May 17, 2024

MALNAD TV

HEART OF COFFEE CITY

ಐಡಿಎಸ್‍ಜಿ ಕಾಲೇಜಿನಲ್ಲಿ ಆನ್‍ಲೈನ್ ಕ್ಲಾಸ್‍ಗೆ ಆಗ್ರಹಿಸಿ ಪ್ರತಿಭಟನೆ

1 min read

 

ಚಿಕ್ಕಮಗಳೂರು: ಐಡಿಎಸ್‍ಜಿ ಕಾಲೇಜಿನ ಮುಂದೆ ಆನ್‍ಲೈನ್ ಕ್ಲಾಸ್ ಮಾಡುವಂತೆ ಆಗ್ರಹಿಸಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ ಬಳಿಕ ವಿದ್ಯಾರ್ಥಿನಿಯರು ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದು ಆನ್ ಲೈನ್ ಕ್ಲಾಸ್ ಮಾಡುವಂತೆ ಒತ್ತಾಯಿಸಿದ್ರು. ಆದರೆ ಇದಕ್ಕೆ ವಾರ ಕಳೆದ್ರು ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಿದ ಹಿನ್ನೆಲೆ ಬುಧವಾರ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬಂದು ನ್ಯಾಯಾಲಯದ ಆದೇಶದ ವರೆಗೂ ನಮಗೆ ಆನ್‍ಲೈನ್ ಕ್ಲಾಸ್ ಮಾಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು.

ನಮಗೆ ನ್ಯಾಯಾಲಯದ ಆದೇಶದ ವರೆಗೆ ಆನ್‍ಲೈನ್ ಕ್ಲಾಸ್ ಮಾಡುವಂತೆ ಕಳೆದ ಒಂದು ವಾರದ ಹಿಂದೆ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದು, ಆದರೆ ಈ ವರೆಗೂ ಈ ಬಗ್ಗೆ ಗಮನ ಹರಿಸಿಲ್ಲ. ಪ್ರತಿದಿನ ಕಾಲೇಜಿಗೆ ಬಂದು ಈ ಬಗ್ಗೆ ಕೇಳಿ ವಾಪಾಸ್ ಆಗುತ್ತಿದ್ದೇವೆ ಆದರೆ ಯಾವುದೇ ಭರವಸೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ರೆಕಾರ್ಡೆಡ್(ಎಲ್‍ಎಂಹೆಚ್) ಕ್ಲಾಸ್ ನಲ್ಲಿ ಓದಿಕೊಳ್ಳಿ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಆದರೆ ಅದ್ರಲ್ಲಿ ಅರ್ಥ ಆಗಲ್ಲ. ಅರ್ಥವಾಗದಿದ್ದರೆ ನಮಗೆ ಕಾಲ್ ಮಾಡಿ ನಿಮ್ಮ ಸಂದೇಹ ಬಗೆಹರಿಸಿಕೊಳ್ಳಿ ಎಂದು ಭರವಸೆ ನೀಡಿದ್ರು. ಆದರೆ ಕಾಲ್ ಮಾಡಿದ್ರೆ ಕೆಲ ಉಪನ್ಯಾಸಕರು ಕಾಲ್ ಪಿಕ್ ಮಾಡಲ್ಲ. ಮತ್ತೆ ಕೆಲವರು ರಿಜೆಕ್ಟ್ ಲೀಸ್ಟ್‍ಗೆ ಹಾಕಿದ್ದಾರೆ. ನಾವು ಮತ್ತೆ ಯಾರ ಬಳಿ ಹೋಗಿ ನ್ಯಾಯ ಕೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು

 

ಆನ್‍ಲೈನ್ ಕ್ಲಾಸ್ ಮಾಡುವಂತೆ ಹಿಜಾಬ್ ಧರಿಸಕೊಂಡೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಕೊನೆಗೆ ಉಪನ್ಯಾಸಕರು ಹಾಗೂ ಪೆÇಲೀಸರು ಹರಸಾಹಸ ಪಟ್ಟು ಸಮಾಧಾನಪಡಿಸುವಲ್ಲಿ ಯಶಸ್ವಿಯಾದ್ರು. ಬುಧವಾರ ಪ್ರಾಂಶುಪಾಲರು ರಜೆ ಇರುವ ಕಾರಣ ಇಂದು(ಗುರುವಾರ) ಅವರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನದ ಬಳಿಕ ನಿಮಗೆ ಮಾಹಿತಿ ನೀಡಲಾಗುವುದು ಎಂದು ಮನವೊಲಿಸಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ವಾಪಾಸ್ ತಗೆದುಕೊಂಡ್ರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!