May 10, 2024

MALNAD TV

HEART OF COFFEE CITY

ಓಟಿಪಿ ಬರದೆ ಓಟಿಲ್ಲ, ಚುನಾವಣೆ ಬಹಿಷ್ಕರಿಸಿದ್ದ ಕಾಫಿನಾಡ ಕುಗ್ರಾಮಕ್ಕೆ ಓಟಿಪಿ ಬರಲೇ ಇಲ್ಲ…..!

1 min read

 

ಚಿಕ್ಕಮಗಳೂರು. ಓಟಿಪಿ ಬರದೆ ಓಟಿಲ್ಲ. ಮೊಬೈಲ್‍ಗೆ ಓಟಿಪಿ ಬರೋವರೆಗೂ ಮತ ಹಾಕಲ್ಲ ಅಂತ ಕಳೆದ ವಿಧಾನಸಭಾ ಚುನಾವಣೆಯನ್ನ ಬಹಿಷ್ಕರಿಸಿದ್ದ ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಕುಗ್ರಾಮ ಬಲಿಗೆ ಗ್ರಾಮಕ್ಕೆ ಕೊನೆಗೂ ಓಟಿಪಿ ಬಂದೇ ಇಲ್ಲ. ಕಳಸ ತಾಲೂಕಿನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಬಲಿಗೆ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ. ಬಲಿಗೆ ಗ್ರಾಮದ ಸುತ್ತಮುತ್ತ ನಾಲ್ಕೈದು ಹಳ್ಳಿಗಳು ಇವೆ. ಇಲ್ಲಿನ ಜನ ಮೊಬೈಲ್‍ನಲ್ಲಿ ಒಂದು ಫೋನ್ ಮಾಡಲು ಬಲಿಗೆ ಗ್ರಾಮದಿಂದ ಸುಮಾರು 4 ಕಿ.ಮೀ. ದೂರಕ್ಕೆ ಬಂದು ನೆಟ್ವರ್ಕ್ ಸಿಗುವ ಒಂದು ಮರದ ಬಳಿ ಬಂದ ಫೋನಿನಲ್ಲಿ ಮಾತನಾಡಬೇಕು. ಇಂತಹಾ ಪರಿಸ್ಥಿತಿಯಲ್ಲಿ ಸ್ಥಳಿಯರು ಮೊಬೈಲ್ ಟವರ್‍ಗಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದ ಕಾರಣ ಸ್ಥಳಿಯರು ಕಳೆದ ವಿಧಾನಸಭಾ ಚುನಾವಣೆಯನ್ನ ಬಹಿಷ್ಕರಿಸಿ ಓಟಿಪಿ ಬರೋವರೆಗೂ ಓಟಿಲ್ಲ ಎಂದು ಅಭಿಯಾನ ಆರಂಭಿಸಿ ಚುನಾವಣೆ ಬಹಿಷ್ಕರಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಚುನಾವಣೆ ಮುಗಿಯುತ್ತಿದ್ದಂತೆ ಟವರ್ ನಿರ್ಮಿಸಿಕೊಡೋ ಭರವಸೆ ನೀಡಿದ್ದರು. ಆದರೆ, ಎಲೆಕ್ಷನ್ ಮುಗಿದು, ಸಮೃದ್ಧ ಅಧಿಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಬಲಿಗೆ ಗ್ರಾಮಕ್ಕೆ ಟವರ್ ಬಂದಿಲ್ಲ. ಹಳ್ಳಿಗರ ಮೊಬೈಲ್‍ಗೆ ಓಟಿಪಿ ಬಂದಿಲ್ಲ. ಬಲಿಗೆ ಗ್ರಾಮ ನಕ್ಸಲ್‍ಬಾಧಿತ ಪ್ರದೇಶ. ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‍ಕೌಂಟರ್ ಆಗಿದ್ದು ಇದೇ ಬಲಿಗೆ ಗ್ರಾಮದಲ್ಲಿ. ಈ ಗ್ರಾಮಕ್ಕೆ

 

 

 

ಬಿ.ಎಸ್.ಎನ್.ಎಲ್. ನವರು ಟವರ್ ಹಾಕಿಕೊಡಲು ಸಿದ್ಧರಿದ್ದಾರೆ. ಅದಕ್ಕೆ ಬೇಕಾಗಿರೋದು ಎರಡೇ ಎರಡು ಗುಂಟೆ ಜಾಗವಷ್ಟೆ. ಸಾವಿರಾರು ಎಕರೆ ಅರಣ್ಯ ನೂರಾರು ಎಕರೆ ಕಂದಾಯ ಭೂಮಿ ಇದ್ದರು ಇವರಿಗೆ ಟವರ್ ನಿರ್ಮಾಣ ಮಾಡಲು ಎರಡು ಗುಂಟೆ ಜಾಗಕ್ಕೆ ಬರವಿದೆ. ಅಧಿಕಾರಿಗಳು 2 ಗುಂಟೆ ಜಾಗ ನೀಡಿದರೆ ಟವರ್ ತಲೆಎತ್ತುತ್ತದೆ. ಆದರೆ, ಎಲ್ಲರೂ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಸ್ಥಳಿಯರು ಅಧಿಕಾರಿಗಳನ್ನ ಭೇಟಿ ಮಾಡಿದರೆ ಇನಾಂ ಭೂಮಿ, ಕಂದಾಯ ಭೂಮಿ, ರಿಸರ್ವ್ ಫಾರೆಸ್ಟ್ ಅಂತ ಕಥೆ ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚುನಾವಣೆ ಬಹಿಷ್ಕಾರ ಹಾಕಿದಾಗ ಬಂದು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದ ಅಧಿಕಾರಿಗಳೇ ಇಂದು ನಾವು ಬಂದ ದಾರಿಗೆ ಸುಂಕ ಇಲ್ಲ ಎಂದು ಯೂಟರ್ನ್ ಹೊಡೆಯುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿರೋ ಸ್ಥಳಿಯರು ಕೂಡಲೇ ಸರ್ಕಾರ ಜಾಗ ನೀಡಿ ಟವರ್ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಹೋರಾಟ ಮಾಡೋದಕ್ಕೆ ಭಯ. ಹೋರಾಟ ಮಾಡಿದರೆ ಕೇಸ್ ಹಾಕುತ್ತಾರೆ ಎಂದು ಈ ಹಳ್ಳಿಗರಿಗೆ ಹೋರಾಟ ಮಾಡೋದಕ್ಕೂ ಭಯದ ವಾತಾವರಣ ನಿರ್ಮಾಣವಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!