಕವಾಗಿ ಮಾಡುವ ಮೂಲಕ ಭಗವಂತನ ಸೇವೆಯ ಮಟ್ಟಕ್ಕೆ ಕೊಂಡೋಯ್ದು ಕಾಯಕದಿಂದಲೂ ಕೈಲಾಸ ಕಾಣಬಹುದೆಂಬ ಕರ್ಮ ಸಿದ್ದಾಂತಕ್ಕೆ ಹೊಸದೊಂದು ರೂಪ ನೀಡಿದ ಮಹನೀಯರುಗಳೇ ವಚನಕಾರರು ಎಂದು ಸಾಮಾಜಿಕ ಚಿಂತಕರಾದ ಶ್ರೀ ವಿಶ್ವನಾಥ್ ಸಂಕಲ್ಪ ಹೇಳಿದರು.


ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಹಡಪದ ಅಪ್ಪಣ್ಣ ರವರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದ ಸಾಮಾಜಿಕ ಚಿಂತಕರಾದ ಶ್ರೀ ವಿಶ್ವನಾಥ್ ಸಂಕಲ್ಪ ಇವರು ಮಾತನಾಡುತ್ತಾ ಸರ್ಕಾರ ಜಿಲ್ಲಾಡಳಿತದ ಮುಖಾಂತರ ಸಮಾಜವನ್ನು ಗುರುತಿಸಿರುವುದು ಖುಷಿ ತಂದಿದೆ ಹಾಗೂ ಪರೋಕ್ಷವಾಗಿ ಇಂತಹ ಜಯಂತಿಗಳ ಆಚರಣೆಯಿಂದ ಸಮಾಜದ ಸಂಘಟನೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಸಿದರು ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಘಟನೆಗೆ ಒತ್ತುಕೊಟ್ಟು ಜಯಂತಿಗಳಲ್ಲಿ ಭಾಗವಹಿಸುವ ಬಗ್ಗೆ ಸಮಾಜದ ಬಂಧುಗಳು ಹೆಚ್ಚು ಒಲವು ತೋರಬೇಕಾಗಿ ತಿಳಿಸಿದರು,
ಸರ್ಕಾರದಿಂದ ಆಚರಿಸುತ್ತಿರುವ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗುತ್ತಿರುವುದು ಆಧುನಿಕ ಸಮಾಜದ ದುರಂತವಾಗಿದೆ. ಇದು ಭಾರತೀಯ ಸಮಾಜದಲ್ಲಿ ಬಿಟ್ಟು ಬಿಡದೆ ಅಂಟಿಕೊAಡಿರುವ ಜಾತಿವ್ಯವಸ್ಥೆಯು ಆಧುನಿಕ ಸ್ಪರ್ಶ ಪಡೆದು ತನ್ನ ಮಜುಲುಗಳನ್ನು ಬದಲಿಸಿಕೊಳ್ಳಲು ಸಹಕಾರವಾಗುವಂತೆ ಮಾಡಿದೆ. ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಪಸ್ವರವಿದ್ದರೂ, ಜಯಂತಿಗಳು ಕೇವಲ ಶಿಷ್ಟಚಾರವಾಗಿ, ನೆಪತ್ಯಕ್ಕೆ ಸರಿಯಾದೆ, ಸಮಾಜದ ಜನಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಮುಂದಿನ ಪೀಳಿಗೆ ಸಾಮಾಜಿಕ ಸಮಸ್ಯೆಗಳಿಂದ ಮುಕ್ತಾರಾಗಿ ಜೀವಿಸಲು ಮಾಡಬಹುದಾದ ಪರಿಹಾರ ಕ್ರಮಗಳ ಚಿಂತನ ಮಂತನ ಸಭೆಗಳಾಗಬೇಕು, ಆಗ ಮಾತ್ರ ಜಯಂತಿಯ ಮೂಲ ಆಶಯ ನೆರವೇರುತ್ತದೆ.
ಉತ್ತರ ಭಾರತದ ವಲಸೆ ಕಾರ್ಮಿಕರು ಮೊದಮೊದಲು ಕ್ಷೌರಿಕ ವೃತ್ತಿಗೆ ವಲಸೆ ಬಂದು, ಕರ್ನಾಟಕದಲ್ಲಿರುವ ಮೂಲ ಕ್ಷೌರಿಕರ ಬದುಕು ಅತಂತ್ರವಾಯಿತು. ಇಷ್ಟಕ್ಕೆ ಸೀಮಿತವಾಗದ ವಲಸೆ ಕಾರ್ಮಿಕರ ಹಾವಳಿ ಕಟ್ಟಡ ವಲಯದಿಂದ ಆರಂಭವಾಗಿ ಎಲ್ಲಾ ಕ್ಷೇತ್ರ ದಲ್ಲೂ ಅವರಿಸಿದ್ದಾರೆ. ಈ ಬಗ್ಗೆ ೨೦೧೨ ರಲ್ಲಿ ಸವಿತಾ ಸದ್ಬಾವನಾ ದಿನಾಚರಣೆ ಎಂದು ಆಚರಿಸಿ ಈ ಬಗ್ಗೆ ಅಂದಿನ ಸಮಾಜದ ಮುಖಂಡರ ಹಾಗೂ ಬಂಧುಗಳ ಗಮನಕ್ಕೆ ತಂದು ನಿಯಂತ್ರಣಕ್ಕೆ ಸಹಕಾರ ನೀಡುವಂತೆ ವಿನಂತಿಸಿಕೊ0ಡೆವು. ಅಂದಿನವರ ದೂರದೃಷ್ಟಿಯ ಕೊರತೆಯ ಫಲವಾಗಿ ಅಂದು ೩-೪ ಇದ್ದ ಅಂಗಡಿಗಳು ೩೦-೪೦ ಅಂಗಡಿಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಬದುಕಬಹುದು ಎಂಬ ಕಾನೂನಿನ ಬಗ್ಗೆ ಮಾತನಾಡುತ್ತೇವೆ. ನಿಜ ಯಾರು ಎಲ್ಲಿ ಬೇಕಾದರೂ ಬದುಕಬಹುದು, ಅದರೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ನಾವು ಬೇರೆಡೆ ವಲಸೆ ಹೋಗಿ ಬದುಕುವುದು ಕಷ್ಟ, ಅತಿಯಾದರೆ ಅಮೃತವು ವಿಷವಾದಂತೆ ವಲಸೆ ಕಾರ್ಮಿಕರು ಹೆಚ್ಚಾದರೆ ಅದು ಸಮಾಜದ ಮೇಲೆ ಬೇರೆ ರೀತಿಯ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ಉತ್ತರ ಭಾರತದಿಂದ ವಲಸೆ ಬಂದು ಕ್ಷೌರಿಕ ವೃತ್ತಿ ಮಾಡುತ್ತಿರುವವರಲ್ಲಿ ಬಹಳಷ್ಟು ಜನರ ಮೂಲವೇ ಸರಿಯಾಗಿ ತಿಳಿದಿಲ್ಲ. ಸುಳ್ಳು ದಾಖಲೆಗಳನ್ನು ಪಡೆದು ಬಾಂಗ್ಲಾದೇಶ ದಿಂದ ಅಕ್ರಮ ನುಸುಳುಕೋರರು ಬಂದಿರುವ ಅಪಾಯವಿದೆ. ನಮ್ಮವರು ನಮ್ಮವರು ಎಂದು ಒಳ ಸೇರಿಸಿಕೊಂಡು ಈಗ ಅವರವರ ಮೂಲ ವೃತ್ತಿಯನ್ನು ಕಿತ್ತುಕೊಂಡಿದ್ದಾರೆ. ಇದು ಈಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಹಲವು ರೀತಿಯ ಸಂಘರ್ಷಕ್ಕೆ ಕಾರಣವಾಗುತ್ತದೆ. ಕಾರ್ಮಿಕರ ಕೊರತೆಯಿಂದ ವಲಸೆ ಕಾರ್ಮಿಕರನ್ನು ಸೇರಿಸಿಕೊಳ್ಳುವ ಮುನ್ನ ಅವರ ಮೂಲ ದಾಖಲೆಗಳ ನಕಲನ್ನು ಪಡೆಯುವುದು ಒಳ್ಳೆಯದು ಎಂದು ಹೇಳಿದರು.

ಮೊದಲೇ ಹೇಳಿದಂತೆ ಕೆಲವು ಸಮುದಾಯವನ್ನು ಮುಟ್ಟಿದರೆ ಮೈಲಿಗೆ ಎನ್ನುವಂತಿದ್ದರೆ, ನಮ್ಮನ್ನು ನೋಡಿದರೆ ಅಸ್ಪೃಶ್ಯರಾಗಿದ್ದೇವೆ. ಇಂತಹ ಶೋಷಿತ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಹೋರಟ ನಡೆಸಿದ್ದು, ಅವುಗಳಲ್ಲಿ ಕೆಲವೊಂದನ್ನು ಮಾಜಿ ಮುಖ್ಯಮಂತ್ರಿ ಗಳಾದ ಹೆಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಹಾಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈಡೇರಿಸಿದ್ದಾರೆ. ಕ್ಷೌರಿಕ ವೃತ್ತಿ ಮಾಡುವ ಬಂಧುಗಳಿಗೆ ಅಪಮಾನಿಸುವಂತೆ ಇತರರನ್ನು ಬೈಯಲು ಬಳಸುವ ಪದ ಬಳಕೆಯನ್ನು ನಿಷೇಧಿಸಿದ್ದು, ಅದನ್ನು ಬಳಸಿದರೆ ಕನಿಷ್ಟ ದಂಡವನ್ನು ವಿಧಿಸಿ ನ್ಯಾಯಾಲಯದಲ್ಲಿ ದಂಡ ಕಟ್ಟುವ ಕಾನೂನು ಜಾರಿಗೆ ತರಬೇಕು. ಹಿಂದಿನ ತಲೆಮಾರುಗಳಿಂದ ಅಪಮಾನ, ಅವಮಾನ ವನ್ನು ಅನುಭವಿಸಿಕೊಂಡು ಬಂದವರು ನಾವು. ಆದರೆ ಆಧುನಿಕ ಸಮಾಜದಲ್ಲಿ ಬಂಡವಾಳಶಾಯಿಗಳು ಅಕ್ರಮಿಸಿಕೊಳುತ್ತಿದ್ದಾರೆ. ನಮ್ಮ ಯುವ ಜನಾಂಗವು ಸಹ ಆಧುನಿಕ ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಪರ ತರಬೇತಿಗಳನ್ನು ಪಡೆದು ತಾವು ಅಭಿವೃದ್ಧಿಯಾಗುವ ದರದ ಜೊತೆಗೆ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕೆ0ದು ಹೇಳಿದರು.

 

ಕಾರ್ಯಕ್ರಮದ ಕುರಿತು ಪ್ರಾಸ್ತಾವೀಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸಿ ರಮೇಶ್ ರವರು ಸರ್ಕಾರ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವ ಹಿನ್ನೆಲೆಯನ್ನು ವಿವರಿಸಿದರು ಮತ್ತು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸವಿತಾ ಸಮಾಜದ ಮುಖಂಡರುಗಳನ್ನು ಹಾಗೂ ಸಮಾಜದ ಬಾಂಧವರನ್ನು ಅಭಿನಂದಿಸಿದರು

ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷರಾದ ಜೆ ಸತ್ಯನಾರಾಯಣ, ಜಿಲ್ಲಾ ಖಜಾಂಚಿ ಎಂ ರಾಘವೇಂದ್ರ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸಿ ಮಾಧವ, ಮೆಹಬೂಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಟಿಪಿ, ಜಿಲ್ಲಾ ಮಹಿಳಾ ಪ್ರತಿನಿಧಿ ರಶ್ಮಿ, ಸದಸ್ಯರಾದ ಸಂದೇಶ್, ಸಹ ಸಂಘಟನಾ ಕಾರ್ಯದರ್ಶಿ ನಟರಾಜ್, ಚಂದ್ರಶೇಖರ್, ಸಂಪತ್ ಕುಮಾರ್, ಸೇರಿದಂತೆ ಅನೇಕರು ಭಾಗವಹಿಸಿದ್ದರು, ಶಿಕ್ಷಕ ಸುರೇಂದ್ರ ನಾಯಕ್ ರವರು ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!