May 14, 2024

MALNAD TV

HEART OF COFFEE CITY

ಹಾಲಿ ಶಾಸಕರು ಕಾಂಗ್ರೆಸ್ಸಿಗೆ ಹೋಗಿರುವುದನ್ನು ಮರೆತಿದ್ದಾರೆ – ಸಿ.ಟಿ. ರವಿ

1 min read

ಚಿಕ್ಕಮಗಳೂರು – ನಮ್ಮ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಾಲಿ ಶಾಸಕರು ನಾವು ಮಾಡಿಸಿದ್ದೇವೆ ಎಂದು ಜಾಹಿರಾತಿನಲ್ಲಿ ಬರೆದುಕೊಂಡಿದ್ದಾರೆ. ಬಹುಶಃ ಅವರು ಕಾಂಗ್ರೆಸ್ಸಿಗೆ ಹೋಗಿರುವುದನ್ನು ಮರೆತಿದ್ದಾರೆ ಎಂದು ಮಾಜಿ ಶಾಸಕರಾದ ಸಿ.ಟಿ. ರವಿ ವ್ಯಂಗ್ಯವಾಡಿದರು.

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಬಿಎಲ್‌ಎಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚಿಕ್ಕಮಗಳೂರು ಹಾಲಿ ಶಾಸಕರು ಸಿಕ್ಕಾ ಪಟ್ಟೆ ಕಾಮಗಾರಿ ಮಂಜೂರು ಮಾಡಿಸಿರುವುದಾಗಿ ಜಾಹಿರಾತು ಹಾಕಿಸಿಕೊಂಡಿದ್ದಾರೆ. ಅದರಲ್ಲಿ ಚಿಕ್ಕಮಗಳೂರು ಡಿಸಿ ಕಾಂಪ್ಲೆಕ್ಸ್, ಬಸವನಹಳ್ಳಿ ಕೆರೆ ಕಾಮಗಾರಿ, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ, ಜಲ್ ಜೀವನ್ ಮಿಷನ್, ಭೈರಾಪುರ ಪಿಕ್ ಅಪ್ ಹೀಗೆ ಯಾವುದೆಲ್ಲವನ್ನೂ ಹಿಂದೆ ನಾವು ಮಂಜೂರು ಮಾಡಿಸಿದ್ದೆವೋ ಅದನ್ನೇ ನಾವು ಮಾಡಿಸಿದ್ದೇವೆಂದು ಶಾಸಕರು ಜಾಹಿರಾತಿನಲ್ಲಿ ಬರೆದುಕೊಂಡಿದ್ದಾರೆ. ಬಹುಶಃ ಅವರು ಕಾಂಗ್ರೆಸ್‌ಗೆ ಹೋಗಿದ್ದೇವೆ ಎನ್ನುವುದನ್ನು ಮರೆತಿದ್ದಾರೆ  ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ. ಮತ್ತೊಮ್ಮೆ ಮೋದಿ ಎನ್ನುವ ಸಂಕಲ್ಪ ಇಟ್ಟುಕೊಂಡು ಬೂತ್ ಹಂತದಲ್ಲಿ ಸಂಘಟನೆಯನ್ನು ಸಕ್ರೀಯ ಮತ್ತು ಗಟ್ಟಿಗೊಳಿಸಬೇಕು ಎಂದು ಮಾಜಿ ಶಾಸಕ ಸಿ.ಟಿ.ರವಿ ಕರೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಕಾಂಗ್ರೆಸ್ ಪಕ್ಷದ ಶಾಸಕರಲ್ಲೇ ಕೇವಲ ನಾಲ್ಕು ತಿಂಗಳಲ್ಲೇ ಸಂಬಂಧಗಳು ಹಳಸುತ್ತಿರುವುದನ್ನು ಗಮನಿಸಿದರೆ ಇಷ್ಟರಲ್ಲೇ ತಾ.ಪಂ., ಜಿ.ಪಂ. ಚುನಾವಣೆ ನಡೆಸುತ್ತಾರೆ ಎಂದು ಅನ್ನಿಸುತ್ತಿಲ್ಲ. ಆದರೂ ನಾವಂತೂ ತಯಾರಿ ಮಾಡಿಕೊಳ್ಳಬೇಕು.ಈ ಕಡೆಗೆ ಗಮನ ಕೊಡಬೇಕು ಎಂದು ಸೂಚಿಸಿದರು. ಕಳೆದ 19 ವರ್ಷಗಳಿಂದ ಅಧಿಕಾರದ ರಾಜಕಾರನವನ್ನ ಅನುಭವಿಸಿದ ಬಿಜೆಪಿ ಕಾರ್ಯಕರ್ತರಿಗೆ ಅದನ್ನು ಬಿಟ್ಟು ರಾಜಕಾರಣ ಮಾಡುವುದು ಕಷ್ಟ ಅನ್ನಿಸಬಹುದು.ಈಗ ಸಣ್ಣ ಸಣ್ಣ ವಿಷಯಕ್ಕೂ ಸ್ವಲ್ಪ ಪ್ರಯತ್ನ ಪಡಬೇಕು ಎನ್ನಿಸುತ್ತಿರಬಹುದು.ಜೀವನದಲ್ಲಿ ಸವಾಲುಗಳು ಬಂದಾಗ ಅವಕಾಶಗಳನ್ನು ಸೃಷ್ಠಿ ಮಾಡುತ್ತವೆ. ಕಾಲ ಹೀಗೆಯೇ ಇರುವುದಿಲ್ಲ ಎಂದುಕೊಂಡರೆ ಅದು ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ.ಸುಖದ ಸುಪ್ಪತ್ತಿಗೆ ಇದ್ದಾಗಲೂ, ಅತ್ಯಂತ ಕೆಟ್ಟ ಪರಿಸ್ಥಿತಿ ಇದ್ದಾಗಲೂ ಕೂಡ ಈ ಎರಡು ಪದಗಳು ನಮ್ಮ ಮನಸ್ಸಿನಲ್ಲಿರಬೇಕು ಎಂದರು.

ಬಿಜೆಪಿ ಅಧಿಕಾರವನ್ನ ಸಾಧನ ಎಂದು ಭಾವಿಸಿರುವ ಪಕ್ಷ ಆದರೆ ರಾಜಕಾರಣ ಸಿದ್ಧಾಂತಕ್ಕಾಗಿ ಮಾತ್ರ.ನಾವು ಯಾವ ಲಕ್ಷ್ಯವನ್ನು ಇಟ್ಟು ಕೊಂಡು ಕೆಲಸ ಮಾಡುತ್ತಿದ್ದೇವೋ ಅದರ ಯಶಸ್ಸಿಗೆ ಅಧಿಕಾರ ಒಂದು ಸಾಧನ ಮಾತ್ರ. ಇದರ ನಡುವೆ ಪರಿಸ್ಥಿತಿ ಜೊತೆಗೆ ರಾಜೀ ಮಾಡಿಕೊಂಡು ಬದುಕುವ ಜನ ಇತಿಹಾಸದಲ್ಲೂ ನೋಡಿದ್ದೇವೆ. ವರ್ತಮಾನದಲ್ಲೂ ನೋಡುತ್ತೇವೆ. ಅವರು ಇಂದು ಕಳೆದು ಹೋಗಿದ್ದಾರೆ. ಅವರಾರಿಗೂ ಹೆಜ್ಜೆ ಗುರುತನ್ನು ಮೂಡಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿಯನ್ನು ಸವಾಲಾಗಿ ಎದುರಿಸಿ ನಿಂತು ಸ್ವೀಕರಿಸುತ್ತಾರೋ ಅವರು ಇತಿಹಾಸದಲ್ಲಿ ಶಾಶ್ವತವಾಗಿ ಸ್ಥಾನ ಮಾನ ಗಳಿಸಿದ್ದಾರೆ ಎಂದರು. ನಡುವಿನ ಕಾಲಘಟ್ಟದಲ್ಲಿ ಬಂದವರು ಹಾಗೂ ಅಧಿಕಾರಕ್ಕಾಗೇ ಬಂದವರಿಗೆ ಇದು ಕಷ್ಟ ಎನ್ನಿಸಬಹುದು.ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪಕ್ಷ ಕಟ್ಟಿದವರಿಗೆ ಹೋಲಿಸಿದರೆ ಇಂದಿನವರದ್ದು ಕಷ್ಟವೇನಲ್ಲ. ಹಿಂದೆ ಯಾವುದೇ ವಿಷಯವನ್ನು ಪ್ರಶ್ನಿಸಲು ಹಿಂದೆ ಸ್ವಲ್ಪ ಕಸಿವಿಸಿ ಆಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ಈ ಕಾರಣಕ್ಕೆ ಪ್ರಶ್ನಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.ಜನ ಪರ ಹೋರಾಟದ ಮೂಲಕ ಬೂತ್ ನಿಂದ ಹಿಡಿದು ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ಕೇಂದ್ರದ ವರೆಗೆ ನಾಯಕತ್ವವನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಗಂಗಾ ಕಲ್ಯಾಣ ನಮ್ಮ ಕಾಲದಲ್ಲಿ ಮಂಜೂರಾಗಿವೆ. ಅವನ್ನು ಕೊರೆಯಲೇಬೇಕು. ಆದರೆ ಅದನ್ನಿಟ್ಟುಕೊಂಡು ರಾಜಕೀಯ ಲಾಭ ಪಡೆಯಬೇಕು ಎನ್ನುವ ಪ್ರಯತ್ನ ಕಾಂಗ್ರೆಸಿಗರಿಂದ ನಡೆಯುತ್ತಿದೆ ಎಂದು ದೂರಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಕೋಟೆ ರಂಗನಾಥ್, ಈಶ್ವರಳ್ಳಿ ಮಹೇಶ್, ಬೆಳವಾಡಿ ರವೀಂದ್ರ, ಕೆ.ಪಿ.ವೆಂಕಟೇಶ್, ವಿಜಯಕುಮಾರ್, ಸುಧೀರ್, ಸೀತಾರಾಮ ಭರಣ್ಯ, ಅವಿನಾಶ್ ಪಿಳ್ಳೇನಹಳ್ಳಿ ಇತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!