May 5, 2024

MALNAD TV

HEART OF COFFEE CITY

ಮೂಡಿಗೆರೆ: ಹಿಜಾಬ್ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ

1 min read

ಮೂಡಿಗೆರೆ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಜಾಬ್‍ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಅವಕಾಶನೀಡಲು ನಿರಾಕರಿಸಲಾಗಿದ್ದು, ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿದ್ದಾರೆ.
ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿದ್ದರಿಂದ ಆಡಳಿತ ಮಂಡಳಿಯವರು ಶಾಲೆಯೊಳಗೆ ತೆರಳಲು ಅವಕಾಶನೀಡಲಿಲ್ಲ ಹಾಗಾಗಿ ಅಲ್ಲಿಗೆ ಬಂದ ಪೋಷಕರು ವಿದ್ಯಾರ್ಥಿಗಳ ಪರವಾಗಿ ಮಾತನಾಡಲು ಮುಂದಾಗಿದ್ದು, ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಸ್ವಲ್ಪ ಹೊತ್ತು ವಾಗ್ವಾದ ನಡೆದಿದೆ.

ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕಿದೆ ಹಾಗಾಗಿ ಹಿಜಾಬ್ ಧರಿಸಿಬಂದ ವಿದ್ಯಾರ್ಥಿಗಳಿಗೆ ಶಾಲೆಯ ತರಗತಿಯೊಳಗೆ ಪ್ರವೇಶಿಸಲು ಅವಕಾಶವಿಲ್ಲ ಒಂದು ವೇಳೆ ಹಿಜಾಬ್ ತೆಗೆದರೆ ತರಗತಿಗೆ ತರಳಲು ಅವಕಾಶಮಾಡಿಕೊಡಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಬಳಿಕ ಪೋಷಕರು, ಆಡಳಿತ ಮಂಡಳಿಯವರು ಪ್ರತ್ಯೇಕ ಸಭೆ ನಡೆಸಿ, ಹಿಬಾಬ್ ವಿಚಾರದಲ್ಲಿ ಅಂತಿಮ ತೀರ್ಪು ಹೊರಬೀಳುವ ತನಕ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನೆ ಪಾಲಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಶಾಲೆಯಲ್ಲಿ ಪ್ರತ್ಯೇಕ ಕೊಠಡಿ ನೀಡಬೇಕು. ವಿದ್ಯಾರ್ಥಿನಿಯರು ಅಲ್ಲಿ ಹಿಜಾಬ್ ಬಿಚ್ಚಿಟ್ಟು ತರಗತಿಗಳಲ್ಲಿಗೆ ತರಳುತ್ತಾರೆಂದು ಪೋಷಕರು ತಿಳಿಸಿದ್ದು, ಕೊಠಡಿ ಕಲ್ಪಿಸುವ ಭರವಸೆ ನೀಡಲಾಗಿದೆ. ಇಂದು ಹಿಜಾಬ್‍ಧರಿಸಿ ಶಾಲೆಗೆ ಬಂದಿದ್ದವರು ಪ್ರವೇಶ ನೀಡದ್ದರಿಂದ ಮನೆಗೆ ವಾಪಸ್ಸಾದರು. ನಾಳೆ ಹಿಬಾಬ್ ತೆಗೆದು ತರಗತಿಗೆ ಬರುವುದಾಗಿ ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!