May 18, 2024

MALNAD TV

HEART OF COFFEE CITY

ಬೈಕಿನಲ್ಲಿ ಬೆಂಕಿ ಬಂದರೂ ನಿಲ್ಲಿಸದ ಕಾರುಚಾಲಕ, ಕಾಫಿನಾಡಲ್ಲಿ ಹಿಟ್ ಅಂಡ್ ರನ್ ಕೇಸ್

1 min read

 

 

ಕಾರಿನ ಅಡಿಗೆ ಸಿಕ್ಕ ಬೈಕಿನಲ್ಲಿ ಬೆಂಕಿ ಬಂದರೂ ಕಾರು ಚಾಲಕ ಕಾರನ್ನ ನಿಲ್ಲಿಸದೆ ಹೋದ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಈ ದುರ್ಘಟನೆ ಸಂಭವಿಸಿದ್ದು ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್ ಕಾರಿನ ಅಡಿಗೆ ಸಿಲುಕಿದೆ. ಆದರೂ, ಕಾರು ಚಾಲಕ ಬೈಕ್ ನಿಲ್ಲಿಸದೇ ಹೋಗಿದ್ದಾನೆ. ಕೆಳಗೆ ಬಿದ್ದ ಬೈಕ್ ಸುಮಾರು 100 ಅಡಿಯಷ್ಟು ದೂರ ಕೊಂಚ್ಚಿಕೊಂಡು ಹೋಗಿದೆ. ರಸ್ತೆಯಲ್ಲಿ ಬೈಕ್ ಉಜ್ಜುವ ರಭಸಕ್ಕೆ ಬೈಕಿನಲ್ಲಿ ಬೆಂಕಿ ಕೂಡ ಬಂದಿದೆ. ಆದರೂ, ಕಾರು ಚಾಲಕ ಕಾರು ನಿಲ್ಲಿಸಿಲ್ಲ. ಹಿಟ್ ಅಂಡ್ ರನ್ ಕೇಸ್ ರೀತಿ ಕಾರನ್ಮ ನಿಲ್ಲಿಸದೆ ಹೋಗಿದ್ದಾನೆ. ಯಾವಾಗ, ಬೈಕ್ ಕೆಳಗೆ ಬಿದ್ದು ಬೆಂಕಿ ಹತ್ತಿದ್ಯೋ ಆಗ ಸ್ಥಳಿಯರು ಬೈಕಿನ ಬಳಿ ಓಡಿ ಬಂದಿದ್ದಾರೆ. ಆಗ, ಕಾರು ಚಾಲಕ ಕಾರನ್ನ ನಿಲ್ಲಿಸಿದ್ದಾನೆ. ಕಾರು ನಿಲ್ಲುತ್ತಿದ್ದಂತೆ ಬೈಕ್ ಕಾರಿನಿಂದ ಬೇರ್ಪಟ್ಟಿದೆ. ಆಗ, ಕಾರು ಚಾಲಕ ಕಾರನ್ನ ಒಂದು ಸೈಡಿಗೆ ತೆಗೆದುಕೊಂಡು ಕಾರನ್ನ ನಿಲ್ಲಿಸದೇ ಹೋಗಿದ್ದಾನೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರು ಚಾಲಕನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಹಿಟ್ ರನ್‌ ಕೇಸ್ ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!