May 8, 2024

MALNAD TV

HEART OF COFFEE CITY

ಶಾಸಕಿ ನಾಯನ ಮೋಟಮ್ಮನವರೇ ನೀವು ಹೀಗೆ ಮಾಡಿದ್ದು ಎಷ್ಟು ಸರಿ..? ಹೀಗೆ ಅಂದಿದ್ಯಾಕೆ ಸಿಪಿಐ ಮುಖಂಡ

1 min read

ಚಿಕ್ಕಮಗಳೂರು: ಒತ್ತುವರಿದಾರರ ಬಗ್ಗೆ ಮಾತನಾಡುವ ಶಾಸಕಿ ನಾಯನಮೋಟಮ್ಮನವರು ಅವರ ಕ್ಷೇತ್ರದಲ್ಲಿ ಹಲವಾರು ಜನ ನಿವೇಶನ ರಹಿತರಿದ್ದು ಈ ಕುರಿತಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಯಾಕೆ ತಂದಿಲ್ಲ ಎಂದು ಸಿಪಿಐ ರಾಜ್ಯಮಂಡಳಿ ಸದಸ್ಯ ಹೆಚ್.ಎಂ. ರೇಣುಕಾರಾಧ್ಯಾ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ಈ ಸರ್ಕಾರವನ್ನು ಆಡಳಿತಕ್ಕೆ ತರಲು ನಾವು ಕಾರಣಕರ್ತರಾಗಿದ್ದೇವೆ. ಈ ಸರ್ಕಾರದಿಂದ ಒಂದು ಒಳ್ಳೆಯ ಆಶ್ರಯ ಕಟ್ಟಿಕೊಳ್ಳುತ್ತೇವೆ ಎಂದು ಕೊಂಡಿದ್ದೇವು, ಆದರೆ ಜನಪ್ರತಿನಿಧಿಗಳು ವಿರೋಧಿ ನಡೆ ತೋರುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಮೂಲ ಸಿದ್ಧಾಂತಕ್ಕೆ ಪೂರಕವೊ, ವಿರುದ್ಧವೋ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಖಚಿತಪಡಿಸಬೇಕು ಎಂದರು.
ಚಿಕ್ಕಮಗಳೂರು ತಾಲ್ಲೂಕಿನದ್ಯಾಂತಹ ಇರುವ ವಸತಿ ಮತ್ತು ನಿವೇಶನ ರಹಿತರಿಗೆ ವಸತಿ ಮತ್ತು ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಗ್ರಹ ಹಮ್ಮಿಕೊಂಡಿದ್ದು, ಈ ಕುರಿತಾಗಿ 2 ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಕೂಡ ಮಾಡಿದ್ದೇವೆ. ಆದರೂ ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಕೆಲಸವನ್ನು ಶಾಸಕರು ಏಕೆ ಮಾಡುತ್ತಿಲ್ಲ, ಹೀಗೆ ಮಾಡುತ್ತಿರುವುದು ಎಷ್ಟು ಸರಿ ಅಲ್ಲವೇ ಅಂದರು. ಅಷ್ಟೇ ಅಲ್ಲದೆ ಇಲ್ಲಿ ಧರಣಿ ಮಾಡುತ್ತಿರುವ ಹೆಚ್ಚು ನಿವೇಶನ ರಹಿತರಿರು ಅವರ ಕ್ಷೇತ್ರದವರೇ ಆಗಿದ್ದಾರೆ. ಅವರಾಗಲಿ ಅವರಿಗೆ ಸಂಬಂಧಿಸಿದಂತಹ ಅಧಿಕಾರಿಗಳಾಗಲಿ ಯಾರು ಕೂಡ ಬಂದು ಏನು ಅಂತ ಸೌಜನ್ಯಕ್ಕೂ ವಿಚಾರಿಸಿಲ್ಲ ಎಂದು ಆರೋಪಿಸಿದರು.
ಅ. 9 ರಂದು ಚಿಕ್ಕಮಗಳೂರು ತಾಲ್ಲೂಕಿನದ್ಯಾಂತಹ ಇರುವ ವಸತಿ ಮತ್ತು ನಿವೇಶನ ರಹಿತರಿಗೆ ವಸತಿ ಮತ್ತು ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ಸತ್ಯಗ್ರಹಕ್ಕೆ ರೈತ ಸಂಘಟನೆ, ಬಹುಜನ ಸಮಾಜ ಪಾರ್ಟಿ, ಹಾಗೂ ಇತರ ಪ್ರಗತಿಪರ ಸಂಘಟನೆಗಳು ಬೆಂಬಲಿಸಿದವು. ಸತ್ಯಗ್ರಹ ಪ್ರಾರಂಭವಾದ ಅಂದಿನಿಂದ ಪ್ರಮುಖವಾಗಿ ಮಲ್ಲಂದೂರು, ಅಲ್ಲೂರು, ಬಸ್ಕಲ್, ಜಾಗರ, ಹೊಸಪೇಟೆ ಮತ್ತು ಕಡವಂತಿ ಮುಂತಾದ ಕಡೆಯಿಂದ ನೂರಾರು ವಸತಿ ರಹಿತರು ಮತ್ತು ಪಕ್ಷದ ಕಾರ್ಯಕರ್ತರು ಸಹ ಭಾಗವಹಿಸಿದ್ದರು.
ಅ. 10 ರಂದು ಚಿಕ್ಕಮಗಳೂರು ವಿಧಾನ ಸಭಾಕ್ಷೇತ್ರದ ಶಾಸಕ ಹೆಚ್ ಡಿ ತಮ್ಮಯ್ಯನವರು ಚಳುವಳಿ ಸ್ಥಳಕ್ಕೆ ಬಂದು ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಅದರೆ ಅಧಿಕಾರಿ ವರ್ಗದಿಂದ ಸೂಕ್ತ ಮನ್ನಣೆ ದೊರಕದ ಕಾರಣ ಚಳುವಳಿಯನ್ನು ಮುಂದುವರೆಸಲಾಗಿತ್ತು. ನಂತರ ಸಹಾಯಕ ಆಯುಕ್ತರ (Ac) ಕಛೇರಿಯಲ್ಲಿ ತಹಶೀಲ್ದಾರು, ಅರಣ್ಯ ಅಧಿಕಾರಿಗಳು, ಸರ್ವೆ ಯವರು ಮತ್ತು ನಮ್ಮ ಪಕ್ಷದ ನಾಯಕರ ಸಮಕ್ಷಮದಲ್ಲಿ ಒಂದು ತಿಂಗಳೊಳಗೆ ಮಲ್ಲಂದೂರು, ಬಸ್ಕಲ್, ಅಲ್ಲೂರು, ಹೊಸಪೇಟೆ, ಜಾಗರ ಮತ್ತು ಕಡವಂತಿ ಮುಂತಾದ ಪಂಚಾಯಿತಿಗಳಲ್ಲಿ ಇರುವಂತಹ ನಿವೇಶನ ರಹಿತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಉಳಿದ ಭಾಗಗಳಲ್ಲಿ ನಿವೇಶನ ರಹಿತರಿಗೆ ಜಾಗವನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಹಾಯಕ ಆಯುಕ್ತರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ ಹಾಗೂ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೇಸ್ ಪಕ್ಷಕ್ಕೆ ಹೆಚ್ಚಿನ ಜವಾಬ್ದಾರಿ ಇದ್ದು, ಈ ಸರ್ಕಾರವು ಬಡವರ ಪರವಾದ ಸರ್ಕಾರವೆಂದು ಸಾಬೀತಾಗಲು ಎಲ್ಲಾ ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶವನ್ನು ನೀಡಲು ಮುಂದಾಗಬೇಕೆಂದು ಎಂದು ಭಾರತ ಕಮ್ಯೂನಿಸ್ಟ್ ಪಕ್ಷವು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಈ ಹೋರಾಟವನ್ನು ಇನ್ನಷ್ಟು ಚುರುಕು ಗೊಳಿಸಲು ಪಕ್ಷ ಸಿದ್ಧಗೊಳಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮುಖಂಡರಾದ ರಾಧಾ ಸುಂದರೇಶ್, ಪಕ್ಷದ ತಾಲೂಕು ಕಾರ್ಯದರ್ಶಿ ರಮೇಶ್ ಕೆರಮಕ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!