May 4, 2024

MALNAD TV

HEART OF COFFEE CITY

ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ರಂಭಾಪುರಿ ಶ್ರೀ

1 min read

ರಾಷ್ಟ್ರಧ್ವಜದ ಆರೋಹಣದ ಈ ಸಂದರ್ಭ ರಾಷ್ಟ್ರದ ಐಕ್ಯತೆ ಹಾಗೂ ಸಾಮರಸ್ಯವನ್ನ ಕಾಪಾಡಿಕೊಂಡು ಹೋಗುವುದೇ ಸ್ವಾತಂತ್ರ್ಯದ ಸಂಕೇತ. ಧ್ವಜದಲ್ಲಿನ ಮೂರು ಬಣ್ಣ ಭಾವ್ಯಕ್ಯತೆಯ ಸಂಕೇತ. ಮಧ್ಯದ ಚಕ್ರ ಅಹಿಂಸೆಯನ್ನ ತೋರುತ್ತಿದೆ. ದೇಶದ ಭದ್ರತೆ ಹಾಗೂ ಸುಭ್ರದತೆಯ ಹಿತದೃಷ್ಟಿಯಿಂದ ರಾಷ್ಟ್ರದ ಎಲ್ಲರೂ ಒಂದಾಗಿ-ಒಗ್ಗಟ್ಟಿನಿಂದ ಶ್ರಮಿಸಬೇಕಾಗಿರುವುದು ಅಗತ್ಯ ಹಾಗೂ ಅನುವಾರ್ಯವಾಗಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಅವರು ಇಂದು ಮಠದ ಆವರಣದಲ್ಲಿ ಶಾಲಾ ಮಕ್ಕಳ ಜೊತೆ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆಯಲು ರಾಷ್ಟ್ರದ ಮುತ್ಸದ್ದಿಗಳು, ದೇಶಪ್ರೇಮಿಗಳು ಅವಿರತವಾಗಿ ಹೋರಾಡಿದ್ದನ್ನ ಎಲ್ಲರೂ ನೆನಪಿಸಿಕೊಳ್ಳಬೇಕು. ಬ್ರಿಟಿಷರ ದಾಸ್ಯದಿಂದ ಹೊರಬಂದು ಸ್ವಾತಂತ್ರ್ಯ ವಾಗಿ ಬದುಕಲು ಹೋರಾಡಿದವರಲ್ಲಿ ಮಹಾತ್ಮ ಗಾಂಧಿಜೀ, ಸರ್ದಾರ್ ವಲ್ಲಾಬಯ್ ಪಟೇಲ್, ಬಾಲಗಂಗಾಧರ್ ತಿಲಕ್, ದಾದಾಬಾಯ್ ನವರೋಜಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನದಿಂದ ರಾಷ್ಟ್ರ ಸ್ವಾತಂತ್ರ್ಯ ಪಡೆದಿದೆ. ಸ್ವಾತಂತ್ರ್ಯದ ಬಳಿಕ ಈ ರಾಷ್ಟ್ರ ಪ್ರಗತಿ ಪಥದಲ್ಲಿ ನಡೆಯುತ್ತಿರುವುದು ಶುಭೋದಯದ ಸಂಕೇತ ಎಂದರು.ವೈಯಕ್ತಿಕ ಹಿತಾಸಕ್ತಿಗಾಗಿ ದೇಶದ ಭದ್ರತೆ-ಸುಭ್ರದತೆಗೆ ಯಾವುದೇ ರೀತಿಯ ಧಕ್ಕೆ ಆಗಬಾರದು. ದೇಶ-ನಾಡಿನ ಬಗ್ಗೆ ಸ್ವಾಭಿಮಾನ ಇದ್ದಿದ್ದೇ ಆದರೆ ಎಂಥಹಾ ಕಠಿಣ ಸಮಸ್ಯೆಗಳನ್ನು ಎದುರಿಸಬಹುದು. 77ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸುತ್ತಿರುವುದು ರಾಷ್ಟ್ರದ ಎಲ್ಲಾ ಜನರ ಸೌಭಾಗ್ಯ. ಈ ದೇಶ ಉತ್ತರೋತ್ತರವಾಗಿ ಅಭಿವೃದ್ದಿ ಆಗಲಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!