May 15, 2024

MALNAD TV

HEART OF COFFEE CITY

ಗಣಪತಿ ಸೇವಾ ಸಮಿತಿಯ ದುಡ್ಡನ್ನು ಬಳಸಿಕೊಂಡಿರುವ ಆರೋಪ ಸತ್ಯ; ಟಿ ರಾಜಶೇಖರ್

1 min read

ಚಿಕ್ಕಮಗಳೂರು: ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ವೇಣುಗೋಪಾಲ್ ಅವರು ಸೇವಾ ಸಮಿತಿಯ ವಂತಿಕೆ ಹಣ ನನ್ನ ಬಳಿ ಇದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಅಲ್ಲಿಗೆ ನಾವು ಮಾಡಿರುವ ಆರೋಪ ಸರಿಯಾಗಿದೆ ಎಂದು ಜಿಲ್ಲಾ ವಕ್ತಾರ ಟಿ ರಾಜಶೇಖರ್ ಪ್ರತ್ಯಾರೋಪ ಮಾಡಿದರು.

ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ದುಡ್ಡನ್ನು ವರಸಿದ್ಧಿ ವೇಣುಗೋಪಾಲ್ ಬಳಸಿಕೊಂಡಿರುವ ಆರೋಪ ಹಿನ್ನಲೆ ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಅವರು, ವೇಣುಗೋಪಾಲ್ ಅವರು ಗಣಪತಿ ದುಡ್ಡನ್ನ ಮನೆಯಲ್ಲಿ ಇಟ್ಟುಕೊಂಡಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕರ ವಂತಿಕೆಯಿಂದ ಬಂದಿದ್ದ 6 ಲಕ್ಷದ 71 ಸಾವಿರ ರೂಪಾಯಿಗಳನ್ನು ಅಧ್ಯಕ್ಷರು ಮೂರ್ನಾಲ್ಕು ವರ್ಷ ಇಟ್ಟುಕೊಂಡು ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ನಾನು ಆ ದುಡ್ಡನ್ನ ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.

‘ವರಸಿದ್ಧಿ’ ಎಂಬ ಹೆಸರನ್ನ ಇಟ್ಟುಕೊಂಡು ಗಣಪತಿ ದುಡ್ಡನ್ನ ತಿನ್ನೋದಕ್ಕೆ ಮನಸ್ಸು ಮಾಡಿರುವಂತಹ ವರಸಿದ್ಧಿ ವೇಣುಗೋಪಾಲ್ ಅವರಿಗೆ ಮಾನ ಮರ್ಯಾದೆ ಇದ್ದರೆ, ಅಂಜಿಕೆ ಇದ್ದರೆ, ಸಾರ್ವಜನಿಕರ ದುಡ್ಡನ್ನ ವಾಪಸ್ ಕೊಡಬೇಕು. ಗಣಪತಿ ಸೇವಾ ಸಂಘದಲ್ಲಿ 10-15 ಲಕ್ಷ ಹಣ ಕಲೆಕ್ಷನ್ ಆಗಿದೆ. ಅದರಲ್ಲಿ 7 ಲಕ್ಷದ ಲೆಕ್ಕ ಸಿಕ್ಕಿದ್ದು ಇನ್ನೂ 7 ಲಕ್ಷದ ಲೆಕ್ಕವನ್ನು ಕೊಡಬೇಕು. ಈಗ ತೆಗೆದುಕೊಂಡಿರುವಂತಹ 7 ಲಕ್ಷಕ್ಕೆ 7 ಲಕ್ಷವನ್ನು ಸೇರಿಸಿ ಗಣಪತಿ ಸೇವಾ ಸಮಿತಿಗೆ ಹಾಕಬೇಕು. ದೇವರ ಮೇಲೆ ಭಕ್ತಿ, ಗೌರವ ಇದ್ದರೆ ಉಪಯೋಗಿಸಿಕೊಂಡಿರುವ 7 ಲಕ್ಷ ಮತ್ತು ಅದರಿಂದ ಬಂದಿರುವಂತಹ ಲಾಭದ ದುಡ್ಡನ್ನ ಸೇರಿಸಿ ವಿನಾಯಕನಿಗೆ ನೀಡದಿದ್ದರೆ ಅವರ ವರಸಿದ್ಧಿಯೇ ನಿಮಗೆ ಶಾಪವನ್ನು ಕೊಡುತ್ತಾನೆ ಎಂದು ತಿಳಿಸಿದರು.

ಸಮಿತಿಯು ಮೂರು ವರ್ಷದಿಂದ ಯಾವುದೇ ದೂರನ್ನ ನೀಡಿದೆ, ಶಿಸ್ತು ಕ್ರಮ ಕೈಗೊಳ್ಳದೆ ಸಮಿತಿಯವರು ಅವರ ಅಧ್ಯಕ್ಷತೆಯಲ್ಲಿ ಮುಂದುವರಿಸುತ್ತಿರುವುದನ್ನ ನೋಡಿದರೆ ಇದರಲ್ಲಿ ನೂರಕ್ಕೆ ನೂರರಷ್ಟು ಸಮಿತಿಯವರು ಶಾಮೀಲಾಗಿದ್ದಾರೆ. ವರಸಿದ್ಧಿ ಅವರ ಜೊತೆ ಬಿಸ್ಕೆಟ್ ತಿಂದು ಅವರ ಪರವಾಗಿ ಮಾತನಾಡುತ್ತಿದ್ದಾರೆ. ಅವರು ಆ ಹಣವನ್ನು ಬಳಸಿಕೊಂಡಿಲ್ಲ ಎಂದ್ದಾದರೆ ಸಿದ್ದಿ ವಿನಾಯಕ ಮೇಲೆ ಆಣೆ ಮಾಡಿ ಹೇಳಬೇಕಾಗುತ್ತದೆ ಆ ದೇವರ ನೂರು ರೂಪಾಯಿ ದುಡ್ಡನ್ನು ಸಹ ನಾನು ಮುಟ್ಟಿಲ್ಲ ಎಂದು ಸಾರ್ವಜನಿಕರ ಮುಂದೆ ಹೇಳಬೇಕು ಆಗ ಮಾತ್ರ ಚಿಕ್ಕಮಗಳೂರಿನ ಜನ ನಂಬುತ್ತಾರೆ. ಸಮಿತಿಯವರು ಮೂರು ವರ್ಷದಿಂದ ದುಡ್ಡನ್ನ ತಿನ್ನಲು ಸಹಕರಿಸಿದ್ದು ಇವರು ಏಳು ಲಕ್ಷಕ್ಕೆ ಏಳು ಲಕ್ಷ ರೂ ಸೇರಿಸಿ ಗಣಪತಿ ಅಕೌಂಟಿಗೆ ಹಾಕಬೇಕು ಮತ್ತು ಈ ಕುರಿತಾಗಿ ಸಾರ್ವಜನಿಕರ ಜೊತೆಯಲ್ಲಿ ಕ್ಷಮೆಯನ್ನು ಕೇಳಬೇಕು. ಒಂದು ವಾರದ ಒಳಗೆ ದುಡ್ಡನ್ನ ಹಿಂತಿರುಗಿಸಲಿಲ್ಲ ಎಂದಾದರೆ ಎಲ್ಲಾ ಸಂಘಟನೆಗಳು ಸೇರಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!