May 17, 2024

MALNAD TV

HEART OF COFFEE CITY

ಧಾರ್ಮಿಕ ಸಂಸ್ಕೃತಿ ಕಡೆಗಣನೆ : ಬೋಜೇಗೌಡ ವಿಷಾಧ

1 min read

ಚಿಕ್ಕಮಗಳೂರು-ಭೂಮಿತಾಯಿ ಪರಿಸರ ಮುಂತಾದ ಸಮಾಜಮುಖಿ ಕಾರ್ಯಗಳ ಜೊತೆಗೆ ಇಂದು ನಾಡು ನುಡಿ ಸಂಸ್ಕೃತಿಯನ್ನು ಮರೆತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ವಿಷಾಧಿಸಿದರು.
ಅವರು ಇಂದು ಇಲ್ಲಿನ ಜಯನಗರ 8ನೇ ವಾರ್ಡಿನ ನಾಗರೀಕ ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ನೂತನ ಸಮಿತಿ ಉದ್ಘಾಟನೆ ಮತ್ತು ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಳಗಾಗಿ ನಾನೆದ್ದು ಯರ‍್ಯಾರ ನೆನಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮಿ ತಾಯಿ ಎಂಬ0ತೆ ನೆನೆಯಬೇಕಾಗಿದೆ. ಅರಿತು ಬಾಳಬೇಕಾಗಿದೆ ಸಂವಿಧಾನದ ಆಶÀಯದಲ್ಲಿ ಇದು ಕೂಡ ಒಂದು ಆದರೆ ಇಂದು ದೇವರ ಫೋಟೋ ನೋಡವ ಬದಲು ಮೊಬೈಲ್‌ನಲ್ಲೇ ದೇವರ ನೋಡುತ್ತಿರುಯವುದು ಸಂಸ್ಕೃತಿ, ಧಾರ್ಮಿಕತೆ ಮರೆಯಾಗುತ್ತಿದೆ ಎಂದು ಹೇಳಿದರು.
ವ್ಯವಸಾಯದ ಬಗ್ಗೆ ಮಕ್ಕಳಿಗೆ ಗೊತ್ತಿಲ್ಲ ಇದು ಲಾಭದಾಯಕ ಅಲ್ಲ ಎಂಬುದನ್ನು ಮನಗಂಡಿದ್ದಾರೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಪೂರ್ವಜರು ನಮಗೆ ಕೃಷಿ ಮೂಲಕ ನಮ್ಮನ್ನು ಸಾಕಿ ಸಲಹಿದ್ದಾರೆಂಬುದನ್ನು ಮನಗಾಣಬೇಕಾಗಿದೆ ಎಂದರು.
ಎಲ್ಲರೊಳಗೊಂದಾಗಿ ನೂತನ ಶಾಸಕರು ಜವಾಬ್ದಾರಿ ಅರಿತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕಾಗಿದೆ ಸರ್ವಜನಾಂಗದ ಶಾಂತಿ ತೋಟವನ್ನು ಕಾಪಾಡಬೇಕು ಯವ ಹೃದಯಗಳನ್ನು ಗೆಲ್ಲುವುದರೊಂದಿಗೆ ನಾಗರೀಕರ ಕೆಲಸ ಮಾಡಿ ಅವರು ನಿಮ್ಮ ಭವಿಷ್ಯ ಬರೆಯುತ್ತಾರೆ ಎಂದು ನೂತನ ಶಾಸಕರಿಗೆ ಕಿವಿ ಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಜಾತ್ಯಾತೀತ, ಪಕ್ಷಾತೀತವಾಗಿ ನನಗೆ ಮತ ನೀಡಿ ಗೆಲ್ಲಿಸಿರುವ ನಿಮಗೆ ಕೈ ಮುಗಿದು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿಂದೆ ಎಸ್.ಎಲ್ ಬೋಜೇಗೌಡರು ನಗರಸಭೆ ಅಧ್ಯಕ್ಷರಾಗಿದ್ದಾಗ ನಾಮಿನಿ ಸದಸ್ಯನಾಗಿದ್ದೆ ಈಗ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಲು ಎಸ್.ಎಲ್.ಬಿಯವರ ಸಹಕಾರ ಆಶೀರ್ವಾದದಿಂದ ಎಂದು ಸ್ಮರಿಸಿಕೊಂಡರು.
ಹಿಂದೆ ನಗರಸಭಾ ಅಧ್ಯಕ್ಷನಾಗಿದ್ದಾಗಲೂ ಸಾರ್ವಜನಿಕ ಬದುಕಿನಲ್ಲಿ ನಾನು ನನ್ನಿಂದ ನನಗಾಗಿ ಎಂಬ ಅಹಂಕಾರ ತೋರಿಸದೆ ಜನಸಾಮಾನ್ಯನಾಗಿ ಜನ ಸೇವಕನಾಗಿರಬೇಕೆಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಯಾರೊಂದಿಗೆ ಇದ್ದರೂ ಪ್ರಾಮಾಣಿಕವಾಗಿ ಅವರ ಜೊತೆ ಕೆಲಸ ಮಾಡಿದ್ದೇನೆ. ಸಿ.ಟಿ ರವಿ ಜೊತೆ 19 ವರ್ಷಗಳ ಕಾಲ ಇದ್ದರೂ ಅವರಿಗೇನು ಅನ್ಯಾಯ ಮಾಡಿಲ್ಲ ರಾಜಕಾರಣ ಹರಿಯುವ ನದಿ ಇದ್ದಂತೆ ಸರ್ವರನ್ನು ಸಮಾನವಾಗಿ ಕಂಡು ನಿಮ್ಮ ದಾಸನಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯ ಭವನಕ್ಕೆ ಮೊದಲು ನಿವೇಶನ ಗುರ್ತಿಸುವ ಕಾರ್ಯ ನಗರಸಭೆ ಸಿಡಿಎ ಯಿಂದ ಆದರೆ ಅನುದಾನ ತಂದು ಈ ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿ, ಯುಜಿಡಿ ಅಮೃತ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು.
ಕ್ಷೇತ್ರದಲ್ಲಿ ಶಾಂತಿ ಸೌಹಾರ್ಧತೆ, ನೆಮ್ಮದಿ ಕಾಪಾಡಲು ಮೊದಲ ಆದ್ಯತೆ ನೀಡುತ್ತೇನೆ, ಜೊತೆಗೆ ನಗರಸಭೆ,ಸಿಡಿಎ, ತಾಲ್ಲೂಕು ಕಛೇರಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಮಾಡುವುದರ ಜೊತೆಗೆ ಜನಸ್ನೇಹಿ ಆಡಳಿತ ನೀಡಲು ಕಟಿ ಬದ್ದನಾಗಿದ್ದೇನೆ ಎಂದರು.
ಜೇಮ್ಸ್ ಡಿಸೋಜ ಸ್ವಾಗತಿಸಿ, ಎ.ಎಸ್ ಆರಾಧ್ಯ ನಿರೂಪಿಸಿ ಪ್ರಾಸ್ತವಿಕ ನುಡಿಯನ್ನು ಮಹೇಶ್ ನೆರೆವೇರಿಸಿದರು, ನಿರೂಪಿಸಿ ಮಾತನಾಡಿದರು ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಎ.ಸಿ ಕುಮಾರ್, ಶೀಲಾದಿನೇಶ್, ಸ್ಥಳೀಯ ಮುಖಂಡರಾದ ಉಮಾ ಐ.ಬಿ ಶಂಕರ್ sಸಮಿತಿಯ ಜಗಧೀಶ್, ಉಮಾಶಂಕರ್, ದೊಡ್ಡೇಗೌಡ, ಶ್ರೀನಿವಾಸ್, ಸುರೇಶ್, ಕ್ಯಾಂಡಿ ಲೋಬೋ, ಮಂಜುನಾಥ್, ದಿನೇಶ್, ಜಯ್ಯಣ್ನ, ಮಹೇಶ್, ಮಲ್ಲಿಕಾದೇವಿ, ಮೋಹನ್ ಕುಮಾರ್, ಮಂಜುನಾಥ್, ಶಿವಣ್ಣ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!