May 15, 2024

MALNAD TV

HEART OF COFFEE CITY

ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ನಾನು ಕೂಡ ಆಕಾಂಕ್ಷಿ; ಹೆಚ್. ಸಿ ಕಲ್ಮರುಡಪ್ಪ

1 min read

ಚಿಕ್ಕಮಗಳೂರು: ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ನಾನು ಕೂಡ ಆಕಾಂಕ್ಷಿಯಾಗಿದ್ದು, ನಿಮ್ಮೆಲ್ಲರ ಸಹಕಾರ ಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್. ಸಿ ಕಲ್ಮರುಡಪ್ಪ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೈಋತ್ಯ ಶಿಕ್ಷಕರ ಮತ್ತು ಪದವೀದರರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಯಲ್ಲಿ ಮತದಾರರ ಪಟ್ಟಿಗೆ ನೋಂದಣಿ ಮಾಡುವ ಪ್ರಕ್ರಿಯೆಯು ನಡೆಯುತ್ತಿದ್ದು, ಈಗಿನ ಮಾಹಿತಿ ಪ್ರಕಾರ ನವೆಂಬರ್ 6 ರಂದು ನೋಂದಣಿ ಮಾಡುವ ಪ್ರಕ್ರಿಯೆ ಮುಗಿಯಲಿದೆ ಆದ್ದರಿಂದ ಎಲ್ಲಾ ಶಿಕ್ಷಕ ಮತ್ತು ಪದವೀದರ ಬಂಧುಗಳು ನೋಂದಾಯಿಸಿಕೊಳ್ಳಬಹುದು ಎಂದು ಈ ಮೂಲಕ ಮನವಿ ಮಾಡಿದರು.

ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ನಾನು ಕೂಡ ಇಚ್ಚಿಸಿದ್ದೇನೆ. ಆ ಕಾರಣ ನಾನು ಈಗಾಗಲೇ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್, ಭಾರತೀಯ ಜನತಾ ಪಾರ್ಟಿಯ ಧೀಮಂತ ನಾಯಕ ಯಡಿಯೂರಪ್ಪನವರನ್ನು, ಈಶ್ವರಪ್ಪನವರನ್ನು, ನೈಋತ್ಯ ಕ್ಷೇತ್ರಕ್ಕೆ ರಾಜ್ಯದಿಂದ ಸಂಚಾಲಕರಾಗಿ ನಿಯುಕ್ತಿಗೊಂಡಿರುವ ಸಿ.ಟಿ ರವಿಯವನರನ್ನು ಹಾಗೂ ಐದು ಜಿಲ್ಲೆಯ ಎಲ್ಲಾ ಶಾಸಕರನ್ನು ಮತ್ತು ಮಾಜಿ ಶಾಸಕರನ್ನು ಹಾಗೂ ಎಲ್ಲಾ ಪ್ರಮುಖ ನಾಯಕರುಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅಲ್ಲದೆ ವಿವಿಧ ಕ್ಷೇತ್ರದ ಗಣ್ಯರನ್ನು ಕೂಡ ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.

ನಾನು ಒಬ್ಬ ಶಿಕ್ಷಕರ ಮಗನಾಗಿ ಅವರ ನೋವುಗಳನ್ನು ಮತ್ತು ಅವರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಜೀವನದಲ್ಲಿ ನೋಡಿಕೊಂಡು ಬಂದಿದ್ದೇನೆ. ನಾನು ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದಾಗಿನಿಂದ ನ್ಯಾಯಪರವಾಗಿರುವಂತಹ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಸಂಘ ನಿಷ್ಠೆ, ಸತ್ಯ ನಿಷ್ಠೆ, ಪಕ್ಷ ನಿಷ್ಠೆ ಹಾಗು ತತ್ವ ನಿಷ್ಠೆಗಳಿಗೆ ಭಾಜಾಪ ಪಕ್ಷದ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಬೇರೂರು ಕ್ಷೇತ್ರ ಸಮಿತಿ ಅಧ್ಯಕ್ಷನಾಗಿ, ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷನಾಗಿ, ಜಿಲ್ಲಾ ಅಧ್ಯಕ್ಷರಾಗಿ ಎರಡು ಬಾರಿ ಪಕ್ಷದ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕೆಲವು ಕಾಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ ಬಂಧುಗಳ ಸಮಸ್ಯೆಗಳನ್ನು ನನ್ನ ಸಮಸ್ಯೆ ಎಂದು ತಿಳಿದು ಸ್ಪಂದಿಸುವ ಕೆಲಸವನ್ನು ಸಹ ಮಾಡಿದ್ದೇನೆ ಎಂದು ಹೇಳಿದರು.

ಹಾಗಾಗಿ ಮುಂಬರುವ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಅಭ್ಯರ್ಥಿಯಾಗಲು ಇಚ್ಚಿಸಿದ್ದು, ಪಕ್ಷದ ನಾಯಕರು ಮತ್ತು ಶಿಕ್ಷಕರ ಬೆಂಬಲವನ್ನು ನೀಡಬೇಕು ಎಂದ ಅವರು ನಿಮ್ಮ ಆಶೀರ್ವಾದದಿಂದ ಆಯ್ಕೆ ಆಗಿದಲ್ಲಿ ನಿಮ್ಮ ಸೇವೆಗೆ ಸದಾ ಸಿದ್ದನಾಗಿರುತ್ತೇನೆ ಎಂದರು. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!