May 5, 2024

MALNAD TV

HEART OF COFFEE CITY

ಭಿಕ್ಷಾಟನೆ ಪ್ರತಿಭಟನೆಗೆ ಸಹಕಾರ ಸಾರಿಗೆ ನೌಕರರ ತೀರ್ಮಾನ

1 min read

 

ಚಿಕ್ಕಮಗಳೂರು: ಕೊಪ್ಪ ಸಹಕಾರ ಸಾರಿಗೆ ಕಚೇರಿಗೆ ಹಾಕಿರುವ ಬೀಗವನ್ನು ತೆರವುಗೊಳಿಸಿ ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶಮಾಡಿಕೊಡದಿದ್ದಲ್ಲಿ ಭಿಕ್ಷಾಟನೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಟ್ರಾನ್ಸ್‍ಪೋರ್ಟ್ ಮತ್ತು ಜನರಲ್ ಮಜ್ದೂರು ಸಂಘದ ಅಧ್ಯಕ್ಷ ಎಚ್.ಆರ್.ಸಂಜೀವ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಸಂಘದ ಮನವಿಗೆ ಸ್ಪಂದಿಸದಿದ್ದರೆ 23 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಸರದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಟಿಸಿಎಸ್ ಸಂಸ್ಥೆ ನಷ್ಟದಿಂದ ಮುಚ್ಚಿದ್ದಲ್ಲ, ಆಡಳಿತ ಮಂಡಳಿಯ ಬೇಜಾವಾಬ್ದಾರಿತನಕ್ಕೆ ಎಂದರು.

ಸಹಕಾರ ಸಾರಿಗೆ ಬಾಗಿಲು ಮುಚ್ಚಿ ಇಂದಿಗೆ 2 ವರ್ಷವಾಯಿತು. ಕಳೆದ ಎರಡು ವರ್ಷದಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ ಅಧಿಕಾರಿಗಳು, ಜನಪ್ರತಿನಿಧಿಗಳು ಬೆಂಬಲ ಕೊಡಲಿಲ್ಲ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಿಯೋಗ ತೆರಳಿ ಮನವಿ ಸಲ್ಲಿಸಲಾಯಿತು ಪ್ರಯೋಜವಾಗಲಿಲ್ಲವೆಂದರು.
ಸಹಕಾರ ಸಾರಿಗೆಯನ್ನು 6 ಬಸ್ಸಿನಿಂದ ಆರಂಭಿಸಿ 75 ಬಸ್‍ಗಳಿಗೆ ತಂದು ನಿಲ್ಲಿಸಲಾಯಿತು. ಸೋರಿಕೆ ತಡೆಯಲು ಆಡಳಿತ ಮಂಡಳಿ ವಿಫಲವಾಗಿದ್ದು, ಸ್ವಯಂ ಕೃತ ಅಪರಾಧದಿಂದ ಕಚೇರಿ ಬಾಗಿಲು ಮುಚ್ಚಬೇಕಾಯಿತು. ಕಾರ್ಮಿಕರಿಗೆ ನ್ಯಾಯ ಸಿಗಬೇಕು. ಲೆಕ್ಕಚಾರದ ಹಣ ನೌಕರರಿಗೆ ಸಂದಾಯವಾಗಬೇಕಿದೆ ಎಂದು ತಿಳಿಸಿದರು.
ಟಿಸಿಎಸ್ ಬಾಗಿಲು ಮುಚ್ಚಿದ್ದರಿಂದ 300 ಕುಟುಂಬಗಳು ಬೀದಿಗೆ ಬಂದಿವೆ. ಮಕ್ಕಳಶಾಲಾ ಶುಲ್ಕ ಪಾವತಿಸಲಾಗುತ್ತಿಲ್ಲ, ಮಕ್ಕಳ ಮದುವೆಮಾಡಲಾಗುತ್ತಿಲ್ಲ, ಕೆಲವರು ಕೂಲಿಕೆಲಸಕ್ಕೆ ಹೋಗಿ ಸಂಸಾರ ಸಾಗಿಸುತ್ತಿದ್ದು, ಕೂಲಿಯೂ ಸರಿಯಾಗಿ ಸಿಗುತ್ತಿಲ್ಲ, ಭವಿಷ್ಯನಿಧಿ ಪಡೆಯಲು ಮುಂದಾದರೆ ಬ್ಲಾಕ್ ಆಗಿದೆ. ಬೇರೆವಾಹನಗಳಿಗೆ ಚಾಲಕರಾಗಿ ಮುಂದಾದರೆ ಲೈಸನ್ಸ್‍ಗಳು ಕಚೇರಿಯಲ್ಲಿದ್ದು, ಅದಕ್ಕೆ ಬೀಗ ಜಡಿಯವಾಗಿದೆ ಎಂದು ನೊಂದು ನುಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರ ಬಳಿ 7-8 ಬಾರಿ ತೆರಳಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರಗಜ್ಞಾನೇಂದ್ರ ಅವರ ಬಳಿ ತೆರಳಿ ಕೇಳಿದರೆ ಜಿಲ್ಲಾಧಿಕಾರಿ ಸಮಸ್ಯೆ ಬಗೆಹರಿಸುತ್ತಾರೆಂದು ಹೇಳುತ್ತಾರೆ. ಆದರೆ, ಜಿಲ್ಲಾಧಿಕಾರಿಗಳು ಆಸಕ್ತಿ ತೋರುತ್ತಿಲ್ಲ, ಸಂಸ್ಥೆಗೆ ಭೇಟಿ ನೀಡಿಲ್ಲವೆಂದು ಆರೋಪಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!