May 5, 2024

MALNAD TV

HEART OF COFFEE CITY

ಜಿಲ್ಲೆಯ ಅತಿದೊಡ್ಡ ಸರ್ಕಾರಿ ಫ್ರಾಡ್ ಕೇಸ್.. ಅತಿವೃಷ್ಟಿ ಪರಿಹಾರದಲ್ಲೂ ಕೋಟಿ ಕೋಟಿ ವಂಚಿಸಿರುವ ನುಂಗಣ್ಣರ ಕರಾಮತ್ತು.. ಯಾವುದು ? ಎಲ್ಲಿ ? ಡಿಟೇಲ್ಸ್ ಇಲ್ಲಿದೆ ನೋಡಿ…

1 min read

ಚಿಕ್ಕಮಗಳೂರು: ಇದು ಜಿಲ್ಲೆಯ ಅತಿದೊಡ್ಡ ಸರ್ಕಾರಿ ಗೋಲ್ ಮಾಲ್ ಪ್ರಕರಣ. ನೂರಾರು ರೈತರಿಗೆ ಕೋಟ್ಯಾಂತರ ಹಣ ವಂಚಿಸಿರುವ ಫ್ರಾಡ್ ಕೇಸ್, ಅತಿವೃಷ್ಟಿ ಪರಿಹಾರದಲ್ಲೂ ಕೋಟಿ ಕೋಟಿ ಲಪಟಾಯಿಸಿರುವ ನುಂಗಣ್ಣರ ಕರ್ಮಕಾಂಡ,, ಯಾವುದು ? ಎಲ್ಲಿ ? ಡಿಟೇಲ್ಸ್ ಇಲ್ಲಿದೆ ನೋಡಿ…..

ಸರ್ಕಾರದ ದುಡ್ಡು ಅಂದ್ರೆ ನುಂಗೋಕೆ ಇರೋದು ಅಂದುಕೊಂಡಿದ್ದಾರೆ ಕೆಲ ಖದೀಮರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಳ ಹಿರಿಯೂರು ಹೋಬಳಿಯಲ್ಲಿ ನಡೆದಿರುವ ಈ ಗೋಲ್ ಮಾಲ್ ನೋಡಿದ್ರೆ ಅಬ್ಬಬ್ಬಾ ಹೀಗೂ ಮಾಡಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟು ಕೇಳಬೇಕು ಅನಿಸುತ್ತದೆ. ಇದು ಪಕ್ಕಾ ಸರ್ಕಾರಿ ಫ್ರಾಡ್ ಕೇಸ್. ಅದೂ ಕೂಡಾ ನೂರಾರು ಅನ್ನದಾತರಿಗೆ ಮಾಡಿರುವ ಮಹಾ ವಂಚನೆ, ಈ ಜಾಲ ತೆರೆದುಕೊಂಡಿದ್ದು ವರ್ಷವೇ ಕಳೆದ ಮೇಲೆ, ರೈತರ ಕಷ್ಟ, ಬೆಳೆ ನಷ್ಟವೇ ಇವರ ಬಂಡವಾಳ. ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಕಡೂರಿನ ಬಯಲುಸೀಮೆ ರೈತರು ಕಳೆದ 2022 ರಲ್ಲಿ ಉಂಟಾದ ಅತಿವೃಷ್ಟಿ ಹಾನಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಸುಮ್ಮನ್ನಾಗಿದ್ರು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಂದಾಯ ಇಲಾಖೆ ಸಿಬ್ಬಂದಿಗಳು ಸೈಬರ್ ಸೆಂಟರ್ ಹಾಗೂ ಕೆಲ ಮಧ್ಯವರ್ತಿಗಳ ಜೊತೆ ಸೇರಿ ಸರ್ಕಾರದ ಕೋಟ್ಯಾಂತರ ಹಣ ಲಪಟಾಯಿಸಿರುವುದು ಇದೀಗ ಬೆಳಕಿದೆ ಬಂದಿದೆ. ಅಷ್ಟಕ್ಕೂ ಇವರು ಮಾಡಿದ್ದೇನು ಅಂದ್ರೆ ಅನ್ನದಾತರಿಗೆ ಬರಬೇಕಾದ ಹಣವನ್ನು ಮತ್ಯಾರದ್ದೋ ಅಕೌಂಟ್ ಗೆ ಹಾಕಿ ಬಿಡಿಸಿಕೊಳ್ಳೊದು. ಯಾರದ್ದೋ ದುಡ್ಡು ಇನ್ಯಾರಿಗೋ ಹೋಗೋ ಹಾಗೆ ಮಾಡಿರುವುದು. ಅದಕ್ಕೆ ಬಳಸಿದ್ದು ಮಾತ್ರ ಅಪ್ಪಟ ಅನ್ನದಾತರ ಪಹಣಿ, ಅತಿವೃಷ್ಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರ ಅದೇ ಹೆಸರಿನ ಬೇರೆ ಜನರನ್ನು ಹುಡುಕಿ ಅವರ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿ ಈ ಅಕ್ರಮ ಎಸಗಿರುವುದು ಗೊತ್ತಾಗಿದೆ. ಸತ್ತವರ ಹೆಸರಲ್ಲೂ ಈ ರೀತಿಯ ಪರಿಹಾರದ ಹಣ ಗುಳುಂ ಮಾಡಲಾಗಿದೆ.‌ ಕೇವಲ ಬಿಡಿಗಾಸು ಮಾತ್ರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಇನ್ನುಳಿದ ಹಣವನ್ನು ಅದೇ ಹೆಸರಿನ ಬೇರೆ ಅಕೌಂಟ್ ಗಳಿಗೆ ಹಾಕಲಾಗಿದೆ. ಇನ್ನೂ ಮುಂದುವರೆದು ಕೆಲ ಅಮಾಯಕ ರೈತರಿಗೆ ನಿಮ್ಮ ಅಕೌಂಟ್ ಗೆ ಯಾವುದೊ ಹಣ ಹಾಕಿದ್ದೇವೆ ಬಿಡಿಸಿಕೊಡಿ ಎಂದು ವಂಚಕರು ಮೋಸ ಮಾಡಿರುವ ಪ್ರಕರಣಗಳು ಕೂಡಾ ಇಲ್ಲಿ ನಡೆದಿದೆ. ಟಮೊಟೋ, ಈರುಳ್ಳಿ , ನೆಲಗಡಲೆ, ತರಕಾರಿ ಬೆಳೆಗಳು ಇರುವ ಹೊಲಗಳನ್ನೇ ಹುಡುಕಿ ಈ ಫ್ರಾಡ್ ಮಾಡಲಾಗಿದೆ. ವ್ಯವಸ್ಥಿತ ರೀತಿಯ ಟೀಂ ವರ್ಕ್ ಮೂಲಕ ಇದು ನಡೆದಿರುವ ಶಂಕೆ ವ್ಯಕ್ತವಾಗುತ್ತದೆ.


ಚೌಳಹಿರಿಯೂರು ಹೋಬಳಿ ಒಂದರಲ್ಲೇ 6 ಕೋಟಿಗೂ ಹೆಚ್ಚು ಹಣ ಈ ರೀತಿ ವಂಚನೆ ಆಗಿದೆ ಎಂದು ರೈತ ಮುಖಂಡರಾದ ರವಿ, ತಮ್ಮಣ್ಣ ಮತ್ತಿತರರು ಹೇಳುತ್ತಾರೆ. ಆಧಾರ್ ಕಾರ್ಡ್ ನಂಬರ್, ಬೇರೆ ಹೆಸರಿನ ಅಕೌಂಟ್ ಗಳು ಸೇರಿದ್ದು ಹೇಗೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳಿದ್ದು ಇದರ ಹಿಂದೆ ದೊಡ್ಡ ಜಾಲವೇ ಇರುವುದು ಮಾತ್ರ ತನಿಖೆಯಿಂದ ಗೊತ್ತಾಗಬೇಕಿದೆ. ಸರ್ಕಾರದ ಹಣ ಹೊಡೆಯೋದು ಇಂದು ಅಷ್ಟು ಸುಲಭದ ಮಾತಲ್ಲ ಆದರೆ ರಂಗೋಲಿ ಕೆಳಗೆ ನುಗ್ಗುವವರ ಮುಂದೆ ಚಾಪೆ ಕೆಳಗೆ ನುಗ್ಗುವವರು ಸಾಟಿಯೇ ಎಂಬ ಗಾದೆ ಮಾತು ನೆನಪಿಗೆ ಬರುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!