May 17, 2024

MALNAD TV

HEART OF COFFEE CITY

ವೀಕೆಂಡ್ ಹಿನ್ನಲೆ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು

1 min read

ಕ್ರಿಸ್‍ಮಸ್ ಹಾಗೂ ವೀಕ್ ಎಂಡ್ ಹಿನ್ನೆಲೆ ಕಾಫಿನಾಡಿನ ಮುಳ್ಳಯ್ಯನಗಿರಿ ಭಾಗಕ್ಕೆ ನೂರಾರು ವಾಹನಗಳಲ್ಲಿ ಸಾವಿರರು ಪ್ರವಾಸಿಗರು ಭೇಟಿ ನೀಡಿದ್ದಾರೆ. ಸುಮಾರು 800 ಅಧಿಕ ವಾಹನಗಳಲ್ಲಿ ಸಾವಿರಾರು ಜನ ಪ್ರವಾಸಿಗರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಭೇಟಿ ನೀಡಿದ್ದಾರೆ. ಆದರೆ, ಯಾರೊಬ್ಬರು ಮುಖದಲ್ಲಿ ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಕೇಳೋದೆ ಬೇಡ. ಬೆಟ್ಟ ಹತ್ತೋದಕ್ಕೆ ಸುಸ್ತಾಗುತ್ತೆ, ಉಸಿರಾಡಲು ಆಗಲ್ಲ ಅಂತ ತೆಗೆದಿದ್ದೇವೆ ಎಂಬ ಸಿಲ್ಲಿ ಕಾರಣಗಳನ್ನ ನೀಡುತ್ತಿದ್ದಾರೆ.

 

ಓಮಿಕ್ರಾನ್ ತಡೆಯಲು ಸರ್ಕಾರ ಹೋರಾಟ ನಡೆಸುತ್ತಿದೆ. ಆರಂಭಿಕ ಹಂತವಾಗಿ ನೈಟ್ ಕಫ್ರ್ಯೂ ಕೂಡ ಜಾರಿಗೆ ತಂದಿದೆ. ಆದರೆ, ಪ್ರವಾಸಿಗರು ಮಾತ್ರ ಪ್ರವಾಸಿ ತಾಣಗಳಲ್ಲಿ ಬೇಕಾಬಿಟ್ಟಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಮುಳ್ಳಯ್ಯನಗಿರಿಯಲ್ಲಿ ಭಾರೀ ಪ್ರವಾಸಿಗರಿಂದ ಮೇಲ್ಭಾಗದಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಹಾಗಾಗಿ, ಸ್ಥಳಿಯರು ಓಮಿಕ್ರಾನ್ ಆತಂಕದಿಂದ ಸರ್ಕಾರ ಪ್ರವಾಸಿಗರನ್ನ ನಿಷೇಧಿಸಿ ಅಥವ ದಿನಕ್ಕೆ ಇಷ್ಟೆ ಪ್ರವಾಸಿಗರು ಎಂದು ಆದೇಶ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಆದರೆ, ಗಿರಿ ಭಾಗದಲ್ಲಿ ಪ್ರವಾಸಿಗರ ಬೇಜವಾಬ್ದಾರಿಯ ಮೋಜು-ಮಸ್ತಿಯನ್ನ ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!