May 17, 2024

MALNAD TV

HEART OF COFFEE CITY

ಸಹಸ್ರ ಭಕ್ತರ ನಡುವೆ ಸಿಂಗಟಕೆರೆ ಕಲ್ಲೇಶ್ವರ ಸ್ವಾಮಿ ಅದ್ಧೂರಿ ತೆಪ್ಪೋತ್ಸವ

1 min read

 

 

ಕಡೂರು : ಐತಿಹಾಸಿಕ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ಅವರ ತೆಪ್ಪೋತ್ಸವವವನ್ನು ಲಕ್ಷಾಂತರ ಭಕ್ತರು ಭಕ್ತಿಯಿಂದ ಕಣ್ಮನ ತುಂಬಿಕೊಂಡರು.
ಭಾನುವಾರ ನಡೆದ ಈ ತೆಪ್ಪೋತ್ಸವಕ್ಕಾಗಿ ಶ್ರೀ ಕಲ್ಲೇಶ್ವರ ಸ್ವಾಮಿ,ಶ್ರೀ ಆಂಜನೇಯಸ್ವಾಮಿ,ಸೇವಾ ಸಮಿತಿ ಹಾಗೂ ಸಿಂಗಟಗೆರೆ
ಮತ್ತು ಫಿರ್ಕಾ 7 ಹಳ್ಳಿ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಸಿದ್ದತೆಯನ್ನು ಕೈಗೊಂಡಿದ್ದರು. ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಈ ರೀತಿಯ ತೆಪ್ಪೋತ್ಸವ ನಡೆಸುವುದು ವಾಡಿಕೆಯಾಗಿದ್ದು 2005ರಲ್ಲಿ ತೆಪ್ಪೋತ್ಸವ ನಡೆದಿತ್ತು. ಅದಾದ ಬಳಿಕ 16 ವರ್ಷಗಳ ನಂತರ ಇದೀಗ ತೆಪ್ಪೋತ್ಸವ ನಡೆಯುತ್ತಿದೆ.ತೆಪ್ಪೋತ್ಸವ ವೀಕ್ಷೆಣೆಗಾಗಿ ಸಿಂಗಟಗೆರೆ ಸುತ್ತಮುತ್ತಲ ನೂರಾರು ಹಳ್ಳಿಗಳ ಜನರಲ್ಲದೆ ರಾಜ್ಯದ ಚಿತ್ರದುರ್ಗ,ದಾವಣಗೆರೆ,ತುಮಕೂರು, ಶಿವಮೊಗ್ಗ, ಹಾಸನ,ಬೆಂಗಳೂರು ಸೇರಿದಂತೆ ಮುಂತಾದ ಜಿಲ್ಲೆಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿದ್ದರು.

ಬೃಹತ್‍ಕೆರೆಯ ಏರಿಯ ಮೇಲೆ ಸುತ್ತಲೂ ಲಕ್ಷಾಂತರ ಜನ ತೆಪ್ಪೋತ್ಸವ ವೀಕ್ಷಿಸಲು ಬೆಳಗ್ಗಿನಿಂದಲೇ ನಿಂತಿದ್ದು ರಕ್ಷಣೆಗಾಗಿ
ಕೆರೆಯ ಸುತ್ತಲೂ ಏರಿಯ ಮೇಲೆ ಮರದ ತುಂಡುಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಯಾವುದೇ ಅಹಿತಕರ ಘಟನೆ
ನಡೆಯದಂತೆ ಸಿಂಗಟಗೆರೆ,ಪಂಚನಹಳ್ಳಿ,ಯಗಟಿ ಮತ್ತು ಬೀರೂರು,ಕಡೂರು ಪೊಲೀಸ್ ಸೂಕ್ತ ಬಂದೊಬಸ್ತು ಕಲ್ಪಿಸಿದ್ದರು ನಿರೀಕ್ಷೆಗೂ ಮೀರಿದ್ದ ಜನ ಸಾಗರ ಹರಿದು ಬಂದಿದ್ದರಿಂದ ಸಂಚಾರ ಮತ್ತು ಊಟದ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥೆ ಉಂಟಾಗಿತ್ತು.

ಮಧ್ಯಾಹ್ನ 12.01 ಗಂಟೆಗೆ ಸಲ್ಲುವ ಅಭಿಜನ್ ಲಗ್ನದಲ್ಲಿ ತೆಪ್ಪೋತ್ಸವ ಆರಂಭವಾಗಬೇಕಾಗಿತ್ತು ಆದರೆ ತೆಪ್ಪವು ಗಟ್ಟಿಯಾಗಿ ದಡದಲ್ಲಿ ಹೂತುಕೊಂಡಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಹರಸಾಹಸಪಟ್ಟು ತೆಪ್ಪವನ್ನು ಚಲಿಸುವಂತೆ ಮಾಡಿದರು. ಈ ಸಮಯ ಭಕ್ತರ ಉದ್ಘೋಷಣೆ, ದೇವರ ನಾಮಸ್ಮರಣೆ ಮುಗಿಲು ಮಟ್ಟಿತು. ತೆಪ್ಪದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ 7 ಹಳ್ಳಿ ಫಿರ್ಕಾ ಗ್ರಾಮಸ್ಥರಲ್ಲಿ ಎಲ್ಲಾ ಕೋಮಿನ ಓರ್ವರನ್ನು ತೆಪ್ಪದಲ್ಲಿ ಕೂರಿಸಿದ್ದು ಜಾತ್ಯಾತೀತ ಮನೋಭಾವನೆಗೆ
ಸಾಕ್ಷಿಯಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!