May 8, 2024

MALNAD TV

HEART OF COFFEE CITY

ರೈತ ಸಂಘ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು; ಕೆ. ಮಂಚೇಗೌಡ

1 min read

ಚಿಕ್ಕಮಗಳೂರು: ಅಕ್ರಮಗಳು ಬೆಳಕಿಗೆ ಬಂದಿರುವ ಹತಾಶೆಗಾಗಿ ರೈತ ಸಂಘದ ಮುಖಂಡರ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೂಡಿಗೆರೆ ಪಟ್ಟಣ ವ್ಯಾಪ್ತಿಯ ಸ್ಥಳೀಯರಾದ ಕೆ ಮಂಚೇಗೌಡ ಮತ್ತು ಮನೋಜ್ ಆರೋಪಿಸಿದರು.
ನಗರದ ಚಿಕ್ಕಮಗಳೂರು ಪ್ರೆಸ್ ಕ್ಲಬ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಚಿಕ್ಕಮಗಳೂರು ಶಾಖೆ ಇವರು ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು, ನಾನು ಯಾವುದೇ ರೀತಿಯ ಅಕ್ರಮ ಆಸ್ತಿ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿಲ್ಲ ಎಂದು ಹೇಳಿದರು.
ಅ. 4 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ದುಗಪ್ಪಗೌಡ ಪರವಾಗಿ ಮೂಡಿಗೆರೆ ತಾಲೂಕಿನಲ್ಲಿ ಆಗಿರುವಂತಹ ಭೂಕಬಳಿಕೆ ಪ್ರಕರಣಗಳಿಗೆ ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ, ಸರ್ಕಾರ ಸೂಕ್ತ ಕ್ರಮ ಕೈಗೊಂಡು ಅದನ್ನ ವಶಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರು ಅಷ್ಟೇ ಅಲ್ಲದೆ ನ್ಯಾಯ ಸಿಕ್ಕಿಲ್ಲ ಎಂದಾದರೆ ಅಕ್ಟೋಬರ್ 9 ರಂದು ಪ್ರತಿಭಟನೆ ಕೂಡ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ ರೈತ ಸಂಘದ ಮುಖಂಡರು ಸತ್ಯಾಸತ್ಯತೆ ತಿಳಿದು ಹೋರಾಟಕ್ಕೆ ಮುಂದಾಗಬೇಕು. ರೈತ ಸಂಘದ ಅಧ್ಯಕ್ಷರ ಹೆಸರಿನಲ್ಲಿ ದುಗ್ಗಪ್ಪಗೌಡ ನನಗೆ ಮೂರು ತಲೆಮಾರಿನಿಂದ ಬಂದ 75 ವರ್ಷಗಳ ಆಸ್ತಿಯನ್ನು ಒತ್ತುವರಿ ಮಾಡಿ ಕಬಳಿಕೆ ಮಾಡಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ನನ್ನ ಆಸ್ತಿಯ ಪಕ್ಕದಲ್ಲಿಯೇ ಬಂದು ನನ್ನ ಆಸ್ತಿಯನ್ನು ಕಬಳಿಸಿ ಮನೆ ಕೂಡ ನಿರ್ಮಾಣ ಮಾಡಿದ್ದಾರೆ. ಈ ಕುರಿತಾಗಿ ಸಾಕಷ್ಟು ಬಾರಿ ಪಂಚಾಯಿತಿ ಕೂಡ ಆಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪಂಚಾಯಿತಿ ಮಾಡಿದರು ಕೂಡ ಇದೇ ರೀತಿ ಆಪಾದನೆಗಳನ್ನು ಮಾಡುತ್ತಿದ್ದಾರೆ. ಪಂಚಾಯಿತಿಯ ನಿರ್ಧಾರದಲ್ಲಿ ನನ್ನ ಆಸ್ತಿಯನ್ನು ಕೊಂಡುಕೊಳ್ಳುವುದು ಮತ್ತು ಆಸ್ತಿಗೆ ಬೆಲೆ ಕೊಡಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ ಆ ಹಣವನ್ನು ಉಳಿಸಿಕೊಳ್ಳುವ ದುರುದ್ದೇಶದಿಂದ ಕೆಟ್ಟ ಆಪಾದನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದು ನನ್ನ ಆಸ್ತಿ ಎಂದು ಅವರೇ ಒಪ್ಪಿಕೊಂಡಿರುವ ಅಥವಾ ಅಧಿಕಾರಿಗಳೊಂದಿಗೆ ಹೇಳಿಕೊಂಡಿರುವ ದಾಖಲೆಗಳನ್ನು ಮುಂದಿನ ದಿನದಲ್ಲಿ ಪ್ರಸ್ತುತಪಡಿಸುತ್ತೇನೆ. ನಾನು ಇವರು ಹೇಳಿರುವ ಯಾವುದೇ ರೀತಿಯ ಅಕ್ರಮ ಮಾಡಿಲ್ಲ ಅವರು ಸೂಚಿಸಿದ ಹಾಗೆ ಕಾನೂನುಬಾಹಿರವಾಗಿ ಬ್ರಾಂಡಿ ಅಂಗಡಿ ರಿಯಲ್ ಎಸ್ಟೇಟ್ ದಂಧೆಯನ್ನು ಮಾಡಿಲ್ಲ ಎಂದ ಅವರು ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಮೋಸ ಮಾಡದೆ ನಿಯಮನುಸಾರವಾಗಿ ನಡೆಸಿಕೊಂಡು ಹೋಗುತ್ತಿದ್ದೇನೆ ಅಲ್ಲದೆ ಸರ್ಕಾರಕ್ಕೆ ಆದಾಯ ಭರಿಸುವಲ್ಲಿ ಶ್ರಮಿಸುತ್ತಿದ್ದೇನೆ ಎಂದರು.
ದುಗ್ಗಪ್ಪಗೌಡ ಮತ್ತು ಸಹಚರರು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕಿಕೊಳ್ಳಲು ಮತ್ತು ಮೋಸದಿಂದ ಬೇರೆಯವರ ಆಸ್ತಿ ಕಬಳಿಸಲು ಕರೆದಿರುವ ಪ್ರತಿಭಟನೆಯಲ್ಲಿ ಯಾರು ಕೂಡ ಭಾಗಿಯಾಗಬಾರದೆಂದು ಮಾಧ್ಯಮದ ಮೂಲಕ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!