May 17, 2024

MALNAD TV

HEART OF COFFEE CITY

ಮಾ.7ರಿಂದ ಸಿಪಿಎಲ್ ಕ್ರಿಕೆಟ್ ಪಂದ್ಯಾವಳಿ

1 min read

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‍ಚಂದ್ರಬೋಸ್ ಜಿಲ್ಲಾ ಆಟದ ಮೈದಾನಲ್ಲಿ ಮಾ.7ರಿಂದ 13ವರೆಗೆ ಚಿಕ್ಕಮಗಳೂರು ಪ್ರೀಮಿಯರ್‍ಲೀಗ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಲೀಗ್ ಸದಸ್ಯ ನಟರಾಜ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ, ದಾನಿ ಗೌರಮ್ಮಬಸವೇಗೌಡ ಸ್ಮರಣಾರ್ಥ ಲೆದರ್‍ಬಾಲ್ ಟಿ-20 ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು, ಇದು 5ನೇ ವರ್ಷದ್ದಾಗಿದೆ. ಒಟ್ಟು 5 ತಂಡಗಳು ಭಾಗವಹಿಸುತ್ತಿದ್ದು, ಒಂದು ತಂಡದಲ್ಲಿ 7 ಸ್ಥಳೀಯ ಆಟಗಾರರು, 4 ಮಂದಿ ಶಿವಮೊಗ್ಗ, ಹಾಸನ ಜಿಲ್ಲೆಯವರಾಗಿರುತ್ತಾರೆಂದರು.

ತಂಡದ ಮಾಲೀಕರು ಅಂಕಗಳ ಆಧಾರದ ಮೇಲೆ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಒಟ್ಟು 195 ಆಟಗಾರರಿದ್ದು, ಅವರುಗಳಿಗೆ ಊಟ,ವಸತಿ, ಡ್ರಸ್‍ಗಳ ವ್ಯವಸ್ಥೆಯನ್ನೆ ಮಾಲೀಕರುಗಳೇ ಮಾಡುತ್ತಾರೆ.ಭರತ್‍ಕುಮಾರ್, ಹಫೀಜ್, ವೆಂಕಟೇಶ್, ಅರುಣ್ ಸಿ.ಸೂರ್ಯ, ರುದ್ರಪ್ಪ ತಂಡದ ಮಾಲೀಕರುಗಳು ಎಂದರು.
ಪ್ರತಿಯೊಂದು ತಂಡವು ನಾಲ್ಕು ತಂಡಗಳೊಂದಿಗೆ ಸೆಣಸಲಿವೆ. ಬೆಳಿಗ್ಗೆ ಒಂದು ತಂಡ ಆಟವಾಡಿದರೆ, ಮಧ್ಯಾಹ್ನ ಮತ್ತೊಂದು ತಂಡ ಆಡುತ್ತದೆ. ಕ್ರೀಡಾಂಗಣ ಸಮೀಪದಲ್ಲೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕಚೇರಿಗಳು ಇರುವುದರಿಂದ ಅಧಿಕಾರಿ ಮತ್ತು ನೌಕರರ ಕೆಲಸಕ್ಕೆ ತೊಂದರೆ ಉಂಟಾಗದಂತೆ ಡಿಜಿಟಲ್ ಸ್ಕೋರ್ ಬೋರ್ಡ್ ಅಳವಡಿಸಲಾಗುತ್ತಿದೆ.ಅಗತ್ಯವಿದ್ದಲ್ಲಿ ಮಾತ್ರ ಧ್ವನಿವರ್ಧಕ ಬಳಸಲಾಗುವುದು ಎಂದು ಹೇಳಿದರು.

ಅಕ್ಷಯ ಬ್ಲಾಸ್ಟರ್ಸ್ ಚಿಕ್ಕಮಗಳೂರು, ಅಲ್-ರೆಹಮಾನ್‍ವಾರಿಯರ್ಸ್, ಮಲ್ನಾಡ್ ಗ್ಲಾಡಿಯೇಟರ್ಸ್, ಮಲ್ನಾಡ್ ರೇಂಜರ್ಸ್, ದಿ ಕ್ರಿಕೆಟ್‍ಪ್ಲೇಬುಕ್ ತಂಡಗಳಾಗಿವೆ. ಮಾ. 4ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಪಂದ್ಯಾವಳಿ ನಡೆಯುತ್ತಿದ್ದು, ಮಾ.13ರಂದು ಸಂಜೆ 4.30ಕ್ಕೆ ಬಹುಮಾನ ವಿತರಣೆ ಸಮಾರಂಭ ನಡೆಯುತ್ತಿದ್ದು, ಎ.ಬಿ.ಸುದರ್ಶನ್, ಶಾಸಕ ಸಿ.ಟಿ.ರವಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್ ಪಾಲ್ಗೊಳ್ಳುವರು ಎಂದರು.
ಪ್ರಥಮ ಬಹುಮಾನ 1ಲಕ್ಷ ರೂ.ನಗದು ಟ್ರೋಫಿ. ರನ್ನರ್ಸ್‍ಗೆ 50ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಇದು ಲೀಗ್ ಕಂ ನಾಕೌಟ್ ಪಂದ್ಯಾವಳಿಯಾಗಿದೆ. ರಂಜನ್ ಅಜಿತ್‍ಕುಮಾರ್, ಸಿರಿಕೆಫೆ, ಟಿ.ರಾಜಶೇಖರ್, ಶಿವಕುಮಾರ್ ಅವರುಗಳು ಪ್ರಾಯೋಜಕರಾಗಿದ್ದಾರೆಂದರು.
ಶಿವಮೊಗ್ಗ ವಲಯತಂಡದ ಚಿಕ್ಕಮಗಳೂರು ಸಂಚಾಲಕ ಜಿ.ಕೆ.ಹರೀಶ್, ತರಬೇತುದಾರ ಶಂಕರ್, ಸಿಪಿಎಲ್‍ನ ಸದಸ್ಯರಾದ ಸಂತೋಷ್, ಶರತ್, ಸಂಜಯ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!