April 29, 2024

MALNAD TV

HEART OF COFFEE CITY

ಸದ್ದಿಲ್ಲದೇ ಹೆಸರು ಮಾಡಿದ ನಿರ್ಗಮಿತ ಎ.ಸಿ ‘H D ರಾಜೇಶ್’ ಮನದಾಳ

1 min read

ಚಿಕ್ಕಮಗಳೂರು: ಜಿಲ್ಲೆಯ ಐದು ತಾಲೂಕುಗಳಲ್ಲಿ ಸಾವಿರಕ್ಕೂ ಹೆಚ್ಚು ಎಕರೆ ಒತ್ತುವರಿ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ಬರುವಂತೆ ಮಾಡಿರುವುದಾಗಿ ತಿಳಿಸಿದ ನಿರ್ಗಮಿತ ಉಪ ವಿಭಾಗಾಧಿಕಾರಿ ಎಚ್.ಡಿ ರಾಜೇಶ್.
ಸಾರಗೋಡು ನಿರಾಶ್ರಿತರಿಗೆ 40 ಎಕರೆ ಪುನರ್ವಸತಿಗಾಗಿ ಜಾಗ ಗುರುತಿಸುವುದಾಗಿ ತಿಳಿಸಿದರು.

ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು, ಚಿಕ್ಕಮಗಳೂರಿನಲ್ಲಿ ಎ.ಸಿ ಯಾಗಿ ಕಾರ್ಯನಿರ್ವಹಿಸಿದ್ದು ಆತ್ಮ ತೃಪ್ತಿ ನೀಡಿದೆ. ನನ್ನ ವರ್ಗಾವಣೆ ವಿಷಯದಲ್ಲಿ ಯಾರು ಕೂಡ ಒತ್ತಡ ಹಾಗೂ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ಸಂಪೂರ್ಣ ನಂಬಿಕೆ ಇರುವುದು ಕಂದಾಯ ಕಾಯ್ದೆ ಕಾನೂನು ಮತ್ತು ನಿಯಮಗಳ ಮೇಲೆ ಇವುಗಳಿಗೆ ನಾನು ಹೆಚ್ಚು ಬೆಲೆ ಕೊಡುತ್ತೇನೆ ಎಂದು ತಿಳಿಸಿದ ಎಚ್ ಡಿ ರಾಜೇಶ್ ಚಿಕ್ಕಮಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದು ನನಗೆ ಅತ್ಯಂತ ಒಳ್ಳೆಯ ಅನುಭವ, ”ಲರ್ನಿಂಗ್ ಬೈ ಡೂಯಿಂಗ್” ಎಂಬಂತೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ ಎಂದರು. ನಾನು ಕಳೆದ ಒಂದುವರೆ ವರ್ಷದಲ್ಲಿ ಉಪ ವಿಭಾಗಾಧಿಕಾರಿಯಾಗಿ ನನ್ನ ಮುಂದೆ ಬಂದ 600 ಕ್ಕೂ ಹೆಚ್ಚು ಪ್ರಕರಣಗಳಲ್ಲಿ 270ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಒತ್ತುವರಿದಾರರಿಂದ ಸರ್ಕಾರಿ ಜಾಗವನ್ನು ಬಿಡಿಸಿ ಕೊಟ್ಟಿದ್ದು, ಇದೀಗ ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಸರ್ಕಾರದ ಹೆಸರಿಗೆ ಆರ್ ಟಿ ಸಿ ಮಾಡಲಾಗಿದೆ ಎಂದು ರಾಜೇಶ್ ತಿಳಿಸಿದರು. ಸಾಕಷ್ಟು ಚಾಲೆಂಜಿಂಗ್ ಆಗಿದ್ದ ಕೆಲಸದ ವೇಳೆ ಜಿಲ್ಲೆಯ ಎಲ್ಲಾ ವರ್ಗದ ಹಾಗೂ ಎಲ್ಲಾ ಕ್ಷೇತ್ರದ ಜನರು ನನಗೆ ಸಹಕರಿಸಿದ್ದಾರೆ ಎಂದು ಸ್ಮರಿಸಿದ ಅವರು ಅಕ್ರಮ ಹಾಗೂ ಕಾನೂನುಬಾಹಿರವಾಗಿ ಕಂದಾಯ ಭೂಮಿಯನ್ನು ಒತ್ತುವರಿ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ನಾನು ಸರ್ಕಾರಕ್ಕೆ ಬಿಡಿಸಿ ಕೊಟ್ಟಿರುವ ಭೂಮಿಯನ್ನು ಸಂಪೂರ್ಣ ನಿಯಮಾನುಸಾರ ಹಾಗೂ ಕಾನೂನು ಬದ್ಧವಾಗಿ ಬಿಡಿಸಿಕೊಟ್ಟಿದ್ದೇನೆ ಮತ್ತು ಇದಕ್ಕೆ ಅನುಸರಿಸಬೇಕಾದ ಎಲ್ಲಾ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡೆ ಕಾರ್ಯ ನಿರ್ವಹಿಸಿದ್ದೇನೆ ಎಂದರು.

ಚಿಕ್ಕಮಗಳೂರು ಉಪ ವಿಭಾಗದಲ್ಲಿ ಅರಣ್ಯ ಇಲಾಖೆ ಕಂದಾಯ ಇಲಾಖೆ ನಡುವಿನ ತಿಕ್ಕಾಟವನ್ನು ಪ್ರಸ್ತಾಪಿಸಿದ ರಾಜೇಶ್, ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆಯುವುದು ಅತ್ಯಂತ ಸವಾಲಿನ ಕೆಲಸ ಈ ನಡುವೆ ಡೀಮ್ಡ್ ಅರಣ್ಯ ಸಮಸ್ಯೆ ಸಾಕಷ್ಟು ಕಡೆ ಒತ್ತುವರಿ ತೆರವು ವಿಳಂಬಕ್ಕೆ ಕಾರಣವಾಗುತ್ತಿದ್ದು, ಇನ್ನು 3 ತಿಂಗಳಲ್ಲಿ ಆ ಸಮಸ್ಯೆ ಕೂಡಾ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆ ಮಲೆನಾಡು ಪ್ರದೇಶವಾಗಿರುವುದರಿಂದ ಅರಣ್ಯ ಕಾನೂನಿನ ತೊಡಕು ಸಾಕಷ್ಟು ಕೆಲಸದ ವಿಳಂಬಕ್ಕೆ ಕಾರಣವಾಗಿತ್ತು. ಈ ನಡುವೆ ಒತ್ತುವರಿ ತೆರವು ಸಾಕಷ್ಟು ಪ್ರಗತಿ ಕಂಡಿದೆ ಎಂದು ಅವರು ತಿಳಿಸಿದರು. ಫಾರಂ 50, 53, 57 ರಲ್ಲಿ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸುವವರು ಕಂದಾಯ ಕಾಯ್ದೆ ಬಗ್ಗೆ, ನಿಯಮಗಳ ಬಗ್ಗೆ ತಿಳಿಯಬೇಕು ಹಾಗೂ ಮಧ್ಯವರ್ತಿಗಳ ಮೂಲಕ ಹೋಗದೆ ನೇರವಾಗಿ ಸರ್ಕಾರಿ ಕಚೇರಿಗಳಿಗೆ ತೆರಳಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!