May 2, 2024

MALNAD TV

HEART OF COFFEE CITY

ಜನಹಿತ ಮತ್ತು ಮಾಧ್ಯಮ ಒಂದು ನಾಣ್ಯದ ಎರಡು ಮುಖಗಳು

1 min read

ಮಾಧ್ಯಮ ಜನ ಹಿತ ವಿಷಯದ ಬಗ್ಗೆ ಮಾತನಾಡಿದ ಪತ್ರಕರ್ತರಾದ ಕಂ.ಕ ಮೂರ್ತಿ ಅವರು, ಜನಹಿತ ಮತ್ತು ಮಾಧ್ಯಮ ಒಂದು ನಾಣ್ಯದ ಎರಡು ಮುಖಗಳು. ಸಂವಿಧಾನದ ಆಶಯಗಳನ್ನು ಬೇರೆ ಬೇರೆ ಸ್ತರಗಳಲ್ಲಿ ಜಾರಿ ಮಾಡುವುದೇ ಜನಹಿತ. ಪತ್ರಕರ್ತ ನಿತ್ಯದ ಸಂಘರ್ಷವನ್ನು ಎದುರಿಸುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾನೆ. ನಾಡಿನ ಪತ್ರಿಕೆಗಳು ನೆಲ ಭಾಷೆಯ ಸಂರಕ್ಷಣೆಗೆ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿವೆ. ಜಲವಿವಾದ ಮತ್ತು ಭಾಷಾ ವಿವಾದದ ಸಂದರ್ಭದಲ್ಲಿ ದ್ವನಿ ಎತ್ತುವ ಕಾರ್ಯವನ್ನು ಮಾಧ್ಯಮಗಳು ಮಾಡಿವೆ. ಅಸಮಾನತೆ ಸಮಾಜದಲ್ಲಿ ಜೀವಂತವಾಗಿರುವರೆಗೂ ಪತ್ರಕರ್ತ ಸಮಾಜ ಮತ್ತು ಜನರ ಪರವಾಗಿರಬೇಕು. ನಿತ್ಯವ್ಯವಸ್ಥೆಯ ಜೊತೆಗಿನ ಮತ್ತು ಸುದ್ದಿಮನೆಗಳಲ್ಲಿ ಆರೋಗ್ಯಪೂರ್ಣವಾದ ಸಂಘರ್ಷಗಳು ಈಗ ಇವೆ ಎಂದರು.

ಪತ್ರಕರ್ತನಾದವನೂ ನಿರಂತರವಾಗಿ ಓದುವ ಮೂಲಕ ತನ್ನ ಒಳಗನ್ನು ವಿಸ್ತಾರಗೊಳಿಸುವ ಅಗತ್ಯವಿದೆ. ಸಾಮಾಜಿಕ ಸಂಘರ್ಷಗಳನ್ನು ರಾಜಕೀಯ ಸಂಘರ್ಷಗಳನ್ನು ಕಂಡದನ್ನು ಕೇಳಿದನ್ನು ನೋಡಿದನ್ನು ವಿಶ್ಲೇಷಣೆ ಮಾಡಿ ಜನರ ಮುಂದಿಡಬೇಕು ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪತ್ರಕರ್ತರಾದ ಆರಗ ರವಿ ಮಾತನಾಡಿ, ಪತ್ರಿಕೆಗಳು ಸಾಹಿತ್ಯವನ್ನು ಬೆಳೆಸಲು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯದ 150ನೇ ಸ್ಥಾನದಲ್ಲಿದೆ. ಪತ್ರಕರ್ತನಾದವನು ತನ್ನ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸುವ ಅಗತ್ಯವಿದೆ. ಎಲ್ಲಾ ಕ್ಷೇತ್ರದಲ್ಲಿ ಆಗಿರುವ ವ್ಯತ್ಯಾಸಗಳು ಮಾಧ್ಯಮ ಕ್ಷೇತ್ರದಲ್ಲಿಯೂ ಆಗಿದೆ. ಅದನ್ನು ಸರಿಪಡಿಸುವ ಅವಕಾಶವೂ ಇದೆ. ತಾಂತ್ರಿಕವಾಗಿಯೂ ಕೂಡ ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಗಳಾಗಿವೆ. ಜನರು ಹೆಚ್ಚಾಗಿ ಹಿಂಸೆ ಹಾಗೂ ಅತಿರಂಜಿತ ವಸ್ತುವಿಷಯಗಳಿರುವ ಸುದ್ದಿಗಳನ್ನೆ ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ. ಆ ಕಾರಣಕ್ಕಾಗಿಯೃ ದೃಶ್ಯಮಾದ್ಯಮಗಳು ಅಂತಹ ಸುದ್ದಿಗಳನ್ನೆ ಬಿತ್ತರಿಸುತ್ತವೆ. ಜನರು ಒಳ್ಳೆಯ ವಸ್ತು ವಿಷಯಗಳ ಸುದ್ದಿಗಳನ್ನು ನೋಡತೋಡಗಿದರೆ ಸಹಜವಾಗಿಯೇ ದೃಶ್ಯಮಾಧ್ಯಮಗಳು ಅಂತಹ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತವೆ ಎಂದರು.

ಪ್ರವೇಶ ನುಡಿಗಳನಾಡಿದ ಪತ್ರಕರ್ತರಾದ ರವಿ ಕೆಳಂಗಡಿ ಅವರು, ಮಾಧ್ಯಮ ಹಿಂದಿನಿಂದ ಕೂಡ ಸೇವಾ ಕ್ಷೇತ್ರ. ಆದರೆ ಈಗ ಕೇವಲ ಸೇವಾ ಕ್ಷೇತ್ರವಾಗಿ ಉಳಿದಿಲ್ಲ. ಒತ್ತಡದ ನಡುವೆ ಕೂಡ ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಇದು ಪತ್ರಕರ್ತರಿಗೆ ಸಂತೋಷ ನೀಡುವಂತಹ ವಿಶೇಷ. ಅತಿವೃಷ್ಠಿಯಲ್ಲಿ ನೆಲೆ ಕಳೆದುಕೊಂಡ ನೆರೆ ಸಂತ್ರಸ್ತರು ಇನ್ನೂ ಬದುಕು ಕಟ್ಟಿಕೊಂಡಿಲ್ಲ.  ಹಲವಾರು ಸಮಸ್ಯೆಗಳು ಜೀವಂತವಾಗಿದ್ದು ಈ ಭಾಗದ ಪತ್ರಿಕೆಗಳು ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಜಾಗೃತ ಯುವ ಸಮುದಾಯದ ಧ್ವನಿಯಾಗಿ, ಶೋಷಿತ ವರ್ಗದ ಧ್ವನಿಯಾಗಿ ಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿದೆ. ಆತ್ಮಾಭಿಮಾನದಿಂದ ಕರ್ತವ್ಯ ನಿರ್ವಹಿಸುತ್ತಾ ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!