April 29, 2024

MALNAD TV

HEART OF COFFEE CITY

ಬರ ಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹ

1 min read

ಚಿಕ್ಕಮಗಳೂರು: ಮಳೆ ಬರದ ಹಿನ್ನೆಲೆ ಇಡೀ ಜಿಲ್ಲೆಯನ್ನ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತ ಸಂಘ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಒತ್ತಾಯಿಸಿದರು.
ನಗರದ ಜಿಲ್ಲಾ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರವು ಮೊದಲು 124 ತಾಲ್ಲೂಕಿನಲ್ಲಿ ಜಿಲ್ಲೆಯ ಕಡೂರು ಮತ್ತು ಅಜ್ಜಂಪುರವನ್ನು ಬರಗಾಲ ಪೀಡಿತ ತಾಲೂಕು ಎಂದು ಸೇರಿಸಿದರು. ಇನ್ನುಳಿದ ತಾಲೂಕುಗಳನ್ನ ಕೈಬಿಟ್ಟಿದ್ದರು, ಆನಂತರದಲ್ಲಿ ಕೊಪ್ಪ, ಶೃಂಗೇರಿ, ಎನ್. ಆರ್.ಪುರ ತಾಲೂಕುಗಳನ್ನು ಸಾಧಾರಣ ಬರಗಾಲ ಪ್ರದೇಶ ಎಂದು ಘೋಷಿಸಿದರು. ಈಗ ಮೂಡಿಗೆರೆ ಮತ್ತು ತರೀಕೆರೆಯನ್ನು ಅದೇ ಗುಂಪಿಗೆ ಸೇರಿಸಿದ್ದಾರೆ. ಆದರೆ ಚಿಕ್ಕಮಗಳೂರು ಅದೆಲ್ಲಾವುದಕ್ಕಿಂತ ಅತಿ ಹೆಚ್ಚು ಬರಗಾಲದ ಬಿಸಿ ತಟ್ಟಿರುವ ಪ್ರದೇಶವಾಗಿದೆ. ಮಳೆಯ ಅಭಾವದಿಂದಾಗಿ ಚಿಕ್ಕಮಗಳೂರಿನ ಲಕ್ಯ ಅಂಬಳೆ, ಕಸಬಾ ಹೋಬಳಿಯಲ್ಲಿ ರೈತರು ಯಾವುದೇ ಬೆಳೆಯನ್ನ ಬೆಳೆಯದೆ ಕಂಗಾಲಾಗಿದ್ದಾರೆ. ಮಲೆನಾಡಿನಲ್ಲಿ ನದಿ ಮೂಲಗಳು ಬತ್ತಿ ಹೋಗುತ್ತಿವೆ. ಅದೇ ರೀತಿ ಬಯಲುಸೀಮೆಯಲ್ಲಿ ಕೆರೆಕಟ್ಟೆಗಳು ಬತ್ತಿ ಹೋಗುತ್ತಿವೆ. ಕುಡಿಯುವ ನೀರಿನ ಅಭಾವ ಸೃಷ್ಟಿ ಆಗಬಹುದೆಂದು ರೈತರು ಯೋಚನೆ ಮಾಡುತ್ತಿದ್ದಾರೆ.
ಬೆಳೆಯಿಲ್ಲ, ಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ ಇಂತಹ ಸಂದರ್ಭದಲ್ಲಿ ತಾರತಮ್ಯ ಮಾಡದೆ ಇಡೀ ಜಿಲ್ಲೆಯನ್ನ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಬರಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು ಜೊತೆಗೆ ಸರ್ಕಾರ ರೈತರಿಗೆ ನೆರವಾಗಬೇಕು ಎಂದ ಅವರು ರೈತರ ಬೆಳೆ ಹಾನಿಗೆ ಬೆಳೆ ಪರಿಹಾರ ಕೊಡಬೇಕು ಸಾಲಮನ್ನ ಮಾಡಬೇಕು ಎಂದರು.
ವಿದ್ಯುತ್ತನ್ನು ಸಮರ್ಪಕವಾಗಿ ಕೊಟ್ಟಿದ್ದರೆ ವಾಣಿಜ್ಯ ಬೆಳೆಯನ್ನ ಬೆಳೆಯುತ್ತಿದ್ದರು ಈಗ ಆಹಾರ ಬೆಳೆಯನ್ನ ಸಹ ಬೆಳೆಯಲು ವಿದ್ಯುತ್ ಇಲ್ಲ. ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರೈತರು ಯಾವುದೇ ಬೆಳೆಗಳನ್ನು ಬೆಳೆಯಲು ಆಗದೆ ರೈತರ ಬದುಕು ಹೈರಾಣಾಗಿದೆ. ಥರ್ಮಲ್, ವಿಂಡ್ ಮಿಲ್, ಸೋಲಾರ್ ಮೂಲಗಳಿಂದ ವಿದ್ಯುತ್ ಪಡೆಯುತ್ತಿದ್ದರು ವಿದ್ಯುತ್ ಅನ್ನು ಸಮರ್ಪಕವಾಗಿ ನೀಡದೆ ಬೇಡಿಕೆ ಜಾಸ್ತಿ ಇದೆ ವಿದ್ಯುತ್ ಪೂರೈಕೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಹೆಚ್ಚುವರಿಯಾಗಿ ಬೇಕಾಗಿರುವಂತಹ ವಿದ್ಯುತ್ತನ್ನು ಪಕ್ಕದ ರಾಜ್ಯ ಅಥವಾ ಜಿಲ್ಲೆಗಳಿಂದ ಕೊಂಡುಕೊಳ್ಳಬಹುದಿತ್ತು ಆದರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಿದ್ಧತೆಯನ್ನ ರಾಜ್ಯ ಸರ್ಕಾರ ಮಾಡಿಕೊಂಡಿಲ್ಲ ಇದರಿಂದ ರೈತರಿಗೆ ದ್ರೋಹವಾಗುತ್ತಿದೆ. ಆದ್ದರಿಂದ ಅಕ್ಟೋಬರ್ 19ರಂದು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಮುಖಂಡರು ಎಚ್ಚರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!