May 18, 2024

MALNAD TV

HEART OF COFFEE CITY

ಚಕ್ರವರ್ತಿ ಸೂಲಿಬೆಲೆ ಭಾಷಣ ವೇಳೆ ಪ್ರತಿಭಟನಾ ಬ್ಯಾನರ್ : ರಣಾಂಗಣವಾದ ವಿಜಯಪುರ

1 min read

ಚಕ್ರವರ್ತಿ ಸೂಲಿಬೆಲೆ ಭಾಷಣ ವೇಳೆ ಪ್ರತಿಭಟನಾರ್ಥವಾಗಿ ಬ್ಯಾನರ್ ಕಟ್ಟಲು ಬಂದ ಇಬ್ಬರು ಕಿಡಿಗೇಡಿಗಳ ಕೃತ್ಯದಿಂದ ಇಡೀ ವಿಜಯಪುರ ಗಣಪತಿ ಪೆಂಡಾಲ್ ಆವರಣ ಇಂದು ಸಂಜೆ ರಣಾಂಗಣವಾಗಿತ್ತು.

ಚಕ್ರವರ್ತಿ ಸೂಲಿಬೆಲೆ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಷಣಕ್ಕೆ ವಿರೋಧಿಸಿ ಬ್ಯಾನರ್ ಕಟ್ಟಲು ಆಗಮಿಸಿದ ಇಬ್ಬರು ಕಿಡಿಗೇಡಿಗಳು ನಗರದ ವಿಜಯಪುರ ಗಣಪತಿ ಪೆಂಡಾಲ್ ಆವರಣವನ್ನು ಒಂದು ಗಂಟೆ ಕಾಲ ಟೆನ್ಷನ್ ಮನೆ ಮಾಡಿತ್ತು. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಇಡೀ ಕಟ್ಟಡ ಸುತ್ತುವರಿದು ಕೂಗಾಟ ಆರಂಭಿಸಿದರು. ಬ್ಯಾನರ್ ಕಟ್ಟಿದ ಇಬ್ಬರು ತಪ್ಪಿಸಿಕೊಳ್ಳಲಾಗದೆ ಕಟ್ಟಡದ ಮೇಲ್ಛಾವಣಿ ಹತ್ತಿದರು ಇದನ್ನು ಖಂಡಿಸಿ ಕೆಲವರು ಕಲ್ಲು ತೂರಟ ಸಹಾ ನಡೆಸಿದರು. ಬ್ಯಾನರ್ ಕಟ್ಟಿದವರನ್ನು ನಮ್ಮ ವಶಕ್ಕೆ ಕೊಡಿ ಎಂದು ಬಿಜೆಪಿ ಸಂಘ ಪರಿವಾರ ಕಾರ್ಯಕರ್ತರು ಒತ್ತಾಯಿಸಿದರು.
ಸ್ಥಳದಲ್ಲಿದ್ದ ಮಾಜಿ ಶಾಸಕ ಸಿ.ಟಿ ರವಿ ಕಿಡಿಗೇಡಿಗಳು ಅಡಗಿ ಕುಳಿತಿದ್ದ ಕಟ್ಟಡ ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ ಇದಕ್ಕೆ ಕುಪಿತರಾದ ರವಿ ಪೊಲೀಸರಿಗೆ ನೀವು ಅವರ ಬೆಂಬಲಕ್ಕೆ ನಿಂತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ಚಕ್ರವರ್ತಿ ಸೂಲಿಬೆಲೆ ಭಾಷಣ ಆರಂಭಿಸಿದರು, ಪೊಲೀಸರು ಕಟ್ಟಡದ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಇದಕ್ಕೂ ಮೊದಲು ಸೂಲಿಬೆಲೆ ಭಾಷಣಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ , ರಾಹಿಲ್ ಸೇರಿದಂತೆ ಹತ್ತಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ವಿಷಯ ತಿಳಿದಿದ್ದ ಪೊಲೀಸರು ನೂರಾರು ಪೊಲೀಸರನ್ನು ನಿಯೋಜಿಸಿದ್ದರು. ಸ್ಥಳದಲ್ಲಿ ಎಸ್ಪಿ ವಿಕ್ರಮ್ ಅಮಟೆ ಖುದ್ದು ಮೊಕ್ಕಾಂ ಹೂಡಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!