May 3, 2024

MALNAD TV

HEART OF COFFEE CITY

ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಖರ್ಗೆಯೇ ಗೆಲ್ಲಲಿಲ್ಲ : ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

1 min read

ಚಿಕ್ಕಮಗಳೂರು : ಎಂ.ಪಿ. ಚುನಾವಣೆ ವೇಳೆ ರಾಹುಲ್ ಗಾಂಧಿಯನ್ನ ಕರೆದುಕೊಂಡು ಬಂದು ಕನಕಪುರದಲ್ಲಿ ಕ್ಯಾಂಪೇನ್ ಮಾಡ್ಸಿದ್ರೆ ಅಲ್ಲೂ ಗೆಲ್ತಿದ್ವಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಂಡ್ರೆ ಬಿಜೆಪಿಗೆ ಭಯ ಎಂಬ ಖರ್ಗೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ರಾಹುಲ್ ಗಾಂಧಿ ಕರ್ಕೊಂಡ್ ಬಂದು ಕನಕಪುರದಲ್ಲಿ ಕ್ಯಾಂಪೇನ್ ಮಾಡ್ಸಿದ್ರೆ ಅದನ್ನೂ ನಾವು ಗೆಲ್ತಿದ್ವಿ ಎಂದಿದ್ದಾರೆ. ನಮ್ಮ ಪೂರ್ವ ತಯಾರಿಯ ಕೊರತೆಯಿಂದ ಆ ಒಂದು ಕ್ಷೇತ್ರ ಕಾಂಗ್ರೆಸ್ನವರು ಗೆದ್ರು ಅಷ್ಟೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಖರ್ಗೆಯೇ ಗೆಲ್ಲಲಿಲ್ಲ. ಹೈಕಮಾಂಡ್ಗೆ ನಜರ್ ರೂಪಿಸುವ ಕಲ್ಚರ್ ಕಾಂಗ್ರೆಸ್ನಲ್ಲಿದೆ. ರಾಹುಲ್ ನೇತೃತ್ವದಲ್ಲಿ ಯಾವ ಚುನಾವಣೆ ಗೆದ್ದಿದ್ದಾರೆ. ನಮಗ್ಯಾಕೆ ಭಯ ಅಂತಾ ಸಿ.ಟಿ ರವಿ ಪ್ರಶ್ನಿಸಿದ್ದಾರೆ. ರಾಹುಲ್ ನೇತೃತ್ವದ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಕ್ಕಿದ್ದು ಒಂದೇ ಕ್ಷೇತ್ರ. ಬಲವಾದ ಅಭ್ಯರ್ಥಿ ಹಾಕಿ ಕ್ಯಾಂಪೇನ್ ಮಾಡಿದ್ರೆ ಅದನ್ನ ನಾವು ಬಿಡ್ತಿರ್ಲಿಲ್ಲ ಅಂತ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!