May 17, 2024

MALNAD TV

HEART OF COFFEE CITY

ಆಕ್ಸಿಜನ್ ಇಲ್ಲದ 30 ಅಡಿ ಆಳದ ಬಾವಿಗೆ ಫ್ಯಾನ್ ಹಾಕಿಕೊಂಡು ಇಳಿದು ಬೆಕ್ಕನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

1 min read

 

ಚಿಕ್ಕಮಗಳೂರು. ಓಡುವಾಗ ಆಯಾ ತಪ್ಪಿ ಸುಮಾರು 30 ಆಳದ ಕಂದಕಕ್ಕೆ ಬಿದ್ದ ಪುಟ್ಟ ಬೆಕ್ಕೊಂದನ್ನ ಅಗ್ನಿಶಾಮಕ ಸಿಬ್ಬಂದಿಗಳು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನ ರಕ್ಷಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಎಂ.ಜಿ.ರಸ್ತೆ ಬ್ಯೂಟೆಕ್ ಫ್ಯಾನ್ಸಿ ಸ್ಟೋರ್ ಹಿಂಭಾಗದ ರಸ್ತೆಯಲ್ಲಿ ಓಡುವಾಗ ಬೆಕ್ಕೊಂದು ಬಾವಿಗೆ ಬಿದ್ದಿದೆ. ಬಾವಿಗೆ ಗ್ರಿಲ್ ಹಾಕು ಮುಚ್ಚಿದ್ದರೂ ಕೂಡ ಬೆಕ್ಕು ಆಯಾ ತಪ್ಪಿ ಸುಮಾರು 30 ಅಡಿಗೂ ಹೆಚ್ಚು ಆಳದ ಬಾವಿಗೆ ಬಿದ್ದಿತ್ತು. ನೀರು ಇದ್ದ ಇದ್ದ ಕಾರಣ ಬೆಕ್ಕಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಬಾವಿಯಲ್ಲಿ ಒಂದೇ ಸಮನೆ ಕೂಗುತ್ತಿತ್ತು. ಇದನ್ನ ಗಮನಿಸಿದ ಸ್ಥಳಿಯರು ಬೆಕ್ಕನ್ನ ಮೇಲೆ ತರಲು ಪ್ರಯತ್ನಿಸಿದ್ದಾರೆ. ಆದರೆ, ಆಗಿಲ್ಲ. ಸ್ಥಳಿಯರು ಗೂಗಲ್‍ನಲ್ಲಿ ಕೂಡ ಬೆಕ್ಕನ್ನ ಹೇಗೆ ರಕ್ಷಿಸುವುದು ಎಂದು ಹುಡುಕಾಡಿದ್ದಾರೆ. ಆದರೆ, ಅಲ್ಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಬಳಿಕ ತಕ್ಷಣ ಪ್ರಾಣಿ ದಯಾ ಸಂಘದ ಸದಸ್ಯರಿಗೆ ಕರೆ ಮಾಡಿದ್ದಾರೆ. ಅವರು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ ಬೆಕ್ಕು ಕೂಗುತ್ತಿತ್ತು. ಬೆಕ್ಕಿನ ಅರ್ಧ ಭಾಗ ನೀರಿನಲ್ಲಿ. ಇನ್ನರ್ಧ ಭಾಗ ಮೇಲೆ ನೋಡುತ್ತಿತ್ತು. ಬಾವಿಯೊಳಗಿದ್ದ ಕಲ್ಲಿನ ಮೇಲೆ ಕಾಲು ಇಟ್ಟುಕೊಂಡು ಬದುಕಲು ಹೋರಾಡುತ್ತಿತ್ತು. ಆಗ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಆಕ್ಸಿಜನ್ ಕೂಡ ಇಲ್ಲದ ಸುಮಾರು 30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನ ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಸವರಾಜ್ ಹಿರೇಮಠ್ ಎಂಬುವರು ಸೊಂಟಕ್ಕೆ ಹಗ್ಗವನ್ನ ಕಟ್ಟಿಕೊಂಡು ಕೆಳಕ್ಕೆ ಇಳಿದಿದ್ದಾರೆ. ಪುಟ್ಟಿಗೆ ಮತ್ತೊಂದು ಹಗ್ಗ ಕಟ್ಟಿ ಅದನ್ನ ಬೆಕ್ಕಿಗಾಗಿ ಬಾವಿಗೆ ಬಿಟ್ಟಿದ್ದಾರೆ. ಸಿಬ್ಬಂದಿ ಬಾವಿಯೊಳಗೆ ಇಳಿದು ಬೆಕ್ಕನ್ನ ಮತ್ತೊಂದು ಪುಟ್ಟಿಯಲ್ಲಿ ಮೇಲೆ ಕಳಿಸಿದ್ದಾರೆ. 30 ಅಡಿ ಆಳದ ಬಾವಿಯಲ್ಲಿ ಆಕ್ಸಿಜನ್ ಕೂಡ ಸರಿಯಾಗಿ ಇರಲಿಲ್ಲ. ಆಗ ಬಾವಿಯ ಮೇಲ್ಭಾಗ ಇದ್ದ ಅಗ್ನಿಶಾಮಕದ ಇತರೆ ಸಿಬ್ಬಂದಿಗಳು ಐದು ನಿಮಿಷಕ್ಕೊಮ್ಮೆ ಬಾವಿಯಳಕ್ಕೆ ವೇಗವಾಗಿ ಫ್ಯಾನ್ ಬಿಡುತ್ತಿದ್ದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸೋಮಶೇಖರ್, ಉಮೇಶ್, ಮಂಜುನಾಥ್, ರವಿಚಂದ್ರ ಪಾಲ್ಗೊಂಡಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!