May 9, 2024

MALNAD TV

HEART OF COFFEE CITY

ಯುವಶಕ್ತಿ ಸರಿದಾರಿಯಲ್ಲಿ ನಡೆದರೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ

1 min read

ಭಾರತದ ಶಕ್ತಿ ಸೋರಿ ಹೋಗದ ರೀತಿಯಲ್ಲಿ ನಾವು ನಡೆಯಬೇಕಿದೆ.ಯುವ ಶಕ್ತಿ ದಾರಿ ತಪ್ಪಿ ನಡೆಯದೇ ಉತ್ತಮ ಸಮಾಜ ನಿರ್ಮಾಣ ಮಾಡಬೇಕು.ಇದೆ ನಾವು ದೇಶಕ್ಕೆ ಕೊಡುವ ಯುವ ಶಕ್ತಿಯಾಗಿದೆ ಎಂದು ಕು.ತನ್ಮಯಿ ಪ್ರೇಂ ಕುಮಾರ್ ಹೇಳಿದರು.
ಅವರು ಯುವ ಪ್ರೇರಣೆ ಗೋಷ್ಠಿಯಲ್ಲಿ ಮಾತನಾಡಿದರು. ಯುವ ಶಕ್ತಿಗೆ ದೇಶವು ಪ್ರೋತ್ಸಾಹ ನೀಡಬೇಕಿದೆ ಗಾಂಜಾ ಮತ್ತಿತರ ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೇ ಯುವಕರು ದೇಶಕ್ಕೆ ಯುವ ಶಕ್ತಿಯಾಗಿ ಬೆಳೆಯಬೇಕಿದೆ ಎಂದರು. ಪ್ರಶಾಂತ್ ಹೆಚ್.ಆರ್ ಮಾತನಾಡಿ’ ದೇಶದ ಸಂಸೃತಿ ಧೀಮಂತ ಸಂಸೃತಿಯಾಗಿದೆ. ಸಂಸ್ಖೃತಿ ಕಾಪಾಡಬೇಕಾದರೆ ನಾವು ಆಧುನಿಕತೆಯಿಂದ ಸ್ವಲ್ಪ ಹೊರಗೆ ಬಂದು ಮಲೆನಾಡಿನ ಸಂಸ್ಕೃತಿ ನಾವು ಅಳವಡಿಸಬೇಕಿದೆ. ಮಲೆನಾಡಿನ ಆಹಾರ ಪದ್ದತಿಗಳು ದೂರವಾಗಿದೆ.ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಯುವ ಪೀಳಿಗೆ ಸಮಾಜದಲ್ಲಿ ಬದಲಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ನಂದೀಶ್ ಬಂಕೇನಹಳ್ಳಿ ಮಾತನಾಡಿ ‘ ಸಂಸ್ಕೃತಿ ತಲೆಮಾರಿನಿಂದ ದಾಟಿ ಬಂದಿದೆ. ಆಧುನೀಕತೆಯಿಂದ ಸಂಸ್ಕೃತಿ ಬದಲಾಗುತ್ತಿದೆ.ನಾಟಿ ಭತ್ತದ ಕೃಷಿ ಸಮಯದಲ್ಲಿ ಪದಗಳು ಇದ್ದವು.ಈಗ ಆಧುನೀಕತೆಯಿಂದ ತಾಂತ್ರಿಕತೆಯಿಂದ ನಡೆಯುತ್ತದೆ. ಸುಗ್ಗಿ ಸಮಯದಲ್ಲಿ ವಿವಿಧ ಆಚರಣೆಗಳು ಇದ್ದವು. ಆದರೆ ಈಗ ಬದಲಾಗಿದೆ.ಈಗ ಮಲೆನಾಡಿನ ಮನೆಗಳು ಹೋಂಸ್ಟೆಗಳಾಗಿ ಬದಲಾಗಿವೆ.ಸಂಸ್ಕಾರ ಬದಲಾಗಿ ಸಂಸ್ಕೃತಿ ಬದಲಾಗಿದೆ.ಸಾಹಿತ್ಯ ಓದುವ ಮೂಲಕ ಸಂಸ್ಕೃತಿ ಬೆಳೆಸುವ ಅಗತ್ಯವಿದೆ. ಯುವಕರು ಕುವೆಂಪು ಅವರ ಆದರ್ಶದಲ್ಲಿ ಅವರ ಪುಸ್ತಕ ಓದುವ ಮೂಲಕ ಬದಲಾಗಬೇಕಿದೆ.ಸಾಹಿತ್ಯ ಹೆಚ್ಚು ಮಾನವೀಯರಂತೆ ಮಾಡಲಿಎಂದರು. ಈ ಸಂದರ್ಭದಲ್ಲಿ ಟಿ.ಸಿ ದರ್ಶನ್, ರಜಿತ್ ಕೆಳಗೂರ್, ಹೆಚ್.ಕೆ ಮಯೂರ್, ಅಮಿತಾ ಹೆಬ್ಬಾರ್, ಎಸ್.ಚರಣ್ ಭಂಡಾರಿ, ಬಿ.ಕೆ ಮಹೇಶ್ ಇದ್ದರು. ಜಾನಪದ ಸಂಭ್ರಮ ಗೋಷ್ಠಿ ಜಾನಪದ ಜೀವನದೃಷ್ಠಿ ವಿಷಯದ ಬಗ್ಗೆ ಡಾ.ಹೆಚ್.ಎಲ್ ಮಲ್ಲೇಶಗೌಡ ಮಾತನಾಡಿ, ಹಳ್ಳಿಗಳು ಮಿನಿ ಪಟ್ಟಣಗಳಾಗಿವೆ. ಜಾನಪದವನ್ನು ಕಣ್ಣಾರೆ ಕಾಣಲು ಸಾಧ್ಯವಿಲ್ಲ. ಕಿವಿಯಲ್ಲಿ ಕೇಳಬಹುದಷ್ಟೆ.. ಶುದ್ದ ಸತ್ವಯುತ ಜಾನಪದ ಇಂದು ಕಣ್ಮರೆಯಾಗಿದೆ. ಪೂರ್ವಿಕರಿಗೆ ಇದ್ದ ಮೇದಾವಿತನ, ಜ್ಞಾನ ಅಪಾರವಾದದ್ದು. ಇದ್ದುದ್ದರಲ್ಲಿ ಆನಂದ ಪಡಬೇಕು ಎಂಬ ಅರಿವು ಜನಪದರಲ್ಲಿತ್ತು. ಭೂಮಿಯನ್ನು ದೇವರೆಂದುಕೊAಡು ಭೂಮಿಯಿಂದ ಬಂದುದ್ದರಲ್ಲಿ ತೃಪ್ತಿಪಟ್ಟುಕೊಳ್ಳುತ್ತಿದ್ದರು. ಸುಖದುಃಖವನ್ನು ಸಮನಾಗಿ ಕಂಡ ಜನಪದರು ಎರಡನ್ನು ಸಮನಾಗಿ ಸ್ವೀಕರಿಸಿದರು. ಈಗ ಸುಖದ ಹಿಂದೆ ಹೋಗುವುದು ಹೆಚ್ಚಿದೆ. ಶ್ರಮದ ಹಿಂದೆ ಹೋಗುವುದಿಲ್ಲ. ದುಡಿಮೆ ಇಲ್ಲದೆ ಸಂಪಾದನೆ ಮಾಡುವತ್ತ ಇಂದಿನ ಜನರ ಯೋಚನೆಗಳು ಸಾಗಿವೆ. ನೂರಾರು ಜಾಗತೀಕ ಮೌಲ್ಯಗಳು ಜಾನಪದದಲ್ಲಿವೆ. ಅಂತಹ ಮೌಲ್ಯಯುತ ಜಾನಪದವನ್ನು ಹೆಕ್ಕಿ ತೆಗೆಯಬೇಕಿದೆ ಎಂದರು. ಸಮನ್ವಯ ಗೋಷ್ಠಿಯಲ್ಲಿ ನಿವೃತ್ತ ಯೋಧರಾದ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ಕಾರ್ಗೀಲ್ ಯುದ್ದದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದೇಶದ ಮೇಲೆ ಆಕ್ರಮಣವಾದಾಗಲೆಲ್ಲಾ ಯೋಧರು ಜೀವದ ಹಂಗನ್ನು ತೊರೆದು ಹೋರಾಡಿದ್ದಾರೆ. ಅಂತಹ ವೀರಯೋಧರನ್ನು ಸ್ಮರಿಸುವ ಕಾರ್ಯವಾಗಬೇಕಿದೆ ಎಂದರು. . ಅಧ್ಯಕ್ಷತೆಯನ್ನು ಬಿ.ಎಲ್.ರಾಮದಾಸ್ ವಹಿಸಿದ್ದರು.  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡಲಿಲ್ಲ

ಜಾನಪದ ಸಂಭ್ರಮ ಗೋಷ್ಠಿಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ ಜಾನಪದ ಕಲಾವಿದೆ ಲಕ್ಷಿö್ಮ ದೇವಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ವಿಧಾನಸಭೆಗೆ ಕರೆದುಕೊಂಡು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಕೇಂದ್ರ ಸರ್ಕಾರ ಲಕ್ಷ್ಮೀ ದೇವಮ್ಮ ಅವರ ಕಲೆಯನ್ನು ಗುರುತಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಕೊಡುವ ಸಂಗಿತ ನಾಟಕ ಪ್ರಶಸ್ತಿಯನ್ನು ನೀಡಿದೆ. ರಾಜ್ಯ ಗುರುತಿಸದ ಕಲಾವಿದೆಯನ್ನು ಕೇಂದ್ರ ಗುರುತಿಸಿದೆ ಎಂದರು. ಗೋಷ್ಠಿಯಲ್ಲಿ ಇಮ್ರಾನ್ ಬೇಗ್ ಆಶಯ ನುಡಿಗಳನ್ನಾಡಿದರು.  ಊಟ ಬಡಿಸಿದ ಶಾಸಕರು

ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಮಧ್ಯಾಹ್ನ ಅನ್ನ, ಸಾಂಬಾರ್, ಮಜ್ಜಿಗೆ, ಪಲ್ಯ, ಬಾಳೆಕಾಯಿ ಚಿಪ್ಸ್, ಕೊಬ್ಬರಿ ಮಿಠಾಯಿಯ ಊಟವನ್ನು ಸಾಹಿತ್ಯಾಭಿಮಾನಿಗಳು ಸವಿದರು. ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಅವರು ತಾವು ಕೂಡ ಊಟ ಬಡಿಸಿದ್ದು ವಿಶೇಷವಾಗಿತ್ತು. ಊಟ ವೇಸ್ಟ್ ಮಾಡಬೇಡಿ. ಊಟದ ಹಾಲ್‌ನ ಹೊರಭಾಗದಲ್ಲಿ ಊಟ ಮಾಡಿದ ತಟ್ಟೆಗಳನ್ನು ಹಾಕುವ ಸ್ಥಳದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕೌಟ್ ಮತ್ತು ಗೈಡ್‌ನ ವಿದ್ಯಾರ್ಥಿಗಳು ತಟ್ಟೆಯಲ್ಲಿ ಆಹಾರವನ್ನು ಉಳಿಸಿ ವೇಸ್ಟ್ ಮಾಡದಂತೆ ಸೂಚಿಸುತ್ತಿದ್ದದ್ದು ಕಂಡು ಬಂತು. ತಟ್ಟೆಯಲ್ಲಿ ಅನ್ನ ಉಳಿಸಿ ಎಸೆಯಲು ಬಂದವರಿಗೆ ಎಸೆಯದಂತೆ ಮನವರಿಕೆ ಮಾಡಿದದ್ದು ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್, ವಿಜಯವಾಣಿ ವರದಿಗಾರ ಸುದೀಶ್ ಸುವರ್ಣ ಮುಂತಾದವರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!