May 17, 2024

MALNAD TV

HEART OF COFFEE CITY

ದಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ_ಎಸ್.ಎಲ್ ಭೋಜೇಗೌಡ

1 min read

ಚಿಕ್ಕಮಗಳೂರು: ನಗರಸಭೆ ಭ್ರಷ್ಟಚಾರದ ಕೂಪವಾಗಿದ್ದು, ಭ್ರಷ್ಟಚಾರ ಮುಕ್ತ, ದಕ್ಷ ಆಡಳಿತಕ್ಕಾಗಿ ನಗರಸಭೆ ಚುನಾವಣೆಯಲ್ಲಿ ಪಕ್ಷ ಭೇದ ಬದಿಗಿಟ್ಟು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ತಿಳಿಸಿದರು.

 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಬಹುದಾದ ಆಡಳಿತ ವ್ಯವಸ್ಥೆ. ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜನರೊಂದಿಗೆ ನಿಕಟ ಸಂಪರ್ಕದಲ್ಲಿರಲು ಸಾಧ್ಯ. ಭ್ರಷ್ಟ, ದಕ್ಷ, ಪ್ರಾಮಾಣಿಕ ಆಡಳಿತ ನಡೆಸಿದರೇ ಜನರು ಸ್ಪಂದಿಸುತ್ತಾರೆ. ಆದರೆ, 10 ವರ್ಷಗಳಿಂದ ನಗರಸಭೆ ಆಡಳಿತ ನಡೆಸಿರುವ ಬಿಜೆಪಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಜ್ಯದ ಮುಖಂಡರನ್ನು ಕರೆಸಿ ಪ್ರಚಾರ ಮಾಡುವುದನ್ನು ನೋಡಿದರೇ, ಅವರು ಉತ್ತಮ ಆಡಳಿತ ನೀಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿ ಪಕ್ಷ ನಗರಸಭೆಯಲ್ಲಿ ಉತ್ತಮ ಆಡಳಿತ ನೀಡದ ಪರಿಣಾಮ ನಗರದ ಗಲ್ಲಿಗಲ್ಲಿಗಳಲ್ಲಿ ಕೇಂದ್ರ ರಾಜ್ಯ ಮುಖಂಡರು ಮತ್ತು ಜಾತಿವಾರು ಮುಖಂಡರು ಸಂಚರಿಸುವ ದುರ್ಗತಿ ಬಂದಿದೆ ಎಂದು ಟೀಕಿಸಿದ ಅವರು, ವಿರೋಧ ಪಕ್ಷದಲ್ಲಿ ಕುಳಿತು ಸಮರ್ಪಕ ವಾಗಿ ತನ್ನ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಮಟ್ಟದ ಮುಖಂ ಡರನ್ನು ಕರೆಸಿ ಮತಯಾಚಿಸುವ ಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರಿಗೆ ಆಮಿಷಗಳನ್ನು ಒಡುತ್ತಿವೆ. ಹಣದ ಹೊಳೆಯನ್ನು ಹರಿಸಲಾಗುತ್ತಿದೆ ಎಂದು ಆರೋಪಿಸಿ ಅವರು, ಜನರ ಸಂಕಷ್ಟಗಳಿಗೆ ಸ್ಪಂಧಿಸುವ ನಗರದ ಅಭಿವೃದ್ಧಿಗೆ ಶ್ರಮಿಸುವ ಉತ್ತಮ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ನಗರದಲ್ಲಿ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಮೂಲ ಭೂತ ಸೌಲಭ್ಯಗಳು ಸಮರ್ಪಕವಾಗಿಲ್ಲ, ಚುನಾವಣೆ ವಿಳಂಬದಿಂದ ನಗರಸಭೆಗೆ ಸರ್ಕಾರ ಆಡಳಿತಾಧಿಕಾರಿನ್ನು ನೇಮಿಸಿದ್ದು ದಕ್ಷ ಅಧಿಕಾರಿಯನ್ನು ನೇಮಿಸುವಲ್ಲಿ ಇಲ್ಲೀನ ಶಾಸಕರು ವಿಫಲರಾಗಿದ್ದು, ನಗರಸಭೆ ದುರಾಡಳಿತದಿಂದ ಜನರು ಬೇಸತ್ತಿದ್ದು, ಇದಕ್ಕೆ ಶಾಸಕ ಸಿ.ಟಿ.ರವಿ ನೇರ ಹೊಣೆ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷದಿಂದ 12ಜನ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಇಬ್ಬರು ಪಕ್ಷೇತರರಿಗೆ ಬೆಂಬಲ ನೀಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ನಗರಸಭೆ ಉತ್ತಮ ಆಡಳಿತಕ್ಕಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್, ಬಾಳೂರು ಆದರ್ಶ, ಹೊಲದಗದ್ದೆ ಗಿರೀಶ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!