April 29, 2024

MALNAD TV

HEART OF COFFEE CITY

ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು : ಉಮಾಪ್ರಶಾಂತ್

1 min read

ಚಿಕ್ಕಮಗಳೂರು-ಮಹಿಳೆಯರು ಸಬಲೀಕರಣದ ಆಶಯದಂತೆ ಆರ್ಥಿಕ ಸ್ವಾವಲಂಬಿಗಳಾದಾಗ ಮಾತ್ರ ಜೀವನ ಸಾರ್ಥಕ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಕರೆ ನೀಡಿದರು.
ಅವರು ರೋಟರಿ ಕ್ಲಬ್‌ನಲ್ಲಿ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಜಿಲ್ಲೆಯ 15 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಮಹಿಳಾ ಸಬಲೀಕರಣದ ಆಶಯದಂತೆ ಅತೀ ಮುಖ್ಯವಾದ ಕಾರ್ಯವನ್ನು ರೋಟರಿ ಕ್ಲಬ್ ಸಮಾಜಮುಖಿ ಚಿಂತನೆ ಮಾಡುತ್ತಿದೆ.ರೋಟರಿ ಕ್ಲಬ್ ಇನ್ನೂ ಹೆಚ್ಚಿನ ರೀತಿ ಪರಿಣಾಮಕಾರಿಯಾಗಿ ಈ ಕೆಲಸಗಳನ್ನು ಮುಂದುವರೆಸಲಿ ಎಂದು ಆಶಿಸಿದ ಅವರು ಕ್ಲಬ್‌ನಿಂದ ಇಂದು ಹೊಲಿಗೆ ಯಂತ್ರ ಪಡೆದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ ಎಂದರು.
ಮಹಿಳೆಯರು ಸಮಾಜದಲ್ಲಿ ಯಾರ ಮೇಲು ಅವಲಂಬಿತರಾಗದೇ ಸ್ವಾವಲಂಬಿಯಾಗಿ ಬದುಕುತ್ತೇನೆ ಎಂಬ ಛಲ ಮೂಡಬೇಕು, ಆರ್ಥಿಕವಾಗಿ ಸಬಲರಾಗಬೇಕೆಂಬ ಭಾವನೆ ಮಹಿಳೆಯರಲ್ಲಿ ಬೆಳೆದಾಗ ಮಾತ್ರ ಇಂತಹ ಸವಲತ್ತುಗಳನ್ನು ಪಡೆದಿದ್ದು, ಸಾರ್ಥಕ ಪಡೆಯುತ್ತದೆ ಎಂದು ಹೇಳಿದರು.
ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾದಾಗ ಮಾತ್ರ ಕೌಟುಂಬಿಕ ದೌರ್ಜನ್ಯಗಳಿಂದ ದೂರ ಇರಲು ಸಾಧ್ಯ.ಆದ್ದರಿಂದ ಸಿಕ್ಕಿರುವ ಸಮಯವನ್ನು ದುಡಿಮೆಗೆ ಬಳಸಿಕೊಂಡು ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆ ಪೋಲೀಸ್ ಇಲಾಖೆಯೊಂದಿಗೆ ಇಂತಹ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಮಹೇಶ್‌ಗೌಡ ಮಾತನಾಡಿ ಸಂಸ್ಥೆ ವತಿಯಿಂದ ವಿತರಿಸುತ್ತಿರುವ ಹೊಲಿಗೆ ಯಂತ್ರವನ್ನು ಪಡೆದುಕೊಂಡ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಎಂದು ಹಾರೈಸಿದರು.
ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಅನಿಲ್‌ಕುಮಾರ್ ಮಾತನಾಡಿ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಇಂದು 20 ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿರುವುದು ಸಂತಸ ತಂದಿದೆ ಆದರೆ ಈ ಕಾರ್ಯ ಇಲ್ಲಿಗೆ ನಿಲ್ಲದೆ ಮುಂದುವರೆದಾಗ ಮಾತ್ರ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಹೇಳಿದರು.
ಮಹಿಳೆಯರು ಸ್ವ ಉದ್ಯೋಗ ಸ್ಥಾಪಿಸಿ ಉದ್ಯೋಗ ನೀಡುವುದಾದರೆ ಆರ್ಥಿಕ ನೆರವು ಬೇಕಾದಲ್ಲಿ ಕೆನರಾ ಬ್ಯಾಂಕ್ ನ್ನು ಸಂಪರ್ಕಿಸುವAತೆ ಮನವಿ ಮಾಡಿದರು.
ಸಹಾಯಕ ಗವರ್ನರ್‌ಗುರುಮೂರ್ತಿ ಮಾತನಾಡಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉಡುಪಿ ಈ ನಾಲ್ಕು ಜಿಲ್ಲೆಗಳ 86 ರೋಟರಿ ಕ್ಲಬ್‌ಗಳಿಗೆ 450 ಹೊಲಿಗೆ ಯಂತ್ರಗಳನ್ನು ರೋಟರಿ ಜಿಲ್ಲೆ 3182 ರ ಜಿಲ್ಲಾ ಗೌರ್ವನರ್ ಡಾ.ಜಯಗೌರಿ ಆರ್ಥಿಕ ನೆರವು ನೀಡಿದ್ದಾರೆ, ಇದರ ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!