May 2, 2024

MALNAD TV

HEART OF COFFEE CITY

ಮಾಜಿ ಸಿಎಂ ಖಜಾನೆಯನ್ನು ಭರ್ತಿ ಮಾಡಿಲ್ಲ ಸಿ.ಟಿ.ರವಿ

1 min read

ಚಿಕ್ಕಮಗಳೂರು : ಲಾಕ್ ಡೌನ್ ಮಾಡೋದಾದ್ರೆ ಪ್ರತಿ ಕುಟುಂಬಕ್ಕೆ 10 ಸಾವಿರ ನೀಡಲಿ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಮಾಜಿ ಸಿಎಂ ಸರ್ಕಾರದ ಖಜಾನೆಯನ್ನ ಭರ್ತಿ ಮಾಡಿ ಹೋಗಿಲ್ಲ. ಖಾಲಿ ಮಾಡಿ ಹೆಚ್ಚುವರಿ ಸಾಲ ಮಾಡಿ ಹೋಗಿದ್ದಾರೆ. ವಿಜಯನಗರದ ಅರಸರಂತೆ ಚಿನ್ನ-ಬೆಳ್ಳಿಯನ್ನ ರಸ್ತೆಯಲ್ಲಿ ಮಾರುವಂತಹಾ ಶ್ರೀಮಂತಿಕೆ ತುಂಬಿಸಿ ಹೋಗಿದ್ರೆ ಈ ರೀತಿ ಹೇಳಬಹುದಿತ್ತು ಅಂತ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕುಟುಕಿದ್ದಾರೆ. ಅವರ ಮನೆ ಖಜಾನೆ ತುಂಬಿಸಿಕೊಂಡು ಹೋದರು. ಪಾರ್ಟಿ ಖಜಾನೆ ತುಂಬಿಸಿ, ರಾಜ್ಯದ ಖಜಾನೆ ಖಾಲಿ ಮಾಡಿ ಹೋಗಿದ್ದಾರೆ. ಅವರು ಇದ್ದಾಗ ಏನೇನು ಕೊಟ್ರು ಅನ್ನೋದರ ಪಟ್ಟಿ ನಮ್ಮ ಬಳಿ ಇದೆ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!