May 2, 2024

MALNAD TV

HEART OF COFFEE CITY

ಮಾಜಿ ಸಚಿವೆ ಮೋಟಮ್ಮನವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ಗೆದೂರು : ಡಿ.ಬಿ.ಅಶೋಕ್

1 min read

ಚಿಕ್ಕಮಗಳೂರು : ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಪಕ್ಷದವರ ಬಗ್ಗೆಯೇ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು, ಇದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ಗೆ ದೂರು ಸಲ್ಲಿಸಲಾಗುವುದು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಿ.ಬಿ.ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ್, ಗ್ರಾ.ಪಂ.ಸದಸ್ಯ ಅಭಿಜಿತ್ ಅವರೊಂದಿಗೆ ಜಂಟೀ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಮೂವರು ಸೇರಿದಂತ ಮತ್ತೋರ್ವ ಮುಖಂಡ ಮಹೇಶ್ ವಿರುದ್ಧ ಮೋಟಮ್ಮ ಅವರು ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು
ಮೋಟಮ್ಮ ಇತ್ತೀಚಿನ ವರ್ಷಗಳಲ್ಲಿ ಒಕ್ಕಲಿಗ ಜನಾಂಗವನ್ನು ಮೂದಲಿಸುವ ಕೆಲಸ ಮಾಡುತ್ತಿದ್ದಾರೆ. ಮೂಡಿಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಅದಕ್ಕಾಗಿ ನಾವು ನಯನ ಮೋಟಮ್ಮನವರ ಸ್ಪರ್ಧೆಯನ್ನು ವಿರೋಧಿಸುತಿದ್ದೇವೆ ಇದನ್ನು ಮೋಟಮ್ಮ ಅವರಿಗೆ ಸಹಿಸಲಾಗುತ್ತಿಲ್ಲ ಎಂದರು.
ಮೋಟಮ್ಮ ಅವರು ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ ನಯನ ಮೋಟಮ್ಮ ಅವರ ವಿರುದ್ಧವಾಗಿ ವರದಿ ಬಂದಿರುವ ಕಾರಣಕ್ಕಾಗಿ ನಾವು ವಿರೋಧ ಮಾಡುತ್ತಿದ್ದೇವೆ. ನಮ್ಮ ಜೊತೆಗೆ ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಎಸ್ಸಿ ಎಸ್ಟಿ ಜನಾಂಗದವರು ಕೂಡ ವಿರೋಧಿಸುತ್ತಿದ್ದಾರೆ. ಆ ಸಮುದಾಯದ ನಾಯಕರನ್ನು ಹೊರತುಪಡಿಸಿ ಮೊದಲಿನಿಂದಲೂ ಕೂಡ ಒಕ್ಕಲಿಗ ಸಮಾಜವನ್ನು ಗುರಿ ಮಾಡುತ್ತಿರುವ ಮೊಟ್ಟಮ್ಮ ಕುಟುಂಬ ಇದೀಗ ನಮ್ಮ ನಾಲ್ವರನ್ನು ಗುರಿಯಾಗಿಸಿಕೊಂಡು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿರುವುದು ನಮಗೆ ಅತ್ಯಂತ ನೋವುಂಟು ಮಾಡಿದೆ ಎಂದರು.
ಅಲ್ಲದೆ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುವ ಗುಣವನ್ನು ಮೋಟಮ್ಮ ಕುಟುಂಬ ಹೊಂದಿಲ್ಲ. ಇದಕ್ಕಾಗಿ ಕೆಳಮಟ್ಟದಲ್ಲಿ ಪಕ್ಷ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಮೊಟ್ಟಮ ತಮ್ಮ ಸ್ಥಾನವನ್ನು ಭದ್ರಗೊಳಿಸುವ ದುರುದ್ದೇಶದಿಂದ ವಿರೋಧಿಸುತ್ತಿದ್ದಾರೆ. ಕುಮಾರಸ್ವಾಮಿ ಬಂದರೆ ನಾವು ಕೆಲಸ ಮಾಡುವುದಿಲ್ಲವೆಂದು ಮೋಟಮ್ಮ ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಹಾಗಾದರೆ ಮೊಟಮ್ಮನವರ ಪುತ್ರಿ ನಯನ ಮೋಟಮ್ಮ ಸ್ಪರ್ಧಿಸಿದರೆ ವಿರೋಧ ಮಾಡುತ್ತಿರುವ ಕಾರ್ಯಕರ್ತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಮೋಟಮ್ಮನವರಿಗೆ ವಿರೋಧಿ ಅಲೆ ವ್ಯಾಪಕವಾಗಿದ್ದು ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲದೆ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಪಕ್ಷಕ್ಕೆ ಹಿನ್ನಡೆ ಆಗುತ್ತಿದ್ದು ಇದನ್ನು ಗಮನಿಸಿ ನಾವು ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷ ಗೆಲ್ಲಲೇ ಬೇಕೆನ್ನುವ ಉದ್ದೇಶದಿಂದ ನಯನ ಮೋಟಮ್ಮನವರನ್ನು ವಿರೋಧಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!